40 ವರ್ಷ ಬಳಿಕ ಮುಂಬೈಗೆ ಒಲಿಂಪಿಕ್ ಸಮಿತಿ ಸಭೆ ಆತಿಥ್ಯ; ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸುವ ಕನಸು ನನಸಾಗ್ತಿದೆ ಎಂದ ನೀತಾ ಅಂಬಾನಿ

blank

ಮುಂಬೈ: ಭಾರತದಲ್ಲಿ 40 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ (ಐಒಸಿ) ಅಧಿವೇಶನ ಆಯೋಜಿಸಲು ಸಂತೋಷವಾಗುತ್ತಿದೆ. 2023ರಲ್ಲಿ ಮುಂಬೈನಲ್ಲಿ ಈ ಮಹಾಸಭೆ ನಡೆಯಲಿದೆ ಎಂದು ಐಒಸಿ ಸದಸ್ಯೆಯಾಗಿರುವ ನೀತಾ ಅಂಬಾನಿ ಹರ್ಷ ವ್ಯಕ್ತಪಡಿಸಿದ್ದಾರೆ.

blank

ಇದು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ನಂಥ ದೊಡ್ಡ ಕ್ರೀಡಾಕೂಟ ಆಯೋಜಿಸಲು ರಹದಾರಿಯಾಗಲಿದೆ. ಮುಂಬೈನಲ್ಲೇ ಅಧಿವೇಶನ ಆಯೋಜಿಸಬೇಕು ಎಂದು ಒಲವು ವ್ಯಕ್ತವಾಗಿತ್ತು. ಶೇಕಡ 99 ಮಂದಿ ಮುಂಬೈ ಪರವೇ ಮತದಾನ ಮಾಡಿದ್ದರು. ಮುಂದಿನ ವರ್ಷ ಭಾರತದಲ್ಲಿ ಐಒಸಿ ಅಧಿವೇಶನ ಆಯೋಜಿಸಲು ಭಾರತ ಬಿಡ್ಡಿಂಗ್‌ನಲ್ಲಿ ಜಯಿಸಲು ಯಶಸ್ವಿಯಾಗಿದೆ. 1983ರಲ್ಲಿ ಕಡೇ ಬಾರಿಗೆ ಭಾರತದಲ್ಲಿ ಈ ಅಧಿವೇಶನ ಆಯೋಜಿಸಲಾಗಿತ್ತು.

45 ಗೌರವಾನ್ವಿತ ಸದಸ್ಯರು ಸೇರಿದಂತೆ ಮತದಾನದ ಹಕ್ಕು ಹೊಂದಿರುವ 101 ಸದಸ್ಯರೊಂದಿಗೆ ವಾರ್ಷಿಕ ಮಹಾಸಭೆ ನಡೆಯಲಿದೆ. ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ನಗರಗಳ ಬಗ್ಗೆ ಚರ್ಚೆ, ಐಒಸಿ ಪದಾಧಿಕಾರಿಗಳ ಚುನಾವಣೆ, ಹಲವು ವಿಷಯಗಳ ಬಗ್ಗೆ ಅಧಿವೇಶದಲ್ಲಿ ಚರ್ಚೆ ನಡೆಯಲಿದೆ.

ಭಾರತಕ್ಕೆ ಹಲವು ದಿನಗಳಿಂದ ಕನಸಾಗಿಯೇ ಉಳಿದಿರುವ ಯೂತ್ ಒಲಿಂಪಿಕ್ ಗೇಮ್ಸ್, ಒಲಿಂಪಿಕ್ ಕ್ರೀಡಾಕೂಟ ಆಯೋಜನೆಗೆ ಈ ಅಧಿವೇಶನ ಸಹಕಾರಿಯಾಗಲಿದ್ದು, ಇಂಥ ಸುಸಂದರ್ಭಕ್ಕೆ 40 ವರ್ಷ ಕಾಯಬೇಕಾಯಿತು ಎಂದು ನೀತಾ ಅಂಬಾನಿ ತಿಳಿಸಿದ್ದಾರೆ. ಇಡೀ ವಿಶ್ವದಲ್ಲೇ ಭಾರತ ಹೆಚ್ಚು ಯುವಕರನ್ನು ಹೊಂದಿರುವ ದೇಶ, ಮುಂಬರುವ ದಿನಗಳಲ್ಲಿ ಭಾರತ ಒಲಿಂಪಿಕ್ಸ್‌ನಂಥ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಹೆಚ್ಚು ಪದಕ ಗೆಲ್ಲುವಂತೆ ಆಗಬೇಕು. ಇದೇ ನಮ್ಮೆಲ್ಲರ ಗುರಿ ಎಂದು ನೀತಾ ತಿಳಿಸಿದ್ದಾರೆ. ನೀತಾ ಅಂಬಾನಿ, ಐಒಸಿ ಸದಸ್ಯತ್ವ ಹೊಂದಿರುವ ಭಾರತದ ಮೊದಲ ಮಹಿಳೆ ಎನಿಸಿದ್ದಾರೆ.

ಸದ್ಯ ಬೀಜಿಂಗ್‌ನಲ್ಲಿ ನಡೆಯುತ್ತಿರುವ 139ನೇ ಐಒಸಿ ಅಧಿವೇಶನದಲ್ಲಿ ಭಾರತದ ನಿಯೋಗದಲ್ಲಿ
ನೀತಾ ಅಂಬಾನಿ, ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ನರೀಂದರ್ ಬಾತ್ರಾ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, 2008ರ ಬೀಜಿಂಗ್ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ತೆರಳಿದ್ದಾರೆ. ಅಲ್ಲದೆ, ಬೀಜಿಂಗ್‌ನಲ್ಲಿ ವಿಂಟರ್ ಒಲಿಂಪಿಕ್ಸ್ ಆಯೋಜಿಸಲಾಗಿದೆ. ಐಒಸಿ ಅಧಿವೇಶನದ ಬಿಡ್ಡಿಂಗ್ ಭಾರತಕ್ಕೆ ಒಲಿಯಲು ನೀತಾ ಅಂಬಾನಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರಿಗೆ ನಾವು ಅಭಾರಿಯಾಗಿರುತ್ತೇವೆ ಎಂದು ಐಒಎ ಅಧ್ಯಕ್ಷ ಬಾತ್ರಾ ತಿಳಿಸಿದ್ದಾರೆ. ಭಾರತದ ಕ್ರೀಡಾಭಿವೃದ್ಧಿಗೆ ನೀತಾ ತಮ್ಮದೇ ದೃಷ್ಟಿಕೋನ ಇಟ್ಟುಕೊಂಡಿದ್ದಾರೆ ಎಂದು ಬಾತ್ರಾ ಶ್ಲಾಘಿಸಿದರು.

Share This Article
blank

ಸೇಬು ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ..ಹಾಗೇನಾದರೂ ಮಾಡಿದರೆ ಅಪಾಯ ಖಂಡಿತ!Apple

Apple: ಸೇಬುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಆದರೆ ಸೇಬನ್ನು ತಿಂದ ನಂತರ ಜೀರ್ಣಿಸಿಕೊಳ್ಳಲು 30 ರಿಂದ 40…

ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ ತಿಂದರೆ ನಿಮ್ಮ ಆರೋಗ್ಯಕ್ಕೆ ಏನಾಗುತ್ತದೆ ಗೊತ್ತಾ? Pickles

Pickles: ಬಿಸಿ ಅನ್ನದ ಜೊತೆ ಸ್ವಲ್ಪ ಉಪ್ಪಿಕಾಯಿ ಇದ್ದರೆ ಸಾಕು ಆ ಊಟದ ರುಚಿಯೇ ಬೇರೆ.…

blank