More

    ಭಾರತ-ಆಸೀಸ್ ಕ್ರಿಕೆಟ್ ಪಂದ್ಯಗಳನ್ನು ನೋಡಲು ಪ್ರೇಕ್ಷಕರ ಕಾತರ, ಟಿಕೆಟ್‌ಗಳು ಸೋಲ್ಡ್‌ಔಟ್

    ಸಿಡ್ನಿ: ಕರೊನಾ ಹಾವಳಿಯ ನಡುವೆ ಕಳೆದ ಜುಲೈನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಗೊಂಡಿದ್ದರೂ, ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿಯೊಂದಿಗೆ ಪ್ರೇಕ್ಷಕರಿಗೂ ಮತ್ತೆ ಕ್ರೀಡಾಂಗಣದೊಳಗೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಪಂದ್ಯದ ಟಿಕೆಟ್‌ಗಳಿಗೂ ಭಾರಿ ಬೇಡಿಕೆ ವ್ಯಕ್ತವಾಗಿದೆ.
    ನವೆಂಬರ್ 27ರಿಂದ ನಡೆಯಲಿರುವ ಭಾರತ-ಆಸೀಸ್ ನಡುವಿನ ತಲಾ 3 ಏಕದಿನ, ಟಿ20 ಪಂದ್ಯಗಳ ಸರಣಿಯ ಒಟ್ಟು 6 ಪಂದ್ಯಗಳ ಪೈಕಿ 5 ಪಂದ್ಯಗಳ ಟಿಕೆಟ್‌ಗಳು, ಮಾರಾಟ ಆರಂಭಗೊಂಡ 24 ಗಂಟೆಗಳಲ್ಲೇ ಸಂಪೂರ್ಣ ಖಾಲಿಯಾಗಿವೆ.

    ಸಿಡ್ನಿಯ ಎಸ್‌ಸಿಜಿ ಮತ್ತು ಕ್ಯಾನ್‌ಬೆರಾದ ಮನುಕಾ ಓವಲ್ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಉಭಯ ತಾಣಗಳಲ್ಲೂ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಕರೊನಾ ಭೀತಿಯಿಂದಾಗಿ ಸಾಮಾಜಿಕ ಅಂತರ ಆಯ್ದುಕೊಂಡು ಆಸನ ವ್ಯವಸ್ಥೆಗಳನ್ನು ಕಲ್ಪಿಸಲಿರುವ ಕಾರಣ ಪ್ರೇಕ್ಷಕರ ಸಂಖ್ಯೆ ಅರ್ಧದಷ್ಟು ಇಳಿಕೆ ಕಂಡಿದೆ.

    ಈ ಸರಣಿ ಭಾರತ ತಂಡಕ್ಕೆ ಕರೊನಾ ಕಾಲದಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯಾಗಿದೆ. ಅಂದರೆ ಒಟ್ಟಾರೆ 8 ತಿಂಗಳ ಬಳಿಕ ಭಾರತ ತಂಡ ಕಣಕ್ಕಿಳಿಯಲಿದೆ. ಹೀಗಾಗಿ ಟೀಮ್ ಇಂಡಿಯಾದ ಅಭಿಮಾನಿಗಳು ಕ್ರೀಡಾಂಗಣಕ್ಕೆ ತೆರಳಿ ಪಂದ್ಯವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮೊದಲ ಏಕದಿನ ಪಂದ್ಯದ ಸುಮಾರು 1,900 ಟಿಕೆಟ್‌ಗಳಷ್ಟೇ ಸದ್ಯ ಮಾರಾಟವಾಗದೆ ಬಾಕಿ ಉಳಿದಿದ್ದು, ಉಳಿದಂತೆ 2 ಏಕದಿನ ಮತ್ತು 3 ಟಿ20 ಪಂದ್ಯಗಳ ಟಿಕೆಟ್ ಸಂಪೂರ್ಣ ಮಾರಾಟವಾಗಿವೆ. ಶುಕ್ರವಾರ ಬೆಳಗ್ಗೆಯಷ್ಟೇ ಟಿಕೆಟ್ ಮಾರಾಟ ಪ್ರಕ್ರಿಯೆ ಶುರುವಾಗಿತ್ತು.

    ಈ ಮುನ್ನ ಇಂಗ್ಲೆಂಡ್‌ನಲ್ಲಿ 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಗೊಂಡಾಗ, ಪ್ರವಾಸಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ಆಡಲಾಗಿತ್ತು. ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳು ಕೂಡ ಖಾಲಿ ಕ್ರೀಡಾಂಗಣದಲ್ಲೇ ನಡೆದಿದ್ದವು. ಆದರೆ ಆಸ್ಟ್ರೇಲಿಯಾದಲ್ಲಿ ಕಳೆದ ಜುಲೈನಿಂದ ದೇಶೀಯ ಕ್ರಿಕೆಟ್ ಪಂದ್ಯಗಳಿಗೆ ಕಡಿಮೆ ಸಂಖ್ಯೆಯ ಪ್ರೇಕ್ಷಕರಿಗೆ ಸಾಮಾಜಿಕ ಅಂತರದ ನಿಯಮದೊಂದಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.

    ಅಡಿಲೇಡ್‌ನಲ್ಲೇ ಮೊದಲ ಟೆಸ್ಟ್?
    ದಕ್ಷಿಣ ಆಸ್ಟ್ರೇಲಿಯಾದಲ್ಲಿ 6 ದಿನಗಳ ಲಾಕ್‌ಡೌನ್‌ನಿಂದ ಕರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲೇ ನಡೆಯುವ ನಿರೀಕ್ಷೆ ಹೆಚ್ಚಾಗಿದೆ. ಡಿಸೆಂಬರ್ 17ರಿಂದ ಅಹರ್ನಿಶಿಯಾಗಿ ಈ ಪಂದ್ಯ ನಡೆಯಬೇಕಿದೆ. ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡ ಹಿನ್ನೆಲೆಯಲ್ಲಿ ದಕ್ಷಿಣ ಆಸ್ಟ್ರೇಲಿಯಾ ರಾಜ್ಯದ ಗಡಿಗಳನ್ನು ಬಂದ್ ಮಾಡಲಾಗಿತ್ತು. ಇದರಿಂದ ಇಲ್ಲಿನ ಕ್ರಿಕೆಟಿಗರನ್ನು ಏರ್‌ಲಿಫ್ಟ್​ ಮಾಡಲಾಗಿತ್ತು. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 551ರಲ್ಲೇ ನಿಂತಿದೆ. ‘ಪಂದ್ಯ ನಡೆಯುವ ಬಗ್ಗೆ ಖಚಿತತೆ ನೀಡಲಾರೆ. ಆದರೆ ಕ್ರಿಕೆಟ್ ಪಂದ್ಯ ಆಯೋಜನೆ ಸಾಧ್ಯವಾಗಿಸುವ ಪ್ರಯತ್ನದಲ್ಲಿದ್ದೇವೆ’ ಎಂದು ದಕ್ಷಿಣ ಆಸ್ಟ್ರೇಲಿಯಾದ ಉನ್ನತ ವೈದ್ಯಕೀಯ ಅಧಿಕಾರಿ ನಿಕೋಲಾ ಸ್ಪುರಿಯರ್ ತಿಳಿಸಿದ್ದಾರೆ.

    ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಪಿತೃವಿಯೋಗ, ತವರಿಗೆ ಮರಳಲು ಕ್ವಾರಂಟೈನ್ ಅಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts