More

  ವಿಶ್ವದ ಅತ್ಯಂತ ಉದ್ದ ತಲೆಗೂದಲು: ಗಿನ್ನೆಸ್​ ದಾಖಲೆ ಬರೆದ ಗುಜರಾತ್​ ಹುಡುಗಿಯ ತಲೆಗೂದಲಿನ ಉದ್ದವೆಷ್ಟು?

  ನವದೆಹಲಿ: ವಿಶ್ವದಲ್ಲೇ ಅತ್ಯಂತ ಉದ್ದ ತಲೆಗೂದಲು ಹೊಂದಿದ ಹುಡುಗಿ ಎಂಬ ಗಿನ್ನೆಸ್​ ದಾಖಲೆಯನ್ನು ಭಾರತೀಯ ಮೂಲದ ನೀಲಂಶಿ ಪಟೇಲ್(17) ಕಳೆದ ಹತ್ತು ವರ್ಷಷದಿಂದ ತನ್ನ ಹೆಸರಿಗೆ ಉಳಿಸಿಕೊಂಡಿದ್ದಾಳೆ.

  ಗುಜರಾತಿನ ಮೊಡಸಾ ನಗರದ ನಿವಾಸಿಯಾಗಿರುವ ನೀಲಂಶಿ ಪಟೇಲ್ ತನ್ನ ಹೆಸರಿನಲ್ಲಿ ಇದ್ದ ಗಿನ್ನೆಸ್ ದಾಖಲೆಯನ್ನು ಮುರಿದ್ದಾರೆ. ಡಿಸೆಂಬರ್​ 2018ರಲ್ಲಿ 5 ಅಡಿ 6 ಇಂಚಿನ ಮೂಲಕ ದಾಖಲೆ ಬರೆದಿದ್ದರು. ಇದೀಗ 6 ಅಡಿ 2 ಇಂಚಿನ ಮೂಲಕ ಹಿಂದಿನ ತಮ್ಮ ದಾಖಲೆಯನ್ನೇ ಮುರಿದಿದ್ದಾರೆ.

  ಈ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿರುವ ನೀಲಂಶಿ ತಂದೆ, ಮಗಳ ನೀಳವಾದ ಕೂದಲೇ ಆಕೆಯನ್ನು ಸ್ಥಳೀಯ ಸೆಲಿಬ್ರಿಟಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸುವಂತೆ ಮಾಡಿದೆ ಎಂದಿದ್ದಾರೆ.

  ನೀಲಂಶಿಯನ್ನು ಶಾಲಾ ಸಹಪಾಠಿಗಳು ‘ರಪಂಜೆಲ್​'( ಬಾಲಿವುಡ್​ನ ಟ್ಯಾಂಗಲ್ಡ್​ ಚಿತ್ರದ ಪಾತ್ರದ ಹೆಸರು) ಹೆಸರಿನಿಂದ ಕರೆಯುತ್ತಾರೆ. ಹೇರ್​ ಸಲೂನ್​ನಲ್ಲಿ ಎದುರಿಸಿದ ಕಹಿ ಅನುಭವದ ಬಳಿಕ ಅಂದರೆ 11 ವರ್ಷದಿಂದ ನೀಲಂಶಿ ಕೂದಲಿಗೆ ಕತ್ತರಿ ಹಾಕಿಲ್ಲ.

  ಘಟನೆ ಬಗ್ಗೆ ವಿವರಿಸಿರುವ ನೀಲಂಶಿ, ಆರು ವರ್ಷದವಳಿದ್ದಾಗ ಸ್ಥಳೀಯ ಸಲೂನ್​ನಲ್ಲಿ ನಾನು ತುಂಬಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದೆ. ಅಂದಿನಿಂದ ನನ್ನ ಕೂದಲು ಬಗ್ಗೆ ನಾನು ತುಂಬಾ ಅರಿತುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

  ಎಲ್ಲ ಹುಡುಗಿಯರ ತರ ನಾನು ಪ್ರತಿ ವಾರ ನನ್ನ ಕೂದಲನ್ನು ಶುಚಿಗೊಳಿಸುತ್ತೇನೆ. ವಾರಕ್ಕೆ ಎರಡು ಬಾರಿ ಎಣ್ಣೆಯನ್ನು ಬಳಸುತ್ತೇನೆ. ಬಿಸಿಲು ಅಥವಾ ಹೇರ್​ಡ್ರೈಯರ್​ ನಿಂದ ಕೂದಲನ್ನು ಒಣಗಿಸುತ್ತೇನೆ. ಆಟವಾಡುವಾಗ ನನ್ನ ಕೂದಲನ್ನು ಬನ್​ ಮಾದರಿಯಲ್ಲಿ ಕಟ್ಟಿಕೊಳ್ಳುತ್ತೇನೆ. ಆದರೆ, ಸ್ವಿಮ್ಮಿಂಗ್​ ಮಾಡುವಾಗ ತುಂಬಾ ತೊಂದರೆ ಕೊಡುತ್ತದೆ ಎಂದು ನೀಲಂಶಿ ಹೇಳಿಕೊಂಡಿದ್ದಾರೆ. ಆಕೆಗೆ ಇಂಜಿನಿಯರ್​ ಆಗಬೇಕೆಂಬ ಕನಸಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts