More

    ವಾಯುಪಡೆಯ ಅಧಿಕಾರಿ ಮನಿಶಾ ಪಾಧಿ ಭಾರತದ ಮೊದಲ ಮಹಿಳಾ ಸಹಾಯಕಿ ಡಿ ಕ್ಯಾಂಪ್ ಆಗಿ ನೇಮಕ

    ನವದೆಹಲಿ: 2015ರ ಬ್ಯಾಚ್‌ನ ಐಎಎಫ್ ಸ್ಕ್ವಾಡ್ರನ್ ಲೀಡರ್ ಆಗಿರುವ ಒಡಿಶಾದ ಮನೀಶಾ ಪಾಧಿ ಅವರು ಭಾರತದ ಮೊದಲ ಮಹಿಳಾ ಸಹಾಯಕಿ-ಡಿ-ಕ್ಯಾಂಪ್ (ಎಡಿಸಿ) ಆಗಿ ಸೋಮವಾರ ನೇಮಕಗೊಂಡಿದ್ದಾರೆ.

    ಮನೀಶಾ ದೇಶದ ಮೊದಲ ಮಹಿಳಾ ಎಡಿಸಿ ಎನಿಸಿಕೊಂಡಿದ್ದಾರೆ. ಮಿಜೋರಾಂ ರಾಜ್ಯಪಾಲ ಡಾ.ಹರಿಬಾಬು ಕುಂಭಪತಿ ಅವರು 2015ರ ಬ್ಯಾಚ್‌ನ ಏರ್‌ಫೋರ್ಸ್ ಅಧಿಕಾರಿ ಮನಿಶಾ ಪಾಧಿ ಅವರನ್ನು ಮೊದಲ ಮಹಿಳಾ ಎಡಿಸಿಯಾಗಿ ನೇಮಕ ಮಾಡಿದ್ದಾರೆ.

    ಮಿಜೋರಾಂ ರಾಜ್ಯಪಾಲ ಹರಿಬಾಬು ಕಂಬಂಹತಿ ಅವರು ನವೆಂಬರ್ 29 ರಂದು ರಾಜ್ಯದ ರಾಜಧಾನಿ ಐಜ್ವಾಲ್‌ನ ರಾಜಭವನದಲ್ಲಿ ನಡೆದ ಸಂಕ್ಷಿಪ್ತ ಸಮಾರಂಭದಲ್ಲಿ ಸಶಸ್ತ್ರ ಪಡೆಗಳಿಂದ ಎಡಿಸಿಯಾಗಿ ಸ್ಟಾಡ್ರನ್ ಲೀಡರ್ ಪಾಧಿ ಅವರನ್ನು ನೇಮಿಸಿದರು. “ಸ್ಮಾಡ್ರನ್ ಲೀಡರ್ ಮನೀಶಾ ಪಾಧಿ ಅವರನ್ನು ಮಿಜೋರಾಂನ ಗವರ್ನರ್​​ಗೆ ಸಹಾಯಕ-ಡಿ-ಕ್ಯಾಂಪ್ (ADC) ಆಗಿ ನೇಮಿಸಲಾಗಿದೆ. ಸ್ಕ್ಯಾಡ್ರನ್ ಲೀಡರ್ ಮನೀಶಾ ಅವರು ದೇಶದ ಗವರರ್ನರ್​ಗೆ ಸಹಾಯಕ-ಡಿ-ಕ್ಯಾಂಪ್ (ADC) ಆಗಿ ನೇಮಕಗೊಂಡ ಭಾರತದ ಮೊದಲ ಮಹಿಳಾ ಭಾರತೀಯ ಸಶಸ್ತ್ರ ಪಡೆ ಅಧಿಕಾರಿಯಾಗಿದ್ದಾರೆ’ ಎಂದು ಮಿಜೋರಾಂನ ರಾಜ್ಯಪಾಲರ ಕಚೇರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

    ವಾಯುಪಡೆಯ ಅಧಿಕಾರಿ ಮನಿಶಾ ಪಾಧಿ ಭಾರತದ ಮೊದಲ ಮಹಿಳಾ ಸಹಾಯಕಿ ಡಿ ಕ್ಯಾಂಪ್ ಆಗಿ ನೇಮಕ

    ಈ ವಿಶೇಷ ಸಂದರ್ಭದಲ್ಲಿ ಅಭಿನಂದಿಸಿದ ರಾಜ್ಯಪಾಲ ಡಾ. ಹರಿ ಬಾಬು ಕುಂಭಪತಿ, “ಸ್ಕಾಡ್ರನ್ ಲೀಡರ್ ಮನೀಶಾ ಪಾಧಿ ಅವರನ್ನು ಸಹಾಯಕ ಡಿ-ಕ್ಯಾಂಪ್ ನೇಮಕ ಮಾಡಲಾಗಿದೆ. ಹೃತ್ಪೂರ್ವಕ ಅಭಿನಂದನೆಗಳು. ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇನೆ ” ಎಂದು ಎಂದು ಬರೆದುಕೊಂಡಿದ್ದಾರೆ.

    ಸ್ಕ್ವಾಡ್ರನ್ ಲೀಡರ್ ಮನೀಶಾ ತಮ್ಮ ಹುದ್ದೆಯನ್ನು ವಹಿಸಿಕೊಂಡು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ. ಇಲ್ಲಿ ಅವರನ್ನು ರಾಜಭವನದಲ್ಲಿ ರಾಜ್ಯದ ಅಧಿಕಾರಿಗಳು ಮತ್ತು ಇತರ ಉದ್ಯೋಗಿಗಳಿಗೆ ಪರಿಚಯಿಸಲಾಗಿದೆ. ಎಲ್ಲ ಅಧಿಕಾರಿಗಳು ಕೂಡ ಪ್ರಥಮ ಎಡಿಸಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.

    ವಾಯುಪಡೆಯ ಅಧಿಕಾರಿ ಮನಿಶಾ ಪಾಧಿ ಭಾರತದ ಮೊದಲ ಮಹಿಳಾ ಸಹಾಯಕಿ ಡಿ ಕ್ಯಾಂಪ್ ಆಗಿ ನೇಮಕ

    ಮನೀಶಾ ಅವರು ಇದಕ್ಕೂ ಮೊದಲು, ವಾಯುಪಡೆ, ವಾಯುಪಡೆ ನಿಲ್ದಾಣ, ಪುಣೆ, ಬೀದರ್ ಮತ್ತು ಭಟಿಂಡಾದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಒಡಿಶಾದ ಬಹರಂಪುರ ನಗರದಲ್ಲಿ ಮನಿಷಾ ಮನೆ ಇದೆ. ಅವರ ಕುಟುಂಬ ಭುವನೇಶ್ವರದಲ್ಲಿ ನೆಲೆಸಿದೆ. ಮನಿಷಾ ಅವರ ಈ ಸಾಧನೆಯ ನಂತರ ಇಡೀ ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

    ಭಾರತದಲ್ಲಿ, Aide-de-Camp ಎಂಬುದು ಗೌರವದ ಶೀರ್ಷಿಕೆಯಾಗಿದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಸೇರಿದಂತೆ ಸೇವಾ ಮುಖ್ಯಸ್ಥರು ಸಾಮಾನ್ಯವಾಗಿ ಮೂರು ಸಹಾಯಕ ಡಿ-ಕ್ಯಾಂಪ್‌ಗಳನ್ನು ಹೊಂದಿದ್ದಾರೆ ಮತ್ತು ಅಧ್ಯಕ್ಷರು ಐದು ಸಹಾಯಕ ಡಿ-ಕ್ಯಾಂಪ್‌ಗಳನ್ನು ಹೊಂದಿದ್ದಾರೆ. ಅವರಲ್ಲಿ ಒಬ್ಬರು ಮನೀಶಾ ಕೂಡಾ ಹೌದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts