More

    ಭಾರತ ತಂಡ ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಆಗಲಿದೆ ಎಂದು ಭವಿಷ್ಯ ನುಡಿದ ಆಸೀಸ್ ಮಾಜಿ ನಾಯಕ..!

    ಸಿಡ್ನಿ: ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಗೆ ದಿನಗಣನೆ ಆರಂಭಗೊಂಡಿದೆ. ಯುಎಇಯಲ್ಲಿ ಐಪಿಎಲ್ ಮುಗಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಮತ್ತೊಂದೆಡೆ, ಆತಿಥೇಯ ತಂಡದ ಮಾಜಿ ಆಟಗಾರರು ಭಾರತ ತಂಡದ ವಿರುದ್ಧ ದಿನಂಪ್ರತಿ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ಮನೋಬಲ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಕೂಡ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಭಾರತ ಉತ್ತಮ ನಿರ್ವಹಣೆ ತೋರದಿದ್ದರೆ ಟೆಸ್ಟ್ ಸರಣಿಯಲ್ಲಿ 0-4 ರಿಂದ ವೈಟ್‌ವಾಷ್ ಮುಖಭಂಗ ಅನುಭವಿಸಲಿದೆ ಎಂದು ಹೇಳಿದ್ದಾರೆ. ನಿಗದಿತ ಓವರ್‌ಗಳ ಸರಣಿಯಲ್ಲಿ ಕೊಹ್ಲಿ ಪಾತ್ರ ಬಹುದೊಡ್ಡದು ಎಂದಿದ್ದಾರೆ. ನವೆಂಬರ್ 27 ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ.

    32 ವರ್ಷದ ವಿರಾಟ್ ಕೊಹ್ಲಿ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಪಾಲ್ಗೊಂಡು, ಮೊದಲ ಟೆಸ್ಟ್ ಮುಕ್ತಾಯಗೊಂಡ ಬಳಿಕ ಪಿತೃತ್ವ ರಜೆ ಮೇಲೆ ತವರಿಗೆ ವಾಪಸಾಗಲಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ಉಳಿದ ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾಗೆ ಪ್ರಬಲ ಪೈಪೋಟಿ ನೀಡುವುದು ಕಷ್ಟಕರ ಎಂದೆಲ್ಲಾ ಹೇಳಲಾಗುತ್ತಿದೆ. ನಿಗದಿತ ಓವರ್‌ಗಳ ಸರಣಿಯಲ್ಲಿ ಕೊಹ್ಲಿ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರಷ್ಟೇ ಟೆಸ್ಟ್ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಲಿದೆ ಎಂದು 39 ವರ್ಷದ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಹಾಗೂ ಜಸ್‌ಪ್ರೀತ್ ಬುಮ್ರಾ ಇಬ್ಬರು ವಿಶ್ವ ದರ್ಜೆ ಕ್ರಿಕೆಟ್‌ಗರು, ಆಶಸ್ ಟೆಸ್ಟ್ ಸರಣಿಯಲ್ಲಿ ಜೋಫ್ರಾ ಆರ್ಚರ್ ಶಾರ್ಟ್ ಬಾಲ್ ಎಸೆತಗಳನ್ನು ಸ್ಟೀವನ್ ಸ್ಮಿತ್ ವಿರುದ್ಧ ಬಳಸಿದಂತೆ, ಬುಮ್ರಾ ಕೂಡ ಬಳಸಬೇಕಿದೆ ಎಂದರು.

    ಭಾರತ ತಂಡ 2018-19ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. 2018ರ ಚೆಂಡು ವಿರೂಪ ಪ್ರಕರಣದಿಂದಾಗಿ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಈ ಸರಣಿ ವೇಳೆ ಅಮಾನತು ಶಿಕ್ಷೆಯಲ್ಲಿದ್ದರು. ಉಭಯ ತಂಡಗಳ ನಡುವೆ 3 ಏಕದಿನ, 3 ಟಿ 20 ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ.

    ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿದೆ ಭಾರತ-ಆಸೀಸ್ ಕ್ರಿಕೆಟ್​ ಸರಣಿಯ ಕಾಮೆಂಟರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts