More

    ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಸಂಶೋಧಕನಿಗೆ ಪ್ರತಿಷ್ಠಿತ ಇನ್ವೆಂಟರ್​ ಪ್ರಶಸ್ತಿ

    ನವದೆಹಲಿ: ಎಲೆಕ್ಟ್ರಾನಿಕ್ ಉದ್ಯಮವನ್ನು ಮುನ್ನಡೆಸುವಲ್ಲಿ ಮತ್ತು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ (ಎಐ) ಸಾಮರ್ಥ್ಯಗಳನ್ನು ಸುಧಾರಿಸುವಲ್ಲಿ ತೋರಿಸಿರುವ ಸಾಧನೆಗಾಗಿ ಭಾರತೀಯ ಮೂಲದ ಅಮೆರಿಕನ್​ ಸಂಶೋಧಕ ರಾಜೀವ್ ಜೋಶಿ ಅವರು ಅವರು ವರ್ಷದ ಪ್ರತಿಷ್ಠಿತ ವರ್ಷದ ಇನ್ವೆಂಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

    ನ್ಯೂಯಾರ್ಕ್ ಬೌದ್ಧಿಕ ಆಸ್ತಿ ಕಾನೂನು ಸಂಘವು ಈ ತಿಂಗಳ ಆರಂಭದಲ್ಲಿ ನಡೆಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಯಿತು.

    ಇದನ್ನೂ ಓದಿ:  ಸುಂದರಿ ಸಿಕ್ಕಳೆಂದು ಜತೆಗಿದ್ದವಳ ದೇಹ ತುಂಡರಿಸಿ ಸೂಟ್​ಕೇಸ್​ನಲ್ಲಿ ತುಂಬಿದ!

    ಅಮೆರಿಕದಲ್ಲಿ 250ಕ್ಕೂ ಹೆಚ್ಚು ಆವಿಷ್ಕಾರಗಳನ್ನು ಮಾಡುವ ಮೂಲಕ ಅವುಗಳ ಪೇಟೆಂಟ್​ ಹೊಂದಿರುವ ಖ್ಯಾತಿ ಪಡೆದಿದ್ದಾರೆ. ಸದ್ಯ ಇವರು ನ್ಯೂಯಾರ್ಕ್​ನ ಐಬಿಎಂ ಥಾಮಸ್​ ವಾಟ್ಸ್​ಸನ್​ ರೀಸರ್ಚ್​ ಸೆಂಟರ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

    ಜೋಶಿಯವರು ಐಐಟಿ ಮುಂಬೈ ಹಳೆಯ ವಿದ್ಯಾರ್ಥಿ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (ಎಂಐಟಿ) ಎಂಎಸ್ ಪದವಿ ಮತ್ತು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿಯನ್ನು ಇವರು ಪಡೆದಿದ್ದಾರೆ.

    ಇದನ್ನೂ ಓದಿ: ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

    ಸೂಪರ್​ ಕಂಪ್ಯೂಟರ್​, ಲ್ಯಾಪ್​ಟಾಪ್​, ಸ್ಮಾರ್ಟ್​ಫೋನ್​ ಸೇರಿದಂತೆ ಹಲವಾರು ಗ್ಯಾಜೆಟ್​ಗಳಲ್ಲಿ ಇವರು ನಡೆಸಿರುವ ಸಂಶೋಧನೆಗಳು ಅತ್ಯದ್ಭುತವಾಗಿದ್ದು, ತಂತ್ರಜ್ಞಾನದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ.

    ಮೇಡಂ ಕ್ಯೂರಿ, ರೈಟ್​ ಬ್ರದರ್ಸ್​, ಜೇಮ್ಸ್​ ವ್ಯಾಟ್​, ಥಾಮಸ್​ ಎಡಿಸನ್​, ಅಲೆಕ್ಸಾಂಡರ್​ ಬೆಲ್​ ಸೇರಿದಂತೆ ಮಹಾನ್​ ತಂತ್ರಜ್ಞರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಜೋಶಿ ಅವರು, ಇಂಥವರ ಯಶಸ್ವಿ ಜೀವನಗಾಥೆ ತಮಗೆ ಪ್ರೇರಣೆ ನೀಡಿದೆ ಎಂದಿದ್ದಾರೆ. (ಏಜೆನ್ಸೀಸ್​)

    FACT CHECK: ಹಾದಿ ತಪ್ಪಿರುವ ಸೂರತ್ ಶ್ರಮಿಕ್​ ರೈಲು, ಸಾವು: ಈ ವರದಿಯಲ್ಲಿ ಸತ್ಯಾಂಶ ಇದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts