More

    ಸೇನಾ ಬ್ರಿಗೇಡಿಯರ್​ ಕೊವಿಡ್​-19ನಿಂದ ಸಾವು; ಪತ್ನಿ, ಮಗಳಿಗೂ ಸೋಂಕು

    ಕೋಲ್ಕತ್ತ: ಭಾರತೀಯ ಸೇನೆಯನ್ನು ಕೊವಿಡ್​-19 ಇನ್ನಿಲ್ಲದಂತೆ ಕಾಡುತ್ತಿದೆ. ಸಾವಿರಾರು ಯೋಧರು ಕೊವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಇದೀಗ ಸೇನೆಯ ಬ್ರಿಗೇಡಿಯರ್​ ಓರ್ವರು ಕರೊನಾದಿಂದ ಮೃತಪಟ್ಟಿದ್ದಾರೆ.

    ಪೂರ್ವ ಕಮಾಂಡ್​​ನ ವ್ಯಾಪ್ತಿಯ ಫೋರ್ಟ್​ ವಿಲಿಯಮ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ರಿಗೇಡಿಯರ್​ ಬಿಕಾಸ್​ ಸನ್ಯಲ್​ ಅವರಲ್ಲಿ ಕೊವಿಡ್​-19 ಕಾಣಿಸಿಕೊಂಡಿತ್ತು. ಅಲಿಪುರದ ಸೇನಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ದೇಶದೊಳಗಿನ ಉಗ್ರರು ಇವರು..ಅಪ್ಪ-ಅಮ್ಮನ ಎದುರೇ ಪೊಲೀಸ್​ ಪೇದೆಯನ್ನು ಬರ್ಬರವಾಗಿ ಕೊಂದರು…

    ಅವರ ಪುತ್ರಿ ಹಾಗೂ ಪತ್ನಿಯಲ್ಲೂ ಕೊವಿಡ್​-19 ಸೋಂಕು ಇರುವುದು ದೃಢಪಟ್ಟಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
    ಈ ಸೇನಾ ಬ್ರಿಗೇಡಿಯರ್​ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಸ್ಥಳೀಯ ಆಡಳಿತಾಧಿಕಾರಿಗಳು ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಮಾನವೀಯತೆಯನ್ನೇ ಮರೆಸುತ್ತಿದೆ ಕರೊನಾ; ತಂದೆಯ ಶವವಿಡಲು ಐಸ್​ಕ್ರೀಮ್​ ಫ್ರೀಜರ್​ ಖರೀದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts