More

    ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ವಶ: ಇತಿಹಾಸ ಬರೆದ ಟೀಮ್​ ಇಂಡಿಯಾ ಯುವಪಡೆ

    ಬ್ರಿಸ್ಬೇನ್: ಇಲ್ಲಿನ ಗಾಬಾ ಮೈದಾನದಲ್ಲಿ ನಡೆದ 4ನೇ ಟೆಸ್ಟ್​ ಪಂದ್ಯದ ಅಂತಿಮ ದಿನದಾಟದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ ಟೀಮ್​ ಇಂಡಿಯಾ 3 ವಿಕೆಟ್​ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ 2-1 ಅಂತರದಿಂದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್​ ಸರಣಿಯನ್ನು ತನ್ನದಾಗಿಸಿಕೊಂಡಿದೆ.

    ಶುಭ್​ಮನ್​ ಗಿಲ್​ (91), ಚೇತೇಶ್ವರ ಪೂಜಾರ (56) ಹಾಗೂ ರಿಷಬ್​ ಪಂತ್​ ಅಜೇಯ 89 ರನ್​ ನರವಿನಿಂದ ಎರಡನೇ ಇನ್ನಿಂಗ್ಸ್​ನಲ್ಲಿ 96 ಓವರ್​ಗೆ 7 ವಿಕೆಟ್​ ನಷ್ಟಕ್ಕೆ 329 ರನ್​ ಕಲೆಹಾಕುವ ಮೂಲಕ ಟೀಮ್​ ಇಂಡಿಯಾ ವಿಜಯೋತ್ಸವ ಆಚರಿಸಿತು. ಈ ಮೂಲಕ ಬ್ರಿಸ್ಬೇನ್​ ಟೆಸ್ಟ್​ ಇತಿಹಾಸಲ್ಲೇ ಅತಿ ಹೆಚ್ಚು ರನ್ (257)​ ಚೇಸ್​ ಮಾಡಿದ ಕೀರ್ತಿಗೆ ಭಾರತ ಪಾತ್ರವಾಗಿದೆ. ಅಲ್ಲದೆ, 33 ವರ್ಷದ ಬಳಿಕ ಆಸಿಸ್​ ಪಡೆ ಗಾಬಾ ಟೆಸ್ಟ್​ ಸೋಲಿನ ಮುಖಭಂಗ ಅನುಭವಿಸಿದೆ.

    ಸೋಮವಾರದ ಅಂತ್ಯಕ್ಕೆ ಪ್ರಮುಖ ಬೌಲರ್‌ಗಳ ಗೈರಿನಲ್ಲಿ ವೇಗಿಗಳಾದ ಮೊಹಮದ್ ಸಿರಾಜ್ (73ಕ್ಕೆ 5) ಮತ್ತು ಶಾರ್ದೂಲ್ ಠಾಕೂರ್ (61ಕ್ಕೆ 4) ತೋರಿದ ಕೆಚ್ಚೆದೆಯ ಬೌಲಿಂಗ್ ನಿರ್ವಹಣೆಯ ನೆರವಿನಿಂದ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹೇರಿ, ಗೆಲುವಿಗೆ 328 ರನ್‌ಗಳ ಸವಾಲಿನ ಗುರಿ ಪಡೆದಿತ್ತು.

    ನಾಲ್ಕನೇ ದಿನದಾಟದಲ್ಲಿ ಭಾರತದ ಚೇಸಿಂಗ್‌ಗೆ ಮಳೆ ಅಡಚಣೆ ಬಂದಿತ್ತು. ಅಂತಿಮ ದಿನವೂ ಮಳೆ ಕಾಡುವ ಭೀತಿ ಇತ್ತು. ಇದರಿಂದಾಗಿ ಸೋಲು-ಗೆಲುವಿಗಿಂತ ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿತ್ತು. ಆದರೆ, ಟೀಮ್​ ಇಂಡಿಯಾದ ಯುವಪಡೆ ಲೆಕ್ಕಾಚಾರವನ್ನು ಬುಡಮೇಲು ಮಾಡಿ ಟ್ರೋಫಿ ಉಳಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

    ಗಾಬಾ ಮೈದಾನದಲ್ಲಿ ನಡೆದ ನಿರ್ಣಾಯಕ ಕಾದಾಟದಲ್ಲಿ ಸೋಮವಾರ ವಿಕೆಟ್ ನಷ್ಟವಿಲ್ಲದೆ 21 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಆಸೀಸ್, ಚಹಾ ವಿರಾಮದ ಬಳಿಕ 294 ರನ್‌ಗೆ ಸರ್ವಪತನ ಕಂಡಿತು. ಬಳಿಕ ಸವಾಲು ಬೆನ್ನಟ್ಟಲು ಕಣಕ್ಕಿಳಿದ ಭಾರತ ತಂಡ 1.5 ಓವರ್ ಎದುರಿಸಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದ್ದಾಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಮತ್ತೆ ಆಟ ನಡೆಯದೆ ದಿನದಾಟಕ್ಕೆ ತೆರೆಬಿದ್ದಿತು. ಆರಂಭಿಕರಾದ ರೋಹಿತ್ ಶರ್ಮ 4 ರನ್ ಗಳಿಸಿ ಮತ್ತು ಶುಭಮಾನ್ ಗಿಲ್ ಖಾತೆ ತೆರೆಯದೆ ಕ್ರೀಸ್‌ನಲ್ಲಿದ್ದರು.

    ಸ್ಕೋರ್​ ವಿವರ

    ಆಸ್ಟ್ರೇಲಿಯಾ: 369 ಮತ್ತು 75.5 ಓವರ್‌ಗಳಲ್ಲಿ 294 (ವಾರ್ನರ್ 48, ಹ್ಯಾರಿಸ್ 38, ಲಬುಶೇನ್ 25, ಸ್ಮಿತ್ 55, ಗ್ರೀನ್ 37, ಪೇನ್ 27, ಕಮ್ಮಿನ್ಸ್ 28*, ಲ್ಯಾನ್ 13, ಸಿರಾಜ್ 73ಕ್ಕೆ 5, ಶಾರ್ದೂಲ್ 61ಕ್ಕೆ 4, ವಾಷಿಂಗ್ಟನ್ 80ಕ್ಕೆ 1), ಭಾರತ: 336 ಮತ್ತು 329 (ರೋಹಿತ್ 7, ಗಿಲ್ 97, ಪೂಜಾರ 56, ರಹಾನೆ,24, ಪಂತ್​ 89*, ಮಯಾಂಕ್​ 9, ವಾಷಿಂಗ್ಟನ್​ 22, ಶಾರ್ದೂಲ್​ 2, ಹಜಾಲ್​ವುಡ್ 74ಕ್ಕೆ​ 1, ಪ್ಯಾಟ್​ ಕ್ಯುಮಿನ್ಸ್​ 55ಕ್ಕೆ 4 ಮತ್ತು ನ್ಯಾಥನ್​ ಲ್ಯಾನ್​ 85ಕ್ಕೆ 2).

    ಆಸೀಸ್‌ಗೆ ಸಿರಾಜ್-ಶಾರ್ದೂಲ್ ಬ್ರೇಕ್, ಅಂತಿಮ ದಿನದಾಟಕ್ಕೆ ಕುತೂಹಲ

    ಮದ್ವೆಯಾದ ಮೂರೇ ತಿಂಗಳಲ್ಲಿ ಎಸ್​ಐ ಸಾವು: ಬ್ಯೂಟಿ ಹಿಂದೆ ಬಿದ್ದ ಪೊಲೀಸಪ್ಪನ ದುರಂತ ಕತೆ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts