More

    ಹಬ್ಬಗಳಿಂದ ಉಳಿದಿದೆ ಭಾರತೀಯ ಸಂಸ್ಕೃತಿ

    ಹಬ್ಬಗಳಿಂದ ಉಳಿದಿದೆ ಭಾರತೀಯ ಸಂಸ್ಕೃತಿ

    ಹುಬ್ಬಳ್ಳಿ: ದೇಶದ ಸಂಸ್ಕೃತಿಗೆ 10 ಸಾವಿರ ವರ್ಷಗಳ ಇತಿಹಾಸವಿದೆ. ಪರಕೀಯರು ನಿರಂತರವಾಗಿ ದಾಳಿ ನಡೆಸಿದರೂ ದೇಶದ ಸಂಸ್ಕೃತಿ ಉಳಿಯಲು ಹಬ್ಬ ಹರಿದಿನಗಳ ಆಚರಣೆಯೇ ಕಾರಣ ಎಂದು ನವಲಗುಂದ ಮಣಕವಾಡ ಶ್ರೀ ಅಭಿನವ ಮೃತ್ಯಂಜಯ ಸ್ವಾಮೀಜಿ ಹೇಳಿದರು.

    ಭಾನುವಾರ ಹುಬ್ಬಳ್ಳಿ ಯುಗಾದಿ ಉತ್ಸವದ ತೋಳನಕೆರೆ ಎದುರಿನ ಮುಖ್ಯ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮಧ್ಯರಾತ್ರಿ ಮದ್ಯ ಕುಡಿದು ಜನೆವರಿ ಒಂದನ್ನು ಸ್ವಾಗತಿಸುವುದು ನಮಗೆ ಹೊಸ ವರ್ಷವಲ್ಲ. ಬೇವು-ಬೆಲ್ಲವನ್ನು ಸಮಾನವಾಗಿ ಸ್ವೀಕರಿಸುವ ಯುಗಾದಿ ಹಬ್ಬವೇ ಹಿಂದುಗಳಿಗೆ ಹೊಸ ವರ್ಷವಾಗಿದೆ ಎಂದರು.

    ಮನೆಯೊಳಗೆ ಆಚರಿಸಲಾಗುತ್ತಿದ್ದ ಯುಗಾದಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವ ಪರಿಪಾಠಕ್ಕೆ ಜಗದೀಶ ಶೆಟ್ಟರ್ ಅವರು ಪ್ರಯತ್ನ ಮಾಡಿರುವುದು ಶ್ಲಾಘನೀಯ. ಶೆಟ್ಟರ್ ಅವರ ಸರಳತೆ, ಸಜ್ಜನಿಕೆ ಅನುಕರಣೀಯವಾದುದು ಎಂದು ಹೇಳಿದರು.

    ಪ್ರತಿ ವರ್ಷ ಆಚರಿಸೋಣ: ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಹುಬ್ಬಳ್ಳಿ ಯುಗಾದಿ ಉತ್ಸವಕ್ಕೆ ಇಷ್ಟೊಂದು ಜನರು ಸೇರುವ ನಿರೀಕ್ಷೆ ಇರಲಿಲ್ಲ. ಇಂದು ಇಲ್ಲಿ ಇತಿಹಾಸ ನಿರ್ವಣವಾಗಿದೆ. ಹಿಂದು ಸಂಸ್ಕೃತಿಯ ಪ್ರಕಾರ ಯುಗಾದಿಯೇ ಹೊಸ ವರ್ಷ ಎಂಬುದನ್ನು ಯುವ ಜನಾಂಗಕ್ಕೆ ನೆನಪು ಮಾಡಿಕೊಡುವ ಅವಶ್ಯಕತೆ ಇದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವೆಲ್ಲ ಬಂದಿರುವುದನ್ನು ನೋಡಿದರೆ ಹುಬ್ಬಳ್ಳಿಯಲ್ಲಿ ಕಲೆ, ಸಂಸ್ಕೃತಿಗೆ ಜನರ ಬೆಂಬಲವಿದೆ ಎಂಬುದನ್ನು ಇದು ತೋರಿಸುತ್ತಿದೆ. ಇದನ್ನು ಪ್ರತಿ ವರ್ಷ ಆಚರಿಸೋಣ. ಹೊಸ ವರ್ಷ (ಯುಗಾದಿ) ನಿಮಗೆಲ್ಲ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.

    ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಪ ಸದಸ್ಯ ಪ್ರದೀಪ ಶೆಟ್ಟರ್ ಪಾಲ್ಗೊಂಡಿದ್ದರು. ವಿಜಯವಾಣಿ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿ ಯುಗಾದಿ ಉತ್ಸವದ ಹೆಸರಿನಲ್ಲಿ ಅದ್ಭುತವಾದ ಕಾರ್ಯಕ್ರಮ ಮಾಡಿದ್ದಾರೆ. ಇಲ್ಲಿಯ ತೋಳನಕೆರೆ ಅಭಿವೃದ್ಧಿ ಕಲ್ಪನೆ ಸಹ ಅವರದ್ದು. ಹಿಂದುಗಳಿಗೆ ಯುಗಾದಿಯೇ ಹೊಸ ವರ್ಷ. ಈ ಸಂದರ್ಭದಲ್ಲಿ ಶೆಟ್ಟರ್ ಅವರು ಹೊಸ ಚಿಂತನೆ ಮಾಡಿದ್ದಾರೆ. ಸದಾ ಕಾಲಕ್ಕೂ ಮೋದಿ ನೇತೃತ್ವದ ಬಿಜೆಪಿಗೆ, ಜಗದೀಶ ಶೆಟ್ಟರ್ ಅವರಿಗೆ ಜನರ ಆಶೀರ್ವಾದ ಇರಲಿ.

    ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts