More

    ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?

    ಟೋಕಿಯೊ: ಒಲಿಂಪಿಕ್ಸ್ ಇತಿಹಾಸದಲ್ಲೇ ಅಪೂರ್ವವೆನಿಸಿದ ಶುಭಾರಂಭವನ್ನು ಭಾರತ, ಸೂರ್ಯ ಉದಯಿಸುವ ನಾಡು ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಕಂಡಿದೆ. ವೇಟ್‌ಲ್ಟಿರ್ ಮೀರಾಬಾಯಿ ಚಾನು ಅಮೋಘ ನಿರ್ವಹಣೆಯ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಕ್ರೀಡಾಸ್ಪರ್ಧೆಯ ಮೊದಲ ದಿನವೇ ಪದಕ ಜಯಿಸಿದ ಸಾಧನೆಯನ್ನು ಮೊದಲ ಬಾರಿಗೆ ದಾಖಲಿಸಿತು.

    ಮೀರಾಬಾಯಿ ಸಾಧನೆಯಿಂದ ಭಾರತ, ಮೊದಲ ದಿನದಿಂದಲೇ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಮೀರಾ ಸಾಧನೆಯಿಂದ ಭಾರತ ತಂಡ, ಶನಿವಾರ ಬೆಳಗ್ಗೆ ಕೆಲಕಾಲ ಪದಕ ಪಟ್ಟಿಯಲ್ಲಿ 2ನೇ ಸ್ಥಾನವನ್ನೂ ಅಲಂಕರಿಸಿತ್ತು. ಬಳಿಕ ಭಾರತ ತಂಡ 12ನೇ ಸ್ಥಾನಕ್ಕೆ ಕುಸಿತ ಕಂಡಿತು. 2018ರ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ ಪದಕವನ್ನು ಮೀರಾ ಅವರೇ ಗೆದ್ದುಕೊಟ್ಟಿದ್ದರು.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಕೋಟ್ಯಧಿಪತಿ! ರಾಜ್ಯ ಸರ್ಕಾರಗಳಿಂದ ಕೋಟಿ ಕೋಟಿ ಬಹುಮಾನ

    ಚೀನಾ ಮೊದಲ ದಿನ 3 ಚಿನ್ನದ ಪದಕ ಜಯಿಸುವ ಮೂಲಕ ಅಗ್ರಸ್ಥಾನ ಅಲಂಕರಿಸಿದರೆ, ಇಟಲಿ ಮತ್ತು ಆತಿಥೇಯ ಜಪಾನ್ ತಲಾ 1 ಚಿನ್ನ, ಬೆಳ್ಳಿ ಪದಕದೊಂದಿಗೆ 2ನೇ ಸ್ಥಾನವನ್ನು ಹಂಚಿಕೊಂಡಿವೆ. ದಕ್ಷಿಣ ಕೊರಿಯಾ 1 ಚಿನ್ನ, 2 ಕಂಚಿನೊಂದಿಗೆ 4ನೇ ಸ್ಥಾನದಲ್ಲಿದೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾದಂಥ ಬಲಿಷ್ಠ ತಂಡಗಳು ಪದಕಪಟ್ಟಿಗೆ ಇನ್ನೂ ಪ್ರವೇಶ ಪಡೆದಿಲ್ಲ. ಭಾನುವಾರ ಈಜು, ಸೈಕ್ಲಿಂಗ್ ಸ್ಪರ್ಧೆಗಳು ಆರಂಭಗೊಳ್ಳುತ್ತಿರುವುದರಿಂದ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ತಂಡಗಳು ಪದಕ ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.

    Tokyo Olympics| ಭಾರತದ ಪದಕ ಬೇಟೆ ಆರಂಭ: ಬೆಳ್ಳಿ ಪದಕ ಗೆದ್ದ ವೇಟ್​ಲಿಫ್ಟರ್​ ಮೀರಾಬಾಯಿ ಚಾನು​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts