More

    ಸ್ನೇಹಿತನ ಬರ್ತ್​ಡೇ ಪಾರ್ಟಿಗೆ ಹೋದವ ಸಮುದ್ರಕ್ಕೆ ಬಿದ್ದ! ಬದುಕುವುದಕ್ಕೆ ಆತ ಮಾಡಿದ್ದೇನು ಗೊತ್ತಾ?

    ದುಬೈ: ಹಡಗಿನಲ್ಲಿ ಪಾರ್ಟಿ ಮಾಡುವುದು ಅನೇಕರ ಕನಸು. ಅದೇ ರೀತಿ ಹಡಗಿನಲ್ಲಿ ಪಾರ್ಟಿ ಮಾಡಲು ಹೋದ ಭಾರತೀಯ ಮೂಲದ ಯುವಕನೊಬ್ಬ ದುಬೈನ ಸಮುದ್ರದಲ್ಲಿ ಬಿದ್ದು ಒದ್ದಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ. 2 ಗಂಟೆಗಳ ಕಾಲ ಈಜಿದ ಪ್ರತಿಫಲ ಯುವಕ ಯುಮದೇವನಿಂದ ಬಚಾವಾಗಿದ್ದಾನೆ.

    ಇದನ್ನೂ ಓದಿ: ಸ್ನಾನ ಮಾಡುವುದನ್ನು ವಿಡಿಯೋ ಮಾಡಿ, ರೇಪ್​ ಮಾಡಿದ ಕೌನ್ಸಿಲರ್​! ಸ್ನೇಹಿತನಿಂದಲೂ ರೇಪ್​ ಮಾಡಿಸಿದ!

    ರಜ್ವೀರ್​ ವಕಾನಿ (27) ಭಾರತೀಯ ಮೂಲದವನಾಗಿದ್ದು, ದೂರದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಆತನ ಸ್ನೇಹಿತನ ಜನ್ಮದಿನವಿತ್ತಂತೆ. ಅದಕ್ಕೆಂದು ಸ್ನೇಹಿತರೆಲ್ಲ ಸೇರಿ ಹಡಗೊಂದನ್ನು ಬಾಡಿಗೆ ಪಡೆದು ಅದರಲ್ಲಿ ಪಾರ್ಟಿ ಆಯೋಜಿಸಿದ್ದಾರೆ. ಪಾರ್ಟಿ ನಡೆಯುತ್ತಿದ್ದ ಹಡಗು ದುಬೈ ಕರಾವಳಿ ತೀರದಿಂದ ಹೊರಟು ಸಾಗಿದೆ. ಪಾರ್ಟಿ ನಡೆಯುತ್ತಿರುವಾಗ ಮೇಲಿನ ಮಹಡಿಗೆ ಹೋಗಿ ಎಂಜಾಯ್​ ಮಾಡುವ ನಿರ್ಧಾರ ಮಾಡಿದ್ದಾರೆ. ಒಬ್ಬೊಬ್ಬರಾಗಿ ಮೇಲೆ ಹತ್ತಿ ಹೋಗಿದ್ದಾರೆ. ಕೊನೆಯಲ್ಲಿದ್ದ ರಜ್ವೀರ್​ ಮೇಲೆ ಹತ್ತುವಾಗ ಕಾಲು ಜಾರಿದ್ದು, ಆತ ಸೀದಾ ಸಮುದ್ರದೊಳಗೆ ಬಿದ್ದಿದ್ದಾನೆ. ಸಹಾಯಕ್ಕಾಗಿ ಕೂಗಿದ್ದಾನಾದರೂ ಯಾರಿಗೂ ಅದು ಕೇಳಿಸಿಲ್ಲ.

    ಇದನ್ನೂ ಓದಿ: ಐಐಟಿ ಇಂಜಿನಿಯರಿಂಗ್​​ ಪದವೀಧರ ಈಗ ಭಿಕ್ಷುಕ! ವಿದೇಶದಲ್ಲಿ ವ್ಯಾಸಂಗ ಮಾಡಿದವ ಬೀದಿಗೆ ಬಂದಿದ್ದೇಗೆ?

    ತಾನಿದ್ದ ಹಡಗು ಸಹಾಯಕ್ಕೆ ಬರಬಹುದು ಎಂದು ಕೆಲ ಸಮಯ ಕಾದಿದ್ದಾನೆ. ಆದರೆ ಹಡಗಿನ ಸಿಬ್ಬಂದಿ ಈತನನ್ನು ಗಮನಿಸದೆಯೇ ಮುಂದೆ ಸಾಗಿದ್ದಾರೆ. ನಂತರ ಆತ ಸುತ್ತ ಮುತ್ತ ನೋಡಿದ್ದಾನೆ. ದೂರದಲ್ಲೆಲ್ಲೋ ಒಂದು ಸಣ್ಣ ಲೈಟ್​ ಕಾಣಿಸಿಕೊಂಡಿದೆ. ಗಟ್ಟಿ ಮನಸ್ಸು ಮಾಡಿ ಆ ಲೈಟ್​ನತ್ತ ಈಜಲಾರಂಭಿಸಿದ್ದಾನೆ. ಬರೋಬ್ಬರಿ 2 ಗಂಟೆ ಈಜಿದ ನಂತರ ಆತನಿಗೆ ದಡ ಸಿಕ್ಕಿದೆ. ಅಲ್ಲಿದ್ದ ಮೀನುಗಾರರು, ಆತನನ್ನು ರಕ್ಷಿಸಿದ್ದು, ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತನ ಸ್ನೇಹಿತರೂ ಬಂದಿದ್ದು, ಇದೀಗ ರಜ್ವೀರ್​ ಸುರಕ್ಷಿತವಾಗಿ ಮನೆಯಲ್ಲಿದ್ದಾನೆ. ಘಟನೆಯಿಂದಾಗಿ ಆತನ ಫೋನು ಮತ್ತು ಕ್ಯಾಮೆರಾ ನೀರುಪಾಲಾಗಿದೆ. (ಏಜೆನ್ಸೀಸ್​)

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts