More

    ಒಂದೇ ಗುಂಪಿನಲ್ಲಿವೆ ಭಾರತ, ಪಾಕಿಸ್ತಾನ; ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿ ಖಚಿತ

    ದುಬೈ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸುಮಾರು 2 ವರ್ಷಗಳ ಬಳಿಕ ಮುಖಾಮುಖಿಯಾಗಲು ಮುಂಬರುವ ಟಿ20 ವಿಶ್ವಕಪ್ ಟೂರ್ನಿ ವೇದಿಕೆಯಾಗಲಿದೆ. ಬಿಸಿಸಿಐ ಆತಿಥ್ಯದಲ್ಲಿ ಯುಎಇ ಮತ್ತು ಓಮನ್‌ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿರುವ 7ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಗುಂಪುಗಳನ್ನು ಐಸಿಸಿ ಶುಕ್ರವಾರ ಅನಾವರಣಗೊಳಿಸಿದ್ದು, ಭಾರತ-ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

    ಟೂರ್ನಿಯ ಸೂಪರ್-12 ಹಂತದಲ್ಲಿ ತಲಾ 6 ತಂಡಗಳ 2 ಗುಂಪುಗಳಿದ್ದು, ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಜತೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು 1ನೇ ಸ್ಥಾನ ಪಡೆದಿವೆ. 2ನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನದ ಜತೆಗೆ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳಿವೆ. ಇವೆರಡೂ ಗುಂಪುಗಳಿಗೂ ಮೊದಲ ಹಂತದಿಂದ ತಲಾ 2 ತಂಡಗಳು ಬಡ್ತಿ ಪಡೆಯಲಿವೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಂಚಲಿವೆ ಮೇಡ್ ಇನ್ ಇಂಡಿಯಾ ಕ್ರೀಡಾ ಸಾಮಗ್ರಿಗಳು!

    ಟೂರ್ನಿಯ ಮೊದಲ ಹಂತದಲ್ಲಿ ತಲಾ 4 ತಂಡಗಳ 2 ಗುಂಪುಗಳಿವೆ. ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್ ಮತ್ತು ನಮೀಬಿಯಾ ಎ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿಯಾ ಮತ್ತು ಓಮನ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಒಂದನೇ ಹಂತದ ಎ ಗುಂಪಿನ ವಿಜೇತ ಮತ್ತು ಬಿ ಗುಂಪಿನ ರನ್ನರ್‌ಅಪ್ ತಂಡ ಸೂಪರ್-12ರ 1ನೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ. ಒಂದನೇ ಹಂತದ ಬಿ ಗುಂಪಿನ ವಿಜೇತ ಮತ್ತು ಎ ಗುಂಪಿನ ರನ್ನರ್‌ಅಪ್ ತಂಡಗಳು ಸೂಪರ್-12ರ 2ನೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ. 2021ರ ಮಾರ್ಚ್ 20ಕ್ಕೆ ಅನ್ವಯಿಸುವ ಐಸಿಸಿ ರ‌್ಯಾಂಕಿಂಗ್ ಅನ್ವಯ ಗುಂಪುಗಳನ್ನು ರಚಿಸಲಾಗಿದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಆಡಲಿವೆ.

    ಒಂದನೇ ಹಂತದ ಪಂದ್ಯಗಳು ಓಮನ್ ಮತ್ತು ಯುಎಇಯಲ್ಲಿ ನಡೆಯಲಿದ್ದರೆ, ಸೂಪರ್-12ರ ಪಂದ್ಯಗಳು ಯುಎಇಯ ಅಬುಧಾಬಿ, ದುಬೈ ಮತ್ತು ಶಾರ್ಜಾ ಮೈದಾನಗಳಲ್ಲಿ ನಡೆಯಲಿವೆ. ಸೂಪರ್-12ರಲ್ಲೂ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ಗೇರಲಿವೆ. ಟೂರ್ನಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ನಡೆಯಬೇಕಾಗಿದ್ದ ಈ ವಿಶ್ವಕಪ್ ಕರೊನಾ ಹಾವಳಿಯಿಂದಾಗಿ ಸ್ಥಳಾಂತರಗೊಂಡಿದ್ದರೂ, ಬಿಸಿಸಿಐ ಆತಿಥ್ಯದಲ್ಲೇ ಆಯೋಜನೆಗೊಳ್ಳುತ್ತಿದೆ. ಟೂರ್ನಿಯ ಪಂದ್ಯಗಳ ವೇಳಾಪಟ್ಟಿ ಕೂಡ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

    5 ವರ್ಷಗಳ ಬಳಿಕ ಟಿ20 ವಿಶ್ವಕಪ್
    ಟಿ20 ವಿಶ್ವಕಪ್ 5 ವರ್ಷಗಳ ಬಳಿಕ ನಡೆಯುತ್ತಿದೆ. 2016ರಲ್ಲಿ ಕೊನೆಯದಾಗಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆದಿತ್ತು. 2019ರ ಏಕದಿನ ವಿಶ್ವಕಪ್ ಬಳಿಕ ಪುರುಷರ ಕ್ರಿಕೆಟ್‌ನಲ್ಲಿ ಐಸಿಸಿ ಆಯೋಜಿಸುತ್ತಿರುವ ಮೊದಲ ಬಹುರಾಷ್ಟ್ರಗಳ ಟೂರ್ನಿ ಇದಾಗಿರಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿದ್ದ 2020ರ ಟಿ20 ವಿಶ್ವಕಪ್, ಕರೊನಾ ಭೀತಿಯಿಂದಾಗಿ 2022ಕ್ಕೆ ಮುಂದೂಡಲ್ಪಟ್ಟಿದೆ.

    ಸೂಪರ್-12 ಗುಂಪುಗಳು:

    ಗ್ರೂಪ್-1
    *ಇಂಗ್ಲೆಂಡ್
    *ಆಸ್ಟ್ರೇಲಿಯಾ
    *ದಕ್ಷಿಣ ಆಫ್ರಿಕಾ
    *ವೆಸ್ಟ್ ಇಂಡೀಸ್
    *ಗ್ರೂಪ್-ಎ ವಿಜೇತ
    *ಗ್ರೂಪ್-ಬಿ ರನ್ನರ್‌ಅಪ್

    ಗ್ರೂಪ್-2:
    *ಭಾರತ
    *ಪಾಕಿಸ್ತಾನ
    *ನ್ಯೂಜಿಲೆಂಡ್
    *ಅಫ್ಘಾನಿಸ್ತಾನ
    *ಗ್ರೂಪ್-ಎ ರನ್ನರ್‌ಅಪ್
    *ಗ್ರೂಪ್-ಬಿ ವಿಜೇತ

    ರೌಂಡ್-1:

    ಗ್ರೂಪ್-ಎ:
    *ಶ್ರೀಲಂಕಾ
    *ಐರ್ಲೆಂಡ್
    *ನೆದರ್ಲೆಂಡ್ಸ್
    *ನಮೀಬಿಯಾ

    ಗ್ರೂಪ್-ಬಿ:
    *ಬಾಂಗ್ಲಾದೇಶ
    *ಸ್ಕಾಟ್ಲೆಂಡ್
    *ಪಪುವಾ ನ್ಯೂ ಗಿನಿಯಾ
    *ಓಮನ್

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಧಾರಣೆಗೆ ಸ್ವಸಹಾಯ ಪದ್ಧತಿ!

    ಬಾಲಿವುಡ್ ನಟಿ ಕಿಮ್ ಶರ್ಮ ಜತೆ ಟೆನಿಸ್ ತಾರೆ ಲಿಯಾಂಡರ್ ಪೇಸ್ ಡೇಟಿಂಗ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts