More

    ಐಸಿಸಿ ಅಂಡರ್​ 19 ವಿಶ್ವಕಪ್​ ಸಮಿಫೈನಲ್: ಪಾಕ್​ ಬಗ್ಗುಬಡಿದು ಸತತ 3ನೇ ಬಾರಿ ಫೈನಲ್​ಗೆ ಲಗ್ಗೆಯಿಟ್ಟ ಭಾರತ

    ಪಾಟ್​ಚೇಫ್​ಸ್ಟ್ರೋಮ್ (ದಕ್ಷಿಣ ಆಫ್ರಿಕಾ): ಇಲ್ಲಿನ ಸೆನ್​ವೆಸ್​ ಪಾರ್ಕ್​ ಕ್ರೀಡಾಂಗಣದಲ್ಲಿ ನಡೆದ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಯಶಸ್ವಿ ಜೈಪಾಲ್​(105* ರನ್​, 113 ಎಸೆತ, 8 ಬೌಂಡರಿ, 4 ಸಿಕ್ಸರ್​​) ಮತ್ತು ದಿವ್ಯಾಂಶ್​ ಸಕ್ಸೆನಾ(59* ರನ್​, 99 ಎಸೆತ, 6 ಬೌಂಡರಿ) ಅವರ ಮುರಿಯದ ಜತೆಯಾಟದಿಂದಾಗಿ ಟೀಮ್​ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದು ಸತತ ಮೂರನೇ ಬಾರಿ ಫೈನಲ್​ಗೆ ಲಗ್ಗೆ ಇಟ್ಟಿದೆ.

    ಪಾಕ್​ ನೀಡಿದ್ದ 173 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ಯಾವುದೇ ವಿಕೆಟ್​ ನೀಡದೇ ಸುಲಭವಾಗಿ ಗುರಿ ಮುಟ್ಟಿತ್ತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಪಾಲ್​ ಮತ್ತು ದಿವ್ಯಾಂಶ್​ ಸಕ್ಸೇನಾ ಕೊನೆಯವರೆಗೂ ವಿಕೆಟ್​ ಕಾಪಾಡಿಕೊಂಡು ಪಾಕ್​ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸುವ ಮೂಲಕ ಸಾಕಷ್ಟು ಕಾಡಿದರು. ಶತಕಕ್ಕೆ ಒಂದು ರನ್​ ಬೇಕಿದ್ದಾಗ ಸಿಕ್ಸರ್​ ಸಿಡಿಸಿದ ಜೈಪಾಲ್​ ಟೀಮ್​ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಲ್ಲದೆ ಶತಕವನ್ನು ಸಂಭಮಿಸಿದರು.

    ಅಂತಿಮವಾಗಿ ಟೀಮ್​ ಇಂಡಿಯಾ 43.1 ಓವರ್​ಗಳಲ್ಲಿ ಯವುದೇ ವಿಕೆಟ್​ ನಷ್ಟವಿಲ್ಲದೇ 176 ರನ್​ ಕಲೆಹಾಕುವ ಮೂಲಕ ಪಾಕ್​ ವಿರುದ್ಧ ಗೆದ್ದು ಬೀಗಿತು. ಈ ಮೂಲಕ ಸತತ ಮೂರನೇ ಬಾರಿಗೆ ಫೈನಲ್​ ಲಗ್ಗೆ ಇಟ್ಟಿದೆ.

    ಪಾಕ್​ ಪರ ಯಾವೊಬ್ಬ ಬೌಲರ್​ಗಳು ಕೂಡ ಪರಿಣಾಮಕಾರಿಯಾಗಲಿಲ್ಲ. ಎದುರಾಳಿ ಆಟಗಾರರ ವಿಕೆಟ್​ ಪಡೆಯುವಲ್ಲಿ ಪಾಕ್​ ಬೌಲರ್​ಗಳು ತಿಣುಕಾಡಿದರು. ಈ ಮೂಲಕ ಪಂದ್ಯವನ್ನು ಕೈಚೆಲ್ಲುವ ಮೂಲಕ ಭಾರತದ ಎದುರು ಪಾಕ್​ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. (ಏಜೆನ್ಸೀಸ್​)

    ಐಸಿಸಿ ಅಂಡರ್​ 19 ವಿಶ್ವಕಪ್ ಸೆಮಿಫೈನಲ್​: ಭಾರತದ ಬೌಲಿಂಗ್​ ದಾಳಿಗೆ ಬೆದರಿದ ಪಾಕ್ ಪಡೆ​ಯಿಂದ ಸಾಧಾರಣ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts