More

    ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 9 ನ್ಯಾಯಮೂರ್ತಿಗಳ ಹೆಸರಿಗೆ ಕೇಂದ್ರದ ಅನುಮೋದನೆ

    ನವದೆಹಲಿ: ಸುಪ್ರೀಂಕೋರ್ಟ್ ಉನ್ನತಿಗಾಗಿ ಕೊಲಿಜಿಯಂನಿಂದ ಶಿಫಾರಸು ಮಾಡಲಾದ ಎಲ್ಲಾ ಒಂಬತ್ತು ಹೆಸರುಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದ್ದು, ಅದರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡಿದೆ. ರಾಷ್ಟ್ರಪತಿಗಳು ಶಿಫಾರಸುಗಳನ್ನು ಔಪಚಾರಿಕವಾಗಿ ಅನುಮೋದಿಸಿದ ನಂತರ ನೂತನ ನ್ಯಾಯಮೂರ್ತಿಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್, ಓಕಾ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್, ಸಿಕ್ಕಿಂ ಮುಖ್ಯ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ, ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್, ಮದ್ರಾಸ್ ಹೈಕೋರ್ಟ್​ನ ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್, ಗುಜರಾತ್ ಹೈಕೋರ್ಟ್​ನ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ಹಿರಿಯ ವಕೀಲ ಪಿ.ಎಸ್.ನರಸಿಂಹ ಅವರ ಹೆಸರನ್ನು ಸುಪ್ರೀಕೋರ್ಟ್​ ಕೊಲಿಜಿಯಂ ಶಿಫಾರಸು ಮಾಡಿದೆ.

    ಸುಪ್ರೀಂಕೋರ್ಟ್‌ನ ಪ್ರಸ್ತುತ ಬಲ 24 ಇದೆ. ಇದೀಗ ಅನುಮೋದನೆ ಆಗಿರುವ ಒಂಬತ್ತು ನ್ಯಾಯಾಧೀಶರ ಸೇರ್ಪಡೆಯೊಂದಿಗೆ ಉನ್ನತ ನ್ಯಾಯಾಲಯದಲ್ಲಿ ಇನ್ನೂ ಒಬ್ಬ ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇರಲಿದೆ.

    ಶಿಫಾರಸು ಮಾಡಲಾದ ಹೆಸರುಗಳಲ್ಲಿ, ನ್ಯಾಯಮೂರ್ತಿ ನಾಗರತ್ನ ಅವರು ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗುವ ಸಾಧ್ಯತೆ ಇದೆ. 1950 ಜನವರಿ 26 ರಂದು ಅಸ್ತಿತ್ವಕ್ಕೆ ಬಂದ ಸುಪ್ರೀಂಕೋರ್ಟ್, ಆರಂಭದಿಂದಲೂ ಕೆಲವೇ ಕೆಲವು ಮಹಿಳಾ ನ್ಯಾಯಾಮೂರ್ತಿಗಳನ್ನು ಕಂಡಿದೆ. ಕಳೆದ 71 ವರ್ಷಗಳಲ್ಲಿ 1989 ರಲ್ಲಿ ಎಂ.ಫಾತಿಮಾ ಬೀವಿಯಿಂದ ಆರಂಭವಾಗಿ ಕೇವಲ ಎಂಟು ಮಹಿಳಾ ನ್ಯಾಯಾಮೂರ್ತಿಗಳನ್ನು ಮಾತ್ರ ನೇಮಿಸಿದೆ.

    ಕನ್ನಡತಿ ಬಿವಿ ನಾಗರತ್ನ
    1962 ಅಕ್ಟೋಬರ್ 30 ರಂದು ಜನಿಸಿದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಮಾಜಿ ಸಿಜೆಐ ಇ.ಎಸ್.ವೆಂಕಟರಾಮಯ್ಯ ಅವರ ಮಗಳು. ನಾಗರತ್ನ ಅವರು 1987 ಅಕ್ಟೋಬರ್ 28 ರಂದು ಬೆಂಗಳೂರಿನಲ್ಲಿ ವಕೀಲರಾಗಿ ಸೇರಿಕೊಂಡರು. ಸಂವಿಧಾನ, ವಾಣಿಜ್ಯ, ವಿಮೆ ಮತ್ತು ಸೇವೆ ಇತ್ಯಾದಿಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ನಾಗರತ್ನ ಅವರು ಕಾನೂನು ಅಭ್ಯಾಸ ಮಾಡಿದ್ದಾರೆ. (ಏಜೆನ್ಸೀಸ್​)

    ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್ ವರ್ಗಾವಣೆ: ಸೈಬರಾಬಾದ್​ ಪೊಲೀಸ್​ ಆಯುಕ್ತರಾಗಿ ಸ್ಟೆಫೆನ್​ ರವೀಂದ್ರ ನೇಮಕ!

    8 ತೊಲೆ ಬಂಗಾರವನ್ನು ಮರಳಿಸಿ ಮಹಿಳೆ ಪಾಲಿಗೆ ಬಂಗಾರದ ಮನುಷ್ಯನಾದ ಆಟೋ ಚಾಲಕ..!

    ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಎಫ್​ಆರ್​ಪಿ 290 ರೂ.ಗೆ ಹೆಚ್ಚಳ-ಕೇಂದ್ರ ಸಂಪುಟ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts