ನವದೆಹಲಿ: ಇಂದು ವಿಶ್ವ ನಿದ್ರಾ ದಿನ. ಜಗತ್ತಿನಾದ್ಯಂತ ಆಚರಿಸುತ್ತಿರುವ ಈ ಅಂತಾರಾಷ್ಟ್ರೀಯ ನಿದ್ರಾ ದಿನದ ಹಿನ್ನೆಲೆಯಲ್ಲಿ ನಿದ್ರೆಗೆ ಸಂಬಂಧಿಸಿದ ಒಂದಷ್ಟು ಸಂಗತಿಗಳು ಹೊರಬರುವುದು ಸರ್ವೇಸಾಮಾನ್ಯ. ಅದೇ ರೀತಿ ಈ ವರ್ಷವೂ ನಿದಿರೆಯ ಬಗ್ಗೆ ಕೆಲವು ಮಾಹಿತಿ ಬಹಿರಂಗಗೊಂಡಿದೆ.
ಅದರಲ್ಲೂ ನಿದ್ರಾಹೀನತೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂಬುದು ಅಧ್ಯಯನವೊಂದರಿಂದ ಬಹಿರಂಗಗೊಂಡಿದೆ. ನಿದ್ರಾಹೀನತೆಯ ವಿಚಾರದಲ್ಲಿ ಜಗತ್ತಿನಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ
ZzzQuil ಇಂಡಿಯಾ ನ್ಯಾಷನಲ್ ಸ್ಲೀಪ್ ಸರ್ವೇ ಪ್ರಕಾರ ನಿದ್ರಾಹೀನತೆ ಪ್ರಮುಖ ಕಾರಣ ಕೂಡ ಬಯಲಾಗಿದೆ. ನಿದ್ರಾಹೀನತೆಯಲ್ಲಿ ಬಳಲುತ್ತಿರುವವರ ಪೈಕಿ ಶೇ. 54 ಜನರಲ್ಲಿ ಅವರ ನಿದ್ರಾಸಮಸ್ಯೆಗೆ ಸೋಷಿಯಲ್ ಹಾಗೂ ಡಿಜಿಟಲ್ ಮೀಡಿಯಾ ವ್ಯಸನವೇ ಕಾರಣ ಎಂಬುದೂ ತಿಳಿದುಬಂದಿದೆ.
ಇದನ್ನೂ ಓದಿ: ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?
ಮತ್ತೊಂದೆಡೆ ದ ಗ್ರೇಟ್ ಇಂಡಿಯಾ ಸ್ಲೀಪ್ ಸ್ಕೋರ್ಕಾರ್ಡ್ ಪ್ರಕಾರ ಭಾರತದಲ್ಲಿ ಶೇ. 87 ಮಂದಿ ಮಲಗುವುದಕ್ಕೂ ಮುನ್ನ ಸ್ಮಾರ್ಟ್ಫೋನ್ ಬಳಸುವುದೇ ನಿದ್ರಾಹೀನತೆಗೆ ಪ್ರಮುಖ ಕಾರಣ. ಇನ್ನು ಮಹಿಳೆಯರಲ್ಲಿ ಸುಮಾರು ಶೇ. 67 ಮಂದಿ ಕೆಲಸದ ವೇಳೆ ತೂಕಡಿಸಿದರೆ, ಪುರುಷರಲ್ಲಿ ಈ ಪ್ರಮಾಣ ಶೇ. 56. ಅದರಲ್ಲೂ ಕಳೆದ ಒಂದು ವರ್ಷದಲ್ಲಿ ಕೆಲಸದ ವೇಳೆ ತೂಕಡಿಸುವವರ ಪ್ರಮಾಣ ಭಾರತದಲ್ಲಿ ಶೇ. 21 ಹೆಚ್ಚಾಗಿದೆ ಎಂದೂ ಈ ಅಧ್ಯಯನ ಹೇಳಿದೆ.
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!