More

    ಐದನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಜಯ: 4-1ರಿಂದ ಸರಣಿ ವಶಪಡಿಸಿಕೊಂಡ ಟೀಮ್​ ಇಂಡಿಯಾ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಡಿ.03) ನಡೆದ ಟಿ20 ಸರಣಿಯ ಐದನೇ ಪಂದ್ಯದಲ್ಲಿ ಆತಿಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 6 ರನ್​ಗಳ ಅಂತರದಿಂದ ಭರ್ಜರಿ ಗೆಲುವು ಮೂಲಕ 4-1 ಅಂತರದಿಂದ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿತು.

    ಟೀಮ್​ ಇಂಡಿಯಾ ನೀಡಿದ 160 ರನ್​ಗಳ ಗುರಿಬೆನ್ನತ್ತಿ ಆಸೀಸ್​ ಪಡೆದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 154 ರನ್​ ಕಲೆ ಹಾಕುವ ಮೂಲಕ 6 ರನ್​ಗಳ ಅಂತರಲ್ಲಿ ಸೋಲುಂಡಿತು. ತಂಡದ ಪರ ಬೆನ್ ಮೆಕ್ಡರ್ಮಾಟ್ (54), ಟ್ರಾವಿಸ್​ ಹೆಡ್​ (28) ಮತ್ತು ಮ್ಯಾಥೀವ್​ ವೇಡ್​ (22) ರನ್​ ಗಳಿಸಿದರು. ಉಳಿದಂತೆ ಯಾವೊಬ್ಬ ಆಟಗಾರನು ಕೂಡ ಹೆಚ್ಚು ಪ್ರಭಾವ ಬೀರಲಿಲ್ಲ.

    ಭಾರತದ ಪರ ಮುಕೇಶ್​ ಕುಮಾರ್​ 3 ವಿಕೆಟ್​ ಪಡೆದು ಮಿಂಚಿದರು. ಅರ್ಷದೀಪ್​ ಸಿಂಗ್​ ಮತ್ತು ರವಿ ಬಿಷ್ಣೋಯ್​ ತಲಾ ಎರಡು ಪಡೆದರೆ, ಅಕ್ಷರ್​ ಪಟೇಲ್​ ಒಂದು ವಿಕೆಟ್​ಗೆ ತೃಪ್ತಿಪಟ್ಟುಕೊಂಡರು.

    ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಭಾರತ ಶ್ರೇಯಸ್​ ಅಯ್ಯರ್​ (53 ರನ್​ 37 ಎಸೆತ, 5 ಬೌಂಡರಿ, 3 ಸಿಕ್ಸರ್​), ಅಕ್ಷರ್​ ಪಟೇಲ್​ (31), ಯಶಸ್ವಿ ಜೈಸ್ವಾಲ್​ (21) ಮತ್ತು ಜಿತೇಶ್​ ಶರ್ಮ (24) ಬ್ಯಾಟಿಂಗ್​ ನೆರವಿನಿಂದ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 160 ರನ್​ ಕಲೆ ಹಾಕಿತು.

    ಆಸೀಸ್​ ಪರ ಬೆಹೆಂಡ್ರಾಪ್​ ಮತ್ತು ದ್ವಾರಶುಯಿಸ್ ತಲಾ ಎರಡು ವಿಕೆಟ್​ ಪಡೆದರೆ, ಆ್ಯರುನ್​ ಹರ್ಡಿ, ನಾಥನ್​ ಎಲಿಸ್​ ಮತ್ತು ಟಿ ಸಂಘ ತಲಾ ಒಂದೊಂದು ವಿಕೆಟ್​ ಕಬಳಿಸಿದರು.

    ಡಿಕೆಶಿ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ತೆಲಂಗಾಣ ಕಾಂಗ್ರೆಸ್

    ಸಿಎಂ ಕೆಸಿಆರ್​, ಸಂಭಾವ್ಯ ಸಿಎಂ ರೇವಂತ್​ ರೆಡ್ಡಿಗೆ ಸೋಲುಣಿಸಿ ಎಲ್ಲರ ಹುಬ್ಬೇರಿಸಿದ ಬಿಜೆಪಿ ಅಭ್ಯರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts