More

    ಆಸಿಸ್​ ಮಾರಕ ಬೌಲಿಂಗ್​ ದಾಳಿ: 255 ರನ್​ಗೆ ಟೀಮ್​ ಇಂಡಿಯಾ ಆಲೌಟ್​

    ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಆಸಿಸ್​ ಪಡೆಗೆ 256 ರನ್​ ಗುರಿ ನೀಡಿದೆ.

    ಟಾಸ್​ ಸೋತು ಬ್ಯಾಂಟಿಂಗ್​ಗೆ ಇಳಿದ ಟೀಮ್​ ಇಂಡಿಯಾ ಆರಂಭದಲ್ಲೇ ರೋಹಿತ್​ ಶರ್ಮ(10) ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಶಿಖರ್​ ಧವನ್​ ಜತೆಯಾದ ಕೆ.ಎಲ್​​.ರಾಹುಲ್​ ಉತ್ತಮ ಜತೆಯಾಟವಾಗಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ತಂಡದ ಮೊತ್ತ 134 ರನ್​​ ಆಗಿದ್ದಾಗ 47 ರನ್​ ಗಳಿಸಿ ಆಡುತ್ತಿದ್ದ ಕೆ.ಎಲ್​.ರಾಹುಲ್​ ಬಿರುಸಿನ ಆಟವಾಡಲು ಹೋಗಿ ಕ್ಯಾಚಿತ್ತು ಅರ್ಧ ಶತಕದ ಹೊಸ್ತಿಲಲ್ಲಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಧವನ್​(74) ಕೂಡ ಔಟಾದರು.

    ಇಲ್ಲಿಂದಾಚೆಗೆ ಪೆವಲಿಯನ್​ ಪರೇಡ್​ ನಡೆಸಿದ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ (16), ಶ್ರೇಯಸ್​ ಅಯ್ಯರ್​(4), ರಿಷಭ್​ ಪಂತ್​(28), ರವೀಂದ್ರ ಜಡೇಜ(25) ಶಾರ್ದೂಲ್​ ಠಾಕೂರ್​(13), ಕುಲದೀಪ್​ ಯಾದವ್​(17) ಮತ್ತು ಮಹಮ್ಮದ್​ ಶಮಿ(10) ವಿಕೆಟ್​ ಅನ್ನು ಬಹುಬೇಗನೆ ಕಳೆದುಕೊಂಡಿತು. ಕೊನೆಯಲ್ಲಿ ಯಾವುದೇ ರನ್​ ಖಾತೆ ತೆರೆಯದೇ ಜಸ್ಪ್ರಿತ್​ ಬೂಮ್ರಾ ಅಜೇಯರಾಗಿ ಉಳಿದರು.

    ಅಂತಿಮ ವಾಗಿ ಟೀಮ್​ ಇಂಡಿಯಾ 49.1 ಓವರ್​ನಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 255 ರನ್​ ಗಳಿಸಿತು.

    ಆಸಿಸ್​ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ಮಿಚೆಲ್​ ಸ್ಟಾರ್ಕ್​ ಪ್ರಮುಖ 3 ವಿಕೆಟ್​ ಕಬಳಿಸಿದರೆ, ಪ್ಯಾಟ್​ ಕ್ಯೂಮಿನ್ಸ್​ ಮತ್ತು ಕೇನ್​ ರಿಚರ್ಡ್ಸನ್​ ತಲಾ ಎರಡು ವಿಕೆಟ್​ ಪಡೆದರು. ಉಳಿದಂತೆ ಆ್ಯಡಮ್​ ಝಂಪಾ ಮತ್ತು ಅಸ್ಥಾನ್​ ಅಗರ್​ ತಲಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts