More

    ಭಾರತೀಯ ಆರ್ಥಿಕತೆ ಅನುಭವಿಸಿದ್ದು ಅಸಂಗತವಾದ ಮಂದಗತಿಯೇ ಹೊರತು ಹಿಂಜರಿತವಲ್ಲ ಎಂದು ಸ್ಪಷ್ಟಪಡಿಸಿದ ಐಎಂಎಫ್​ ಮುಖ್ಯಸ್ಥೆ ಕ್ರಿಸ್ಟಲಿನಾ ಜಿಯೋಜಿವಾ

    ವಾಷಿಂಗ್ಟನ್​: ಭಾರತದ ಆರ್ಥಿಕ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತದ ಅರ್ಥವ್ಯವಸ್ಥೆಯ ಕುರಿತಾದ ತಪ್ಪು ತಿಳಿವಳಿಕೆ ಹೋಗಲಾಡಿಸಲು ಐಎಂಎಫ್ ಮತ್ತೊಮ್ಮೆ ಸ್ಪಷ್ಟೀಕರಣ ನೀಡಿದ್ದು, ಕಳೆದ ವರ್ಷ ಭಾರತೀಯ ಆರ್ಥಿಕತೆ ಅನುಭವಿಸಿದ್ದು ಅಸಂಗತವಾದ ಮಂದಗತಿಯೇ ಹೊರತು ಹಿಂಜರಿತವಲ್ಲ ಎಂದು ಹೇಳಿದೆ.

    ಇಂಟರ್​ ನ್ಯಾಷನಲ್ ಮಾನಿಟರಿ ಫಂಡ್​(ಐಎಂಎಫ್​​)ನ ಮ್ಯಾನೇಜಿಂಗ್ ಡೈರೆಕ್ಟರ್​ ಕ್ರಿಸ್ಟಲಿನಾ ಜಿಯೋರ್ಜಿವಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, 2019ರಲ್ಲಿ ಭಾರತದ ಆರ್ಥಿಕತೆ ಖಚಿತವಾಗಿಯೂ ಅಸಂಗತವಾದ ಮಂದಗತಿಯನ್ನು ಎದುರಿಸಿತ್ತು. ಹೀಗಾಗಿ ನಾವು ಈ ಮೊದಲು ಅಂದಾಜಿಸಿದ್ದ ಬೆಳವಣಿಗೆ ಮುನ್ನೋಟವನ್ನು ಕಳೆದ ವರ್ಷ ನಾಲ್ಕು ಶೇಕಡ ಪರಿಷ್ಕರಿಸಬೇಕಾಯಿತು. 2020ರಲ್ಲಿ ನಾವು ಶೇಕಡ 5.8 ಬೆಳವಣಿಗೆ ದರವನ್ನು ನಿರೀಕ್ಷಿಸುತ್ತಿದ್ದೇವೆ. 2021ರಲ್ಲಿ ಇದು ಏರಿಕೆ ದಾಖಲಿಸುವ ನಿರೀಕ್ಷೆ ಇದ್ದು ಶೇಕಡ 6.5 ಬೆಳವಣಿಗೆ ದರ ತಲುಪಲಿದೆ ಎಂದು ಹೇಳಿದ್ದಾರೆ.

    ಬ್ಯಾಂಕಿಂಗೇತರ ಹಣಕಾಸ ಸಂಸ್ಥೆಗಳು ಎದುರಿಸುತ್ತಿರುವ ಸಂಕಷ್ಟವೇ ಈ ಮಂದಗತಿಗೆ ಮುಖ್ಯ ಕಾರಣ ಎಂದ ಅವರು, ಉದಾಹರಣೆಗೆ ಏಕೀಕೃತ ತೆರಿಗೆ ವ್ಯವಸ್ಥೆಯೊಂದಿಗೆ ಬರುವ ಅದೇ ಸಂದರ್ಭದಲ್ಲಿ ಡಿಮಾನಿಟೈಸೇಷನ್ ಕೂಡ ನಡೆಯಿತು.ಈ ನಡೆಗಳು ದೇಶಕ್ಕೆ ದೀರ್ಘಾವಧಿಯಲ್ಲಿ ಫಲ ಕೊಡುವಂಥವಾಗಿದ್ದು,ಕೆಲವೊಮ್ಮೆ ಅಲ್ಪಾವಧಿಗೆ ಅಡ್ಡಿ ಆತಂಕಗಳು ಎದುರಾಗುತ್ತವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅವರು ಹೇಳಿದರು.

    ಭಾರತದ ಫಿಸ್ಕಲ್ ಸ್ಪೇಸ್​ ಬೆಳವಣಿಗೆ ಸಾಲದು. ಹೀಗಾಗಿ ಈ ಸಲದ ಬಜೆಟ್​ನಲ್ಲಿ ಸರ್ಕಾರ ಆ ಬಗ್ಗೆ ಗಮನಹರಿಸಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದೂ ಅವರು ಹೇಳಿದ್ದಾರೆ. ಕ್ರಿಸ್ಟಿಲಿನಾ ಅವರ ಈ ಹೇಳಿಕೆ ಕೇಂದ್ರ ಬಜೆಟ್ 2020ರ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts