More

    ಭಾರತದಲ್ಲೇ 2021ರ ಟಿ20 ವಿಶ್ವಕಪ್, ಆಸೀಸ್‌ಗೆ 2022ರ ವಿಶ್ವಕಪ್ ಆತಿಥ್ಯ

    ದುಬೈ: ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ನಿಗದಿಯಂತೆಯೇ ನಡೆಸಲು ಐಸಿಸಿ ನಿರ್ಧರಿಸಿದೆ. ಇದರಿಂದ, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡಲಾಗಿದೆ. ಶುಕ್ರವಾರ ನಡೆದ ಐಸಿಸಿ ಮಂಡಳಿಯ ಮಹತ್ವದ ಸಭೆಯಲ್ಲಿ ಈ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

    2021ರ ಅಕ್ಟೋಬರ್-ನವೆಂಬರ್‌ನಲ್ಲಿ 7ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದ್ದರೆ, ಆಸ್ಟ್ರೇಲಿಯಾದಲ್ಲಿ 2022ರ ಅಕ್ಟೋಬರ್-ನವೆಂಬರ್‌ನಲ್ಲಿ 8ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. 2020ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದ ತಂಡಗಳು 2021ರ ವಿಶ್ವಕಪ್‌ಗೂ ಅರ್ಹತೆ ಉಳಿಸಿಕೊಳ್ಳಲಿವೆ ಎಂದು ಐಸಿಸಿ ತಿಳಿಸಿದೆ.

    ಭಾರತದಲ್ಲಿ ನಡೆಯಲಿರುವ 2ನೇ ಟಿ20 ವಿಶ್ವಕಪ್ ಟೂರ್ನಿ ಇದಾಗಿದೆ. ಇದಕ್ಕೆ ಮುನ್ನ 2016ರಲ್ಲಿ ಕೊನೆಯದಾಗಿ ನಡೆದಿರುವ ಟಿ20 ವಿಶ್ವಕಪ್ ಟೂರ್ನಿಗೂ ಭಾರತ ಆತಿಥ್ಯ ವಹಿಸಿತ್ತು. 2023ರಲ್ಲಿ ಮತ್ತೆ ಏಕದಿನ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಿಗದಿಯಾಗಿದೆ.

    ಇದನ್ನೂ ಓದಿ: 3ನೇ ಬಾರಿಗೆ ಅಪ್ಪನಾಗುತ್ತಿದ್ದಾರೆ ಆಸ್ಟ್ರೆಲಿಯಾ ಕ್ರಿಕೆಟಿಗ ಶಾನ್​ ಮಾರ್ಷ್​

    2023ರಲ್ಲಿ ಮಾರ್ಚ್-ಏಪ್ರಿಲ್‌ಗೆ ಬದಲಾಗಿ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ. ಕರೊನಾ ಹಾವಳಿಯಿಂದ ಟೂರ್ನಿಯ ಅರ್ಹತಾ ಸರಣಿಗಳಿಗೆ ಅಡಚಣೆಯಾಗಿರುವ ಕಾರಣ, ಈ ವಿಶ್ವಕಪ್ ಅಲ್ಪ ಸಮಯದ ಮುಂದೂಡಿಕೆ ಕಂಡಿದೆ.

    ಚೆನ್ನೈ ಸೂಪರ್‌ಕಿಂಗ್ಸ್ ತಂಡದಿಂದ ಕುಟುಂಬ ಸದಸ್ಯರಿಗೆ ನಿರ್ಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts