More

    ಮತ್ತೆ ಅಬ್ಬರಿಸಿದ ಕಾಂಗರೂ ಪಡೆ​: 2ನೇ ಪಂದ್ಯದಲ್ಲೂ ಭಾರತಕ್ಕೆ ಬೃಹತ್​ ಮೊತ್ತದ ಗುರಿ!

    ಸಿಡ್ನಿ: ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಅಬ್ಬರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಭಾರತಕ್ಕೆ 390 ರನ್​ಗಳ ಬೃಹತ್​ ಗುರಿ ನೀಡಿದೆ.

    ಸಿಡ್ನಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸಿಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 389 ರನ್​ ಕಲೆಹಾಕಿದೆ.

    ತಂಡದ ಪರ ಡೇವಿಡ್​ ವಾರ್ನರ್​ (83), ನಾಯಕ ಆ್ಯರೂನ್​ ಫಿಂಚ್​ (60) ಉತ್ತಮ ಆರಂಭ ಒದಗಿಸಿದರೆ, ಸ್ಟೀವ್​ ಸ್ಮಿತ್ (104), ಮಾರ್ನಸ್ ಲಬುಶೇನ್ (70) ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ (60*) ಅತ್ಯುತ್ತಮ ಆಟದ ಮೂಲಕ ತಂಡವು ಬೃಹತ್​ ಮೊತ್ತ ಪೇರಿಸಲು ನೆರವಾದರು. ಉಳಿದಂತೆ ಮೊಯಿಸಸ್ ಹೆನ್ರಿಕ್ಸ್ 2 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಟೀಮ್​ ಇಂಡಿಯಾ ಪರ ಮೊಹಮ್ಮದ್​ ಶಮಿ, ಜಸ್ಪ್ರಿತ್​ ಬೂಮ್ರಾ ಮತ್ತು ಹಾರ್ದಿಕ್​ ಪಾಂಡ್ಯ ತಲಾ ಒಂದು ವಿಕೆಟ್​ ಪಡೆದರು. ಆದರೆ, ಯಾರೋಬ್ಬರು ಆಸಿಸ್​ ಪಡೆಯ ರನ್​ ವೇಗಕ್ಕೆ ಕಡಿವಾಣ ಹಾಕಲಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts