More

    ಲಡಾಖ್​ ಬಿಕ್ಕಟ್ಟಿನ ನಡುವೆಯೇ ಸುಖೋಯಿ, ಮಿಗ್​ ಯುದ್ಧವಿಮಾನಗಳ ಖರೀದಿ

    ನವದೆಹಲಿ: ಲಡಾಖ್​ನ ಪೂರ್ವಭಾಗದ ವಾಸ್ತವ ಗಡಿರೇಖೆಯ ಬಳಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಂತೆ ಭಾರತ ರಷ್ಯಾದಿಂದ 12 ಸುಖೋಯಿ 30ಎಂಕೆಐ ಮತ್ತು 21 ಮಿಗ್​-29 ಯುದ್ಧವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಇದಲ್ಲದೆ, ಹಾಲಿ ಇರುವ 59 ಮಿಗ್​ ಯುದ್ಧವಿಮಾನಗಳ ಅಪ್​ಗ್ರೇಡೇಷನ್​ ಅನ್ನೂ ಪಡೆದುಕೊಳ್ಳುತ್ತಿದೆ.

    ರಷ್ಯಾದಿಂದ ಮಿಗ್​-29 ಅಪ್​ಗ್ರೇಡೇಷನ್​ ಅನ್ನು ಪಡೆದುಕೊಳ್ಳಲಾಗುತ್ತಿದ್ದು ಇದಕ್ಕಾಗಿ 7.4 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಎಚ್​ಎಎಲ್​ಗೆ 10.7ಸಾವಿರ ಕೋಟಿ ರೂ. ಕೊಟ್ಟು 12 ಸುಖೋಯಿ ವಿಮಾನಗಳನ್ನು ಖರೀದಿಸಲಾಗುತ್ತಿದೆ.

    ಇದನ್ನೂ ಓದಿ: ರಾಜೀನಾಮೆ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ಅಧಿವೇಶವನ್ನೇ ಮುಂದೂಡಿದ ಓಲಿ

    ಯುದ್ಧವಿಮಾನಗಳ ಸ್ಕ್ವಾಡ್ರನ್​ ಅನ್ನು ಹೆಚ್ಚಿಸಬೇಕು ಎಂದು ಭಾರತೀಯ ವಾಯುಪಡೆ ತುಂಬಾ ಕಾಲದಿಂದಲೂ ಕೇಳಿಕೊಳ್ಳುತ್ತಿತ್ತು. ಕೇಂದ್ರ ಸರ್ಕಾರ ಇದೀಗ ಈ ಮನವಿಗೆ ಸ್ಪಂದಿಸಿದೆ.

    ದೇಶಿಯ ಕ್ಷಿಪಣಿ ಖರೀದಿಗೂ ಅಸ್ತು: ದೇಶಿಯವಾಗಿ ತಯಾರಿಸಲ್ಪಟ್ಟಿರುವ ಅಸ್ತ್ರಾ ಗಗನದಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿಗಳ ಖರೀದಿಗೂ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಇದು ಡಿಆರ್​ಡಿಒ ಪಾಲಿಗೆ ಅತಿದೊಡ್ಡ ಯಶಸ್ಸು ಆಗಿದೆ. ಇದೇ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಖರೀದಿ ಮಂಡಳಿ (ಡಿಎಸಿ) ದೇಶಿಯವಾಗಿ ನಿರ್ಮಿಸಲಾಗಿರುವ ದೂರಗಾಮಿ ಗಗನದಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಭಾರತೀಯ ಸೇನಾಪಡೆ ಮತ್ತು ಭಾರತೀಯ ವಾಯುಪಡೆಗಳಿಗಾಗಿ ಖರೀದಿಸಲು ಅನುಮತಿ ನೀಡಿದೆ.

    ಗುಡ್​ ನ್ಯೂಸ್ .. 90 ಹೊಸ ರೈಲುಗಳ ಆರಂಭಕ್ಕೆ ಭಾರತೀಯ ರೈಲ್ವೆ ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts