More

    24 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಕೋವಿಡ್ ಕೇಸ್​: ವಿಶ್ವದ ಅತಿ ಹೆಚ್ಚು ಏಕದಿನ ಪ್ರಕರಣಗಳು!

    ನವದೆಹಲಿ: ಕಳೆದ 24 ಗಂಟೆಗಳಲ್ಲಿ ಒಟ್ಟು 3,32,730 ಹೊಸ ಕೋವಿಡ್​ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, ಇದು ವಿಶ್ವದಲ್ಲೇ ದಿನವೊಂದಕ್ಕೆ ದಾಖಲಾದ ಹೆಚ್ಚು ಪ್ರಕರಣಗಳಾಗಿವೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ಬೆಳಗ್ಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ ಈವರೆಗೂ ಒಟ್ಟು 1,62,63,695 ಕರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 2,263 ಸಾವುಗಳಾಗಿದ್ದು, ಈವರೆಗೂ 1,86, 920 ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 568 ಮಂದಿ ಮೃತರಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 306 ಮಂದಿ ಸಾವಿಗೀಡಾಗಿದ್ದಾರೆ.

    ದೇಶದಲ್ಲಿ 24,28,616 ಸಕ್ರೀಯ ಪ್ರಕರಣಗಳಿದ್ದು, ಈವರೆಗೂ 1,36,48,159 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಏಪ್ರಿಲ್​ 15ರಂದು 2 ಲಕ್ಷ ಮತ್ತು ಏಪ್ರಿಲ್​ 22ರಲ್ಲಿ 3 ಲಕ್ಷ ಪ್ರಕರಣಗಳು ದಿನವೊಂದಕ್ಕೆ ವರದಿಯಾಗಿದ್ದು, ಕೇವಲ 17 ದಿನಗಳಲ್ಲಿ ಭಾರತದ ಕರೊನಾ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿದೆ.

    ಇದುವರೆಗೂ ವಿಶ್ವದಲ್ಲಿ ದಿನವೊಂದಕ್ಕೆ 2,97,430 ಪ್ರಕರಣಗಳು ಅಮೆರಿಕದಲ್ಲಿ ಕಳೆದ ಜನವರಿಯಲ್ಲಿ ವರದಿಯಾಗಿತ್ತು. ಇದೀಗ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,14,835 ಪ್ರಕರಣಗಳು ದಾಖಲಾಗುವ ಮೂಲಕ ವಿಶ್ವದಲ್ಲೇ ದಿನವೊಂದಕ್ಕೆ ದಾಖಲಾದ ಹೆಚ್ಚು ಪ್ರಕರಣಗಳಾಗಿವೆ. (ಏಜೆನ್ಸೀಸ್​)

    ಪ್ರಿಯಕರನ ಮಾತು ನಂಬಿ ಹೋಟೆಲ್​ಗೆ​ ಹೋದವಳು ಹೆಣವಾಗಿದ್ದೇಕೆ? 3 ತಿಂಗಳ ಬಳಿಕ ಸತ್ಯಾಂಶ ಬಯಲು!

    ನಾಗಿಣಿಯ ರೀಲ್ ಆರತಕ್ಷತೆ; ಜೀ ಕನ್ನಡದಿಂದ ಹೀಗೊಂದು ಪ್ರಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts