More

    ಮತ್ತೊಂದು ಅವಕಾಶ ಕೈಚೆಲ್ಲಿದ ಸಂಜು ಸ್ಯಾಮ್ಸನ್​: ರೋಹಿತ್​ ಅರ್ಧಶತಕ, ಕಿವೀಸ್​ಗೆ ಸವಾಲಿನ ಗುರಿ ನೀಡಿದ ಭಾರತ

    ಮೌಂಟ್​ವೌಂಗನುಯಿ: ಇಲ್ಲಿನ ಬೇ ಓವಲ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ಸರಣಿಯ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ(60*) ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ ಟೀಮ್​ ಇಂಡಿಯಾ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ 164 ರನ್​ಗಳು ಸವಾಲಿನ ಗುರಿ ನೀಡಿದೆ.

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ ಪರ ಸಂಜು ಸ್ಯಾಮ್ಸನ್​ ಮತ್ತು ಕನ್ನಡಿಗ ಕೆ.ಎಲ್​. ರಾಹುಲ್​ ಆರಂಭಿಕರಾಗಿ ಕಣಕ್ಕಿಳಿದರು. ಆದರೆ, ಒದಗಿಬಂದಿದ್ದ ಮತ್ತೊಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಸ್ಯಾಮ್ಸನ್​(2) ರನ್​ ಗಳಿಸಿ ಆರಂಭಿಕ ಆಘಾತ ನೀಡಿದರು.

    ಬಳಿಕ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿರುವ ರೋಹಿತ್​ ಶರ್ಮ, ರಾಹುಲ್ ಜತೆಗೂಡಿ​ ಉತ್ತಮ ಜತೆಯಾಟ ಆಡಿದರು. ತಂಡದ ಮೊತ್ತ 96 ರನ್​ ಆಗಿದ್ದಾಗ 45 ರನ್ ಗಳಿಸಿದ್ದ ರಾಹುಲ್​ ಕ್ಯಾಚಿತ್ತು ಅರ್ಧಶತಕ ವಂಚಿತರಾದರು. ಇದಾದ ಕೆಲವೇ ಸಮಯದಲ್ಲಿ ರೋಹಿತ್​ ಶರ್ಮ(60*) ಗಾಯಗೊಂಡು ಕ್ರೀಸ್​ನಿಂದ ಹೊರ ನಡೆದರು. ಇದರ ಬೆನ್ನಲ್ಲೇ ಶಿವಂ ದುವೆ(5) ಔಟಾದರು.

    ನಾಲ್ಕನೇ ಕ್ರಮಾಂಕದಲ್ಲಿ ಇಳಿದಿದ್ದ ಶ್ರೇಯಸ್​ ಅಯ್ಯರ್​(33*) ಹಾಗೂ ಕೊನೆಯ ಓವರ್​ನಲ್ಲಿ ಸ್ಫೋಟಿಸದ ಮನಿಶ್​ ಪಾಂಡೆ(11*) ಉಪಯುಕ್ತ ಕಾಣಿಕೆ ನೀಡಿ ಅಜೇಯರಾಗಿ ಉಳಿದರು. ಅಂತಿಮವಾಗಿ ಟೀಮ್​ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 3 ವಿಕಟ್​ ನಷ್ಟಕ್ಕೆ 163 ರನ್​ ಕಲೆಹಾಕಿತು.

    ಕಿವೀಸ್​ ಪರ ಸ್ಕಾಟ್ ಕುಗ್ಗೆಲ್​ಜಿನ್​ 2 ವಿಕೆಟ್​ ಉರುಳಿಸಿದರೆ, ಹಮೀಶ್​ ಬೆನೆಟ್ಟ್​ ಒಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts