More

  ಗಣರಾಜ್ಯೋತ್ಸವ| ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಬಾರಿ ಗಣರಾಜ್ಯೋತ್ಸವ ಆಚರಣೆ ಇಲ್ಲ!

  ಬೀಜಿಂಗ್: ಚೀನಾದಲ್ಲಿರುವ ಇಂಡಿಯನ್ ಎಂಬೆಸ್ಸಿಯಲ್ಲಿ ಈ ವರ್ಷ ಗಣರಾಜ್ಯೋತ್ಸವ ಆಚರಣೆ ಇಲ್ಲ. ಭಾರತೀಯ ರಾಯಭಾರ ಕಚೇರಿ ಶುಕ್ರವಾರ ಈ ಕುರಿತು ಪ್ರಕಟಣೆಯನ್ನೂ ಹೊರಡಿಸಿದೆ.

  ಚೀನಾದಾದ್ಯಂತ ಕೊರೊನವೈರಸ್​ ಸೋಂಕು ವ್ಯಾಪಿಸಿದ್ದು, ಈ ವರೆಗೆ 25 ಜನ ಮೃತಪಟ್ಟಿದ್ದಾರೆ. 800ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಹೀಗಾಗಿ ಸಾರ್ವಜನಿಕ ಸಮಾರಂಭ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಚೀನಾದ ಆಡಳಿತ ಎಲ್ಲರಿಗೂ ಸೂಚಿಸಿದೆ.

  ಭಾರತೀಯ ರಾಯಭಾರ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಜನವರಿ 26ಕ್ಕೆ ನಿಗದಿಯಾಗಿತ್ತಾದರೂ ಇದೇ ಕಾರಣಕ್ಕೆ ಅದನ್ನು ರದ್ದುಗೊಳಿಸಲಾಗಿದೆ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts