More

    ಇಂಡಿಯಾ ಬದಲು ಭಾರತ ಹೆಸರು ಮುನ್ನೆಲೆಗೆ ಬರಲಿ

    ಶಿರಸಿ: ಪ್ರಪಂಚದ ಹಲವು ದೇಶಗಳು ಭಾರತವನ್ನು ಹಿಂದುಸ್ಥಾನ ಎಂದು ಸಂಬೋಧಿಸುತ್ತಿದ್ದು, ಇದೇ ಸಂದರ್ಭದಲ್ಲಿ ಇಂಡಿಯಾ ಬದಲು ಭಾರತದ ಹೆಸರು ಮುನ್ನೆಲೆಗೆ ಬರಬೇಕಿದೆ ಎಂದು ಬರಹಗಾರ ನಿರಂಜನ ವಾನಳ್ಳಿ ಹೇಳಿದರು.

    ನಗರ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ತಝುಕಿಸ್ಥಾನದಲ್ಲಿ 15 ತಿಂಗಳು’ ಅನುಭವ ಕಥನ ಹಂಚಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

    ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಕಾರಣ ಪ್ರಪಂಚದ 50ಕ್ಕೂ ಹೆಚ್ಚಿನ ದೇಶಗಳಲ್ಲಿ ಸಾಂಸ್ಕೃತಿಕ ರಾಯಭಾರಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ದೇಶದಲ್ಲಿ ನಮ್ಮ ದೇಶವನ್ನು ಹಿಂದುಸ್ಥಾನ ಎಂದು ಕರೆಯುತ್ತಾರೆ. ಇಂಥ ಸಾಂಸ್ಕೃತಿಕ ಉನ್ನತಿಯ ಕಾಲಘಟ್ಟದಲ್ಲಿ ಇಂಡಿಯಾದ ಬದಲಾಗಿ ಭಾರತ ಎಂಬ ಹೆಸರೇ ಗಟ್ಟಿಗೊಳಿಸುವ ಕಾರ್ಯ ಆಗಬೇಕು ಎಂದರು.

    ತಝುಕಿಸ್ಥಾನದಲ್ಲಿ 15 ತಿಂಗಳು ಕಾಲ ಸಾಂಸ್ಕೃತಿಕ ರಾಯಭಾರಿಯಾಗಿದ್ದ ವೇಳೆ ಭಾರತದ ಸಾಂಸ್ಕೃತಿಕ ವೈಭವ ಎತ್ತಿ ಹಿಡಿಯುವ ಕಾರ್ಯವಾಗಿದೆ. ಸಾಕಷ್ಟು ಕಾರ್ಯಕ್ರಮ ಸಂಘಟಿಸಿ ಇಲ್ಲಿನ ಕಲೆಗಳಿಗೆ ವಿದೇಶದಲ್ಲಿ ವೇದಿಕೆ ಒದಗಿಸಲಾಗಿದೆ ಎಂದರು.

    ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯ ಜಿ. ಸುಬ್ರಾಯ ಭಟ್ಟ ಬಕ್ಕಳ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts