More

    ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್​ಪೋರ್ಟ್​ಗಳ ಪಟ್ಟಿಯಲ್ಲಿ ಭಾರತಕ್ಕೆ 85ನೇ ಸ್ಥಾನ

    ನವದೆಹಲಿ: ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್​ಪೋರ್ಟ್​ಗಳ ಪಟ್ಟಿಯಲ್ಲಿ ಭಾರತದ ಪಾಸ್​ಪೋರ್ಟ್ 85ನೇ ಸ್ಥಾನ ಪಡೆದುಕೊಂಡಿದೆ. ಹೆನ್ಲಿ ಪಾಸ್​ಪೋರ್ಟ್ ಸೂಚ್ಯಂಕ ಮಂಗಳವಾರ ಬಿಡುಗಡೆಯಾಗಿದ್ದು, ಯಾವ್ಯಾವ ದೇಶಗಳು ಯಾವ ಶ್ರೇಯಾಂಕ ಪಡೆದು ಕೊಂಡಿವೆ ಎಂಬ ಕಿರು ಮಾಹಿತಿ.

    ಭಾರತದ ಶ್ರೇಯಾಂಕ

    ಕಳೆದ ವರ್ಷ 83ನೇ ಶ್ರೇಯಾಂಕದಲ್ಲಿದ್ದ ಭಾರತದ ಪಾಸ್​ಪೋರ್ಟ್ 2 ಸ್ಥಾನ ಕುಸಿಯುವ ಮೂಲಕ 85ನೇ ಸ್ಥಾನಕ್ಕೆ ತಲುಪಿದೆ. ಈ ಹಿಂದೆ 2019, 2020, 2021 ಮತ್ತು 2022ರಲ್ಲಿ ದೇಶವು ಕ್ರಮವಾಗಿ 82, 84,85 ಮತ್ತು 83ನೇ ಸ್ಥಾನದಲ್ಲಿತ್ತು. ಭಾರತದ ಪಾಸ್​ಪೋರ್ಟ್ ಹೊಂದಿರುವವರು ಭೂತಾನ್, ಕಾಂಬೋಡಿಯಾ, ಇಂಡೋನೇಷ್ಯಾ, ಮಕಾವೊ, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಕೀನ್ಯಾ, ಮಾರಿಷಸ್, ಸೀಶೆಲ್ ಮತ್ತು ಕತಾರ್​ನಂತಹ 59 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದು.

    ಜಪಾನ್ ನಂ.1

    ಜಪಾನ್ ಸತತ ಐದು ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿದೆ. ಈ ದೇಶದ ಜನರು 227 ದೇಶಗಳ ಪೈಕಿ 193 ದೇಶಗಳಿಗೆ ಪೂರ್ವ ನಿಗದಿತ ವೀಸಾ ಇಲ್ಲದೆಯೇ ಭೇಟಿ ನೀಡಬಹುದಾಗಿದೆ.

    ಯಾರಿಗೆ ಯಾವ ಸ್ಥಾನ?

    ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ ದ್ವಿತೀಯ ಸ್ಥಾನ ಅಲಂಕರಿಸಿದ್ದು, ವೀಸಾ ಇಲ್ಲದೆಯೇ 192 ದೇಶಗಳಿಗೆ, ಜರ್ಮನಿ ಮತ್ತು ಸ್ಪೇನ್ ಜಂಟಿಯಾಗಿ ತೃತೀಯ ಸ್ಥಾನ ಹಂಚಿಕೊಂಡಿದ್ದು, 190 ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಬ್ರಿಟನ್ ಮತ್ತು ಅಮೆರಿಕ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿವೆ.

    ಕಳಪೆ ಪಾಸ್​ಪೋರ್ಟ್

    ಅಫ್ಘಾನಿಸ್ತಾನದ ಪಾಸ್​ಪೋರ್ಟ್ 109ನೇ ಶ್ರೇಯಾಂಕದಲ್ಲಿದ್ದು, ಅತ್ಯಂತ ಕಳಪೆಯಾಗಿದ್ದು, 27 ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಪಾಕಿಸ್ತಾನ 106ನೇ ಸ್ಥಾನದಲ್ಲಿದ್ದು, ಜನರು 32 ದೇಶಗಳಿಗೆ ಭೇಟಿ ನೀಡಲು ಸಮರ್ಥರಾಗಿದ್ದಾರೆ.

    ಹೆನ್ಲಿ ಪಾಸ್​ಪೋರ್ಟ್ ಸೂಚ್ಯಂಕ

    ಲಂಡನ್ ಮೂಲದ ಡಾ. ಕ್ರಿಶ್ಚಿಯನ್ ಎಚ್ ಕೈಲಿನ್ ಎಂಬುವರು ಜಾಗತಿಕ ಪೌರತ್ವ ಮತ್ತು ನಿವಾಸ ಸಲಹಾ ಸಂಸ್ಥೆ ‘ಹೆನ್ರಿ ಆಂಡ್ ಪಾರ್ಟನರ್ಸ್’ ಹುಟ್ಟು ಹಾಕಿದರು. ಇದು ಇಂಟರ್ ನ್ಯಾಷನಲ್ ಏರ್ ಟ್ರಾನ್ಸ್​ಪೋರ್ಟ್ ಅಸೋಸಿಯೇಷನ್ (ಐಎಟಿಎ) ಒದಗಿಸುವ ಅಂಕಿ-ಅಂಶಗಳನ್ನು ಆಧರಿಸಿ ಪಾಸ್​ಪೋರ್ಟ್ ಶ್ರೇಯಾಂಕವನ್ನು ಸಿದ್ಧಪಡಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts