More

    ಬಹು ಪ್ರತಿಷ್ಠಿತ ಬ್ಯೂಟಿ ಬ್ರ್ಯಾಂಡ್​ಗಳ ಪಟ್ಟಿಯಲ್ಲಿ ಭಾರತ ಉನ್ನತ ಸ್ಥಾನದಲ್ಲಿದೆ: ಶಿಸಿಡೊ APAC ಸಿಇಒ ನಿಕೋಲ್​ ಟ್ಯಾನ್

    ನವದೆಹಲಿ: ಬಹು ಪ್ರತಿಷ್ಠಿತ ಬ್ಯೂಟಿ ಬ್ರ್ಯಾಂಡ್​ಗಳ ಪಟ್ಟಿಯಲ್ಲಿ ಭಾರತವು ಉನ್ನತ ಸ್ಥಾನದಲ್ಲಿದೆ ಎಂದು ಜಪಾನಿನ ಶಿಸಿಡೊದ ಏಷ್ಯಾ-ಪೆಸಿಫಿಕ್ (ಎಪಿಎಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಧ್ಯಕ್ಷೆ ನಿಕೋಲ್​ ಟ್ಯಾನ್ ಮಂಗಳವಾರ (ಅ.17) ಹೇಳಿದರು. ​

    ತಮ್ಮ ಕಂಪನಿಯ ನಾರ್ಸ್​ (NARS) ಕಾಸ್ಮೆಟಿಕ್ ಮೇಕಪ್​​ ಬ್ರ್ಯಾಂಡ್ ಉದ್ಘಾಟಿಸಲು ಭಾರತದಲ್ಲಿರುವ ನಿಕೋಲ್​ ಟ್ಯಾನ್​, ಭಾರತೀಯ ಆರ್ಥಿಕತೆಯು ಅತ್ಯಂತ ಪುನಶ್ಚೈತನ್ಯಶಕ್ತಿಯನ್ನು ಹೊಂದಿದೆ ಮತ್ತು ಇಲ್ಲಿನ ಗ್ರಾಹಕರು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಸಿದ್ಧರಾಗಿದ್ದಾರೆ. ಭಾರತವು ನಮ್ಮ ಕಂಪನಿಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ ಎಂದರು.

    ಭಾರತೀಯ ಬ್ಯೂಟಿ ಮಾರ್ಕೆಟ್​ ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಎರಡು ಅಂಕಿಯ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್)ದೊಂದಿಗೆ ಬೆಳೆಯಲಿದ್ದು, 2025ರ ವೇಳೆಗೆ 20 ಬಿಲಿಯನ್ ಡಾಲರ್​ ತಲುಪಲಿದೆ. ಇದು ನಿಜಕ್ಕೂ ಹೆಚ್ಚು ಉತ್ತೇಜಕವಾಗಿದೆ ಮತ್ತು ಪ್ರಪಂಚದ ಇತರ ಮಾರುಕಟ್ಟೆಗಳಲ್ಲಿ ನಾವು ನೋಡಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಟ್ಯಾನ್ ಹೇಳಿದರು.

    ಇದನ್ನೂ ಓದಿ: ಗುಜರಿ ವಿಲೇವಾರಿಯಿಂದ ಕೇಂದ್ರಕ್ಕೆ 117 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

    2001ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಕಂಪನಿಯು, ತಾನು ಸ್ಪರ್ಧಿಸುವ ಪ್ರತಿಷ್ಠೆಯ ಬ್ಯೂಟಿ ವಿಭಾಗದಲ್ಲಿ ಭಾರತದಲ್ಲಿ ಸುಮಾರು 15 ಪ್ರತಿಶತದಷ್ಟು ಸಿಎಜಿಆರ್‌ನಲ್ಲಿ ಬೆಳವಣಿಗೆ ಹೊಂದಲಿದೆ ಎಂದು ಹೇಳಿದೆ. ಒಟ್ಟಾರೆಯಾಗಿ ನೋಡಿದರೆ ಇದು ಅತ್ಯಂತ ಆಸಕ್ತಿದಾಯಕ ಸಂಖ್ಯೆಯಾಗಿದ್ದು, ಭಾರತವನ್ನು ಅನೇಕ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಇರಿಸುತ್ತದೆ ಎಂದು ಕಂಪನಿ ಹೇಳಿದೆ.

    ಇಂದಿನ ಅಂತರ್ಜಾಲ, ಪ್ರಭಾವಶಾಲಿ ಸಂಸ್ಕೃತಿ ಮತ್ತು ಪ್ರವಾಸದ ಗಣನೀಯ ಏರಿಕೆಯಿಂದಾಗಿ ಭಾರತದ ಯುವ ಮಹಿಳಾ ಗ್ರಾಹಕರು ಕಳೆದ ಕೆಲವು ವರ್ಷಗಳಿಂದ ವಿವಿಧ ವಿಧಾನಗಳ ಮೂಲಕ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ತಮ್ಮನ್ನು ತಾವು ಸಾಕಷ್ಟು ಒಡ್ಡಿಕೊಂಡಿರುವ ಕಾರಣ ನಾರ್ಸ್​ ಕಾಸ್ಮೆಟಿಕ್ಸ್​ ಅನ್ನು ಭಾರತದಲ್ಲಿ ಪರಿಚಯಿಸಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಮತ್ತೊಂದು ಕಾರಣವೆಂದರೆ, ಭಾರತೀಯ ಮಹಿಳೆಯರಿಗೆ ಇದರಿಂದ ಹೆಚ್ಚು ಉದ್ಯೋಗ ಅವಕಾಶಗಳು ದೊರೆಯುತ್ತವೆ ಮತ್ತು ಆದಾಯದ ಮಟ್ಟಗಳು ಹೆಚ್ಚುವುದನ್ನು ಕಂಪನಿಯು ನಿರೀಕ್ಷಿಸುತ್ತದೆ ಎಂದು ಹೇಳಿದೆ.

    ಅಂದಹಾಗೆ ನಾರ್ಸ್​ ಕಾಸ್ಮೆಟಿಕ್ ಬ್ರ್ಯಾಂಡ್ ಶಾಪರ್ಸ್ ಸ್ಟಾಪ್‌ನಲ್ಲಿ ಮೂರು ಶಾಪ್-ಇನ್-ಶಾಪ್ ಟಚ್ ಪಾಯಿಂಟ್‌ಗಳು, ಹತ್ತು ಸೆಫೊರಾ ಔಟ್‌ಲೆಟ್‌ಗಳು ಮತ್ತು ನವದೆಹಲಿಯ ಆಯ್ದ ಸಿಟಿವಾಕ್‌ನಲ್ಲಿರುವ ಫ್ರೀ-ಸ್ಟ್ಯಾಂಡಿಂಗ್ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ. ಆನ್‌ಲೈನ್‌ನಲ್ಲಿ, ಇದು ದೇಶದ Sephora ಆನ್‌ಲೈನ್ ಸ್ಟೋರ್‌ಗಳಲ್ಲಿ ಮತ್ತು Shopperstop.com ಮೂಲಕ ಲಭ್ಯವಾಗಲಿದೆ. (ಏಜೆನ್ಸೀಸ್​)

    ಗಾಜಾದ ಆಸ್ಪತ್ರೆ ಮೇಲಿನ ದಾಳಿಗೆ 500ಕ್ಕೂ ಹೆಚ್ಚು ಸಾವು: ಭಯಾನಕ ಎಂದ ವಿಶ್ವಸಂಸ್ಥೆ, ಜೋ ಬೈಡೆನ್​ ಕಳವಳ, ಇರಾನ್​ ಎಚ್ಚರಿಕೆ

    ಮೊದಲ ಬಾರಿಗೆ 50 ಲಕ್ಷ ಗಡಿ ದಾಟಿದ ಚಾರ್ ಧಾಮ್ ಯಾತ್ರಿಕರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts