More

    ಮಿಂಚಿದ ನಟರಾಜನ್, ಚಾಹಲ್; ಆಸೀಸ್ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಶುಭಾರಂಭ

    ಕ್ಯಾನ್‌ಬೆರಾ: ಏಕದಿನ ಸರಣಿ ಸೋಲಿಗೆ ಪ್ರತಿಕಾರ ತೀರಿಸುವ ನಿಟ್ಟಿನಲ್ಲಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಶುಭಾರಂಭ ಕಂಡಿದೆ. ಬದಲಿ ಆಟಗಾರನಾಗಿ ಕಣಕ್ಕಿಳಿದು ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ (25ಕ್ಕೆ 3) ಮತ್ತು ಪದಾರ್ಪಣೆಯ ಪಂದ್ಯದಲ್ಲೇ ಗಮನಸೆಳೆದ ಎಡಗೈ ವೇಗಿ ಟಿ. ನಟರಾಜನ್ (22ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 11 ರನ್‌ಗಳಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 2ನೇ ಟಿ20 ಪಂದ್ಯ ಭಾನುವಾರ ಸಿಡ್ನಿಯಲ್ಲಿ ನಡೆಯಲಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಕನ್ನಡಿಗ ಕೆಎಲ್ ರಾಹುಲ್ (51 ರನ್, 40 ಎಸೆತ, 5 ಬೌಂಡರಿ, 1 ಸಿಕ್ಸರ್) ಮತ್ತು ರವೀಂದ್ರ ಜಡೇಜಾ (44*ರನ್, 23 ಎಸೆತ, 5 ಬೌಂಡರಿ, 1 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್‌ನಿಂದ 7 ವಿಕೆಟ್‌ಗೆ 161 ರನ್ ಪೇರಿಸಿತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗೆ 150 ರನ್ ಪೇರಿಸಲಷ್ಟೇ ಶಕ್ತವಾಯಿತು.

    ಜಡೇಜಾಗೆ ಬ್ಯಾಟಿಂಗ್ ವೇಳೆ ಹೆಲ್ಮೆಟ್‌ಗೆ ಚೆಂಡೇಟು ಬಿದ್ದಿದ್ದರಿಂದ ಐಸಿಸಿಯ ಕನ್‌ಕಷನ್ (ಮೆದುಳು ಇಂಜುರಿ) ನಿಯಮದನ್ವಯ 2ನೇ ಸರದಿಯಲ್ಲಿ ಚಾಹಲ್ ಬದಲಿ ಆಟಗಾರರಾಗಿ ಕಣಕ್ಕಿಳಿದರು. ಇದರ ಭರ್ಜರಿ ಲಾಭವೆತ್ತಿದ ಭಾರತ ತಂಡ ಆಸೀಸ್‌ಗೆ ಕಡಿವಾಣ ಹಾಕುವಲ್ಲಿ ಸಫಲವಾಯಿತು. ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕಿದು ಸತತ 9ನೇ ಗೆಲುವಾಗಿದೆ.

    ಭಾರತ: 7 ವಿಕೆಟ್‌ಗೆ 161 (ಕೆಎಲ್ ರಾಹುಲ್ 51, ಧವನ್ 1, ಕೊಹ್ಲಿ 9, ಸ್ಯಾಮ್ಸನ್ 23, ಮನೀಷ್ ಪಾಂಡೆ 2, ಹಾರ್ದಿಕ್ ಪಾಂಡ್ಯ 16, ರವೀಂದ್ರ ಜಡೇಜಾ 44*, ವಾಷಿಂಗ್ಟನ್ 7, ಸ್ಟಾರ್ಕ್ 34ಕ್ಕೆ 2, ಜಂಪಾ 20ಕ್ಕೆ 1, ಸ್ವೀಪ್‌ಸನ್ 21ಕ್ಕೆ 1, ಹೆನ್ರಿಕ್ಸ್ 22ಕ್ಕೆ 3). ಆಸ್ಟ್ರೇಲಿಯಾ: 7 ವಿಕೆಟ್‌ಗೆ 150 (ಫಿಂಚ್ 35, ಶಾರ್ಟ್ 34, ಸ್ಮಿತ್ 12, ಹೆನ್ರಿಕ್ಸ್ 30, ಮ್ಯಾಕ್ಸ್‌ವೆಲ್ 2, ಅಬೋಟ್ 12*, ಸ್ವಿಪ್‌ಸನ್ 12*, ಟಿ. ನಟರಾಜನ್ 30ಕ್ಕೆ 3, ಚಾಹಲ್ 25ಕ್ಕೆ 3, ದೀಪಕ್ ಚಹರ್ 29ಕ್ಕೆ 1).

    ಜಡೇಜಾಗೆ ಅಂದು ಟೀಕೆ, ಇಂದು ಹೊಗಳಿಕೆ; ಬದಲಾದರು ಸಂಜಯ್ ಮಂಜ್ರೇಕರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts