More

    ದೇಶದಲ್ಲಿ 32 ದಶಲಕ್ಷ ಟನ್​ ತೈಲ ದಾಸ್ತಾನು

    ನವದೆಹಲಿ: ಜಾಗತಿಕವಾಗಿ ತೈಲ ಬೆಲೆ ಕುಸಿತದ ಸಂಪೂರ್ಣ ಲಾಭ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇದುವರೆಗೂ 32 ದಶಲಕ್ಷ ಟನ್​ ತೈಲವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್​ ತಿಳಿಸಿದ್ದಾರೆ.
    ವಿಶ್ವದಲ್ಲಿ ಅತಿಹೆಚ್ಚು ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.

    ಕೋವಿಡ್​ 19 ಲಾಕ್​ಡೌನ್​ನಂಥ ಸವಾಲುದಾಯಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಲಾಕ್​ಡೌನ್​ನಿಂದಾಗಿ ಜಾಗತಿಕವಾಗಿ ತೈಲಕ್ಕೆ ದಿಢೀರನೆ ಬೇಡಿಕೆ ಕಡಿಮೆಯಾಯಿತು. ಇದರಿಂದಾಗಿ ಬೆಲೆ ಕಡಿಮೆಯಾಯಿತು. ಇಂಧನ ಕ್ಷೇತ್ರದಲ್ಲಿ ಇದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಹಿಂದೆಂದೂ ಈ ರೀತಿಯ ಬೆಳವಣಿಗೆಯನ್ನು ಕಂಡಿರಲಿಲ್ಲ. ಇದರಿಂದಾಗಿ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕುಸಿಯಿತು. ಅಮೆರಿಕದಲ್ಲಂತೂ ಬೆಲೆಗಳು ಮೈನಸ್​ ಮಟ್ಟಕ್ಕೆ ಕುಸಿಯಿತು ಎಂದು ಹೇಳಿದರು.

    ಇದನ್ನೂ ಓದಿ: ಮಾನವ ಕರುಳಿನಲ್ಲೂ ವೃದ್ಧಿಸುವ ಕರೊನಾ 19 ವೈರಾಣು

    ಈ ಪರಿಸ್ಥಿತಿಯ ಲಾಭವನ್ನು ಸಂಪೂರ್ಣವಾಗಿ ತೆಗೆದುಕೊಳ್ಳಲು ಮುಂದಾದ ಭಾರತ ತನ್ನ ಸಂಗ್ರಹಗಾರಗಳೆಲ್ಲವನ್ನೂ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿತು ಎಂದು ತಿಳಿಸಿದರು.

    ಸೌದಿ ಅರೇಬಿಯಾ, ಯುಎಇ ಮತ್ತು ಇರಾಕ್​ನಿಂದ ಒಟ್ಟಾತೆ 5.33 ದಶಲಕ್ಷ ಟನ್​ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಯಿತು. ಬೇಡಿಕೆ ಮತ್ತು ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ವಿಮೆ ರೂಪದಲ್ಲಿ ಈ ಪ್ರಮಾಣದ ತೈಲವನ್ನು ಮಂಗಳೂರಿನ ಪದೂರು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಭೂಗತ ಸಂಗ್ರಹಗಾರದಲ್ಲಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

    ಇದಲ್ಲದೆ 7 ದಶಲಕ್ಷ ಟನ್​ ತೈಲ ಸಮುದ್ರದಲ್ಲಿರುವ ತೈಲ ಸಾಗಿಸುವ ನೌಕೆಗಳಲ್ಲಿ ಭರ್ತಿ ಮಾಡಲಾಗಿದೆ. ಅಂತೆಯೇ 25 ದಶಲಕ್ಷ ಟನ್​ ತೈಲವನ್ನು ದೇಶದೊಳಗಿನ ತೈಲಸಂಗ್ರಹಗಾರಗಳಲ್ಲಿ ಟ್ಯಾಂಕ್​ಗಳಲ್ಲಿ ಸಂಸ್ಕರಣಾ ಕೇಂದ್ರಗಳ ಪೈಪ್​ಲೈನ್​ಗಳಲ್ಲಿ ಮತ್ತು ಉತ್ಪನ್ನದ ಟ್ಯಾಂಕ್​ಗಳಲ್ಲಿ ಭರ್ತಿ ಮಾಡಲಾಗಿದೆ ಎಂದು ತಿಳಿಸಿದರು.

    ಜಗತ್ತಿನಾದ್ಯಂತ ಏರುಗತಿಯಲ್ಲಿದೆ ಚೀನಾ ವಿರೋಧಿ ಭಾವನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts