More

    ಆಸ್ಟ್ರೇಲಿಯಾದಲ್ಲಿ ಚಾರಣ ಮಾಡುತ್ತಿದ್ದಾಗ ಜಲಪಾತಕ್ಕೆ ಬಿದ್ದು ಭಾರತೀಯ ಯುವ ವೈದ್ಯೆ ಮೃತ್ಯು

    ವಿಜಯವಾಡ: ಆಂಧ್ರಪ್ರದೇಶದ ವೈದ್ಯೆ ಆಸ್ಟ್ರೇಲಿಯಾದಲ್ಲಿ ಟ್ರೆಕ್ಕಿಂಗ್ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಬ್ರಿಸ್ಬೇನ್‌ನ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್​ ಮಾಡುತ್ತಿದ್ದ ಕೃಷ್ಣಾ ಜಿಲ್ಲೆಯ ವೇಮುರು ಉಜ್ವಲಾ (23) ಸ್ನೇಹಿತರೊಂದಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತನ ಹೊಸ ಫೋಟೋ ಬಿಡುಗಡೆ ಮಾಡಿದ ಎನ್‌ಐಎ

    ಉಜ್ವಲಾ ತನ್ನ ಸ್ನೇಹಿತರೊಂದಿಗೆ ಗೋಲ್ಡ್ ಕೋಸ್ಟ್ ಹಿಂಟರ್‌ಲ್ಯಾಂಡ್‌ನ ಲ್ಯಾಮಿಂಗ್ಟನ್ ರಾಷ್ಟ್ರೀಯ ಉದ್ಯಾನವನದ ಯಾನ್‌ಬಕೂಚಿ ಜಲಪಾತದಲ್ಲಿ ಟ್ರೆಕ್ಕಿಂಗ್ ಮಾಡುತ್ತಿದ್ದರು.

    ಆಕೆ ತನ್ನ ಕ್ಯಾಮೆರಾವನ್ನು ಬೀಳಿಸಿದಾಗ ಮತ್ತು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ 20 ಮೀಟರ್ ಆಳದಪ್ರಪಾತಕ್ಕೆ ಬಿದ್ದಾಗ ಅಪಘಾತ ಸಂಭವಿಸಿದೆ. ಆಕೆಯ ದೇಹವನ್ನು ಹೊರತೆಗೆಯಲು ರಕ್ಷಣಾ ತಂಡಕ್ಕೆ ಆರು ಗಂಟೆ ಬೇಕಾಯಿತು.
    ಉಜ್ವಲಾ ಅವರು ಬಾಂಡ್ ಯೂನಿವರ್ಸಿಟಿ, ಗೋಲ್ಡ್ ಕೋಸ್ಟ್, ಆಸ್ಟ್ರೇಲಿಯಾದಲ್ಲಿ ಎಂಬಿಬಿಎಸ್​ ಪೂರ್ಣಗೊಳಿಸಿದ್ದು, ರಾಯಲ್ ಬ್ರಿಸ್ಬೇನ್ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಆಕೆ ವೈದ್ಯೆಯಾಗುವ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಳು. ಸ್ನಾತಕೋತ್ತರ ಪದವಿ ಮಾಡಲು ಯೋಜಿಸುತ್ತಿದ್ದಳು. ಆದರೆ ದುರಂತ ಆಕೆಯ ಜೀವನವನ್ನು ಕಡಿತಗೊಳಿಸಿತು ಎಂದು ಆಕೆಯ ಸಂಬಂಧಿಕರು ಹೇಳಿದ್ದಾರೆ.

    ಕುಟುಂಬ ಸದಸ್ಯರ ಪ್ರಕಾರ, ಆಕೆಯ ಪಾರ್ಥಿವ ಶರೀರವನ್ನು ಶನಿವಾರ ಆಂಧ್ರಪ್ರದೇಶಕ್ಕೆ ತರಲಾಗುತ್ತಿದೆ. ಉಂಗುಟೂರು ಮಂಡಲದ ಎಲುಕಪಾಡು ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.
    ಉಜ್ವಲ ಅವರ ಪಾಲಕರಾದ ವೇಮೂರು ವೆಂಕಟೇಶ್ವರ್ ರಾವ್ ಮತ್ತು ವೇಮುರು ಮೈಥಿಲಿ ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು.

    ಪ್ಯಾರಾಚೂಟ್ ವಿಫಲ: ಜನರ ಮೇಲೆ ಪರಿಹಾರ ಪೊಟ್ಟಣಗಳು ಬಿದ್ದ 5 ಮೃತ್ಯು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts