More

    ಕೇಂದ್ರ ಬಜೆಟ್​ 2020: 2024-25ಕ್ಕೆ ಮೀನು ರಫ್ತು ವಹಿವಾಟು ವರಮಾನ 1 ಲಕ್ಷ ಕೋಟಿ ರೂಪಾಯಿ ಏರಿಕೆ ಗುರಿ

    ಬೆಂಗಳೂರು: ರಾಷ್ಟ್ರದ ಮೀನು ರಫ್ತು ವಹಿವಾಹಿಟಿನಿಂದ ಬರುವ ವರಮಾನವನ್ನು 2024-25ರ ವೇಳೆಗೆ ಒಂದು ಲಕ್ಷ ಕೋಟಿ ರೂಪಾಯಿಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

    ಮೀನುಗಾರಿಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. 3,477 ಸಾಗರ ಮಿತ್ರ ಹಾಗೂ 500 ಮೀನುಗಾರರ ಸಂಸ್ಥೆಗಳ ಮೂಲಕ ಮೀನುಗಾರಿಕೆ ವಿಸ್ತರಣೆಗೆ ಮುಂದಾಗಿದೆ. ಯೋಜನೆ ಯುವಕರನ್ನು ಒಳಗೊಂಡಿರುತ್ತದೆ. ಇದರಿಂದ 2024-25ರ ವೇಳೆಗೆ ಮೀನುಗಾರಿಕೆ ರಫ್ತು ವಹಿವಾಟನ್ನು 1 ಲಕ್ಷ ಕೋಟಿ

    ರೂಪಾಯಿಗೆ ಏರಿಕೆ ಮಾಡಲು ಸರ್ಕಾರ ಗುರಿ ಹೊಂದಿದೆ ಎಂದು ಅವರು ಬಜೆಟ್​ ಭಾಷಣದಲ್ಲಿ ಹೇಳಿದರು.
    2022-23ರ ವೇಳೆಗೆ ಮೀನು ಉತ್ಪಾದನೆಯನ್ನು 200 ಲಕ್ಷ ಟನ್​ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಪಾಚಿ ಹಾಗೂ ಸಮುದ್ರ ಕಳೆ ಬೆಳೆಸುವುದಕ್ಕೆ ಉತ್ತೇಜನ ನೀಡಲಾಗುವುದು. ಸಮುದ್ರ ಮೀನುಗಾರಿಕೆ, ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ನೀತಿ ರೂಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಮೀನು ಸಂಸ್ಕರಣೆ ಹಾಗೂ ಮಾರುಕಟ್ಟೆಯಿಂದ ಕರಾವಳಿ ಪ್ರದೇಶದ ಯುವಕರಿಗೆ ಅನುಕೂಲವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts