More

    ಚೀನಾ ವಿರುದ್ಧ ಐಸಿಜೆಯಲ್ಲಿ ಪ್ರಶ್ನಿಸಿ, 500 ಬಿಲಿಯನ್​ ಡಾಲರ್​ ಪರಿಹಾರ ಕೇಳಿ: ಪ್ರಧಾನಿಗೆ ಕಾನೂನು ಪರಿಣಿತರಿಂದ ಸಲಹಾ ಪತ್ರ

    ನವದೆಹಲಿ: ಕರೊನಾ ವೈರಸ್​ ವಿಚಾರದಲ್ಲಿ ಭಾರತವು ಚೀನಾ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದಲ್ಲಿ ಪ್ರಶ್ನಿಸಬೇಕೆಂದು ಅಂತಾರಾಷ್ಟ್ರೀಯ ಕಾನೂನು ಪರಿಣಿತರಾದ ಸೂರತ್​ ಸಿಂಗ್​ ಪ್ರಧಾನಿ ಮೋದಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

    ಕೋವಿಡ್-19ನಿಂದ ಭಾರತವು ಸಾಕಷ್ಟು ಹಾನಿಗೆ ಒಳಗಾಗಿದೆ. ಲಾಕ್​ಡೌನ್​ನಿಂದ ಆರ್ಥಿಕ ನಷ್ಟ ಉಂಟಾಗಿದೆ. ಹೀಗಾಗಿ ಭಾರತ, ಚೀನಾ ಎದುರು 500 ಬಿಲಿಯನ್​ ಡಾಲರ್​ ಪರಿಹಾರದ ಹಕ್ಕನ್ನು ಮಂಡಿಸಬೇಕು ಎಂದು ಸೂರತ್​ ಸಿಂಗ್​ ಹೇಳಿದ್ದಾರೆ.

    ಕರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಹೇರಲಾಗಿರುವ ಲಾಕ್​ಡೌನ್​ನಿಂದಾಗಿ ಇಡೀ ದೇಶದ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಪ್ರತಿದಿನ ಸುಮಾರು 4.64 ಬಿಲಿಯನ್ ಡಾಲರ್ (ಸುಮಾರು 35 ಸಾವಿರ ಕೋಟಿ ರೂ.) ನಷ್ಟವಾಗುತ್ತಿದೆ. 21 ದಿನಗಳಲ್ಲಿ ಭಾರತಕ್ಕೆ ಆಗಲಿರುವ ಒಟ್ಟು ನಷ್ಟ 98 ಬಿಲಿಯನ್ ಡಾಲರ್ (7.35 ಲಕ್ಷ ಕೋಟಿ ರೂ.) ಎಂದು ಅಕ್ಯೂಟ್ ರೇಟಿಂಗ್ಸ್ ಮತ್ತು ಸಂಶೋಧನಾ ಸಂಸ್ಥೆ ಗುರುವಾರ ಅಂದಾಜು ಮಾಡಿದೆ.

    2020ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈಗಾಗಲೇ ಭವಿಷ್ಯ ನುಡಿದಿದೆ. 2020-21ನೇ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಅವಧಿಯ ಜಿಡಿಪಿಯಲ್ಲಿ (ಒಟ್ಟು ದೇಶೀಯ ಉತ್ಪನ್ನ) ಕುಸಿತವಾಗುವ ಸಂಭವವಿದೆ ಎಂದು ಅಕ್ಯೂಟ್ ರೇಟಿಂಗ್ಸ್ ಆತಂಕ ವ್ಯಕ್ತಪಡಿಸಿದೆ.

    ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಚೀನಾ ವಿರುದ್ಧ ಕಿಡಿಕಾರಿದ್ದಾರೆ. ಇದು ಚೀನಿ ವೈರಸ್​ ಎಂದು ಆರೋಪಿಸಿದ್ದಾರೆ. ಆದರೆ, ಇದನ್ನು ಅಲ್ಲಗೆಳೆದ ಚೀನಾ ಸರ್ಕಾರ ಯುಎಸ್​ ಸೇನಾ ಪಡೆಗಳು ವೈರಸ್​ ಹೊತ್ತು ತಂದು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ತಿರುಗುಬಾಣ ಹೂಡಿದ್ದಾರೆ. (ಏಜೆನ್ಸೀಸ್​)

    ಪ್ರಧಾನಿಯ ವಿಡಿಯೋ ಸಂದೇಶದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹರಿದುಬಂತು ಬಗೆಬಗೆಯ ಹಾಸ್ಯಭರಿತ ಮೀಮ್ಸ್!​

    ಲಾಕ್​ಡೌನ್​ನಿಂದ ಪ್ರತಿದಿನ ಸರಾಸರಿ 35 ಸಾವಿರ ಕೋಟಿ ರೂಪಾಯಿ ನಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts