More

    ಇಂದಿನಿಂದ ಕೊಹ್ಲಿ ಬಳಗದ ತ್ರಿದಿನ ಅಭ್ಯಾಸ; ಮಯಾಂಕ್‌ಗೆ ಮೇಲೆ ಗಮನ

    ಡರ್‌ಹ್ಯಾಂ: ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡ ಮಂಗಳವಾರದಿಂದ ಕೌಂಟಿ ಸೆಲೆಕ್ಟ್ ಇಲೆವೆನ್ ತಂಡದ ವಿರುದ್ಧ ತ್ರಿದಿನ ಅಭ್ಯಾಸ ಪಂದ್ಯ ಆಡಲಿದೆ. ಗಾಯಾಳು ಶುಭಮಾನ್ ಗಿಲ್ ಗೈರಿನಲ್ಲಿ ಆರಂಭಿಕನ ಪಾತ್ರಕ್ಕೆ ಪ್ರಮುಖ ಆಕಾಂಕ್ಷಿಯಾಗಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ನಿರ್ವಹಣೆಯ ಮೇಲೆ ಟೀಮ್ ಮ್ಯಾನೇಜ್‌ಮೆಂಟ್ ಗಮನವಿಟ್ಟಿದೆ. ಕರೊನಾ ಸೋಂಕಿನಿಂದ ಗುಣಮುಖರಾಗಿರುವ ನಡುವೆಯೂ ರಿಷಭ್ ಪಂತ್ ಗೈರಾಗಲಿದ್ದು, ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ.

    ಈ ಪಂದ್ಯ ಪ್ರಥಮ ದರ್ಜೆ ಮಾನ್ಯತೆಯನ್ನು ಹೊಂದಿದ್ದು, ಕಳೆದ ಕೆಲ ವರ್ಷಗಳಲ್ಲಿ ಭಾರತ ತಂಡ ವಿದೇಶಿ ಪ್ರವಾಸದಲ್ಲಿ ಆಡುತ್ತಿರುವ ಮೊದಲ ಪ್ರಥಮ ದರ್ಜೆ ಅಭ್ಯಾಸ ಪಂದ್ಯ ಇದಾಗಿರಲಿದೆ. ಧೋನಿ ನಾಯಕತ್ವ ವಹಿಸಿದ ಬಳಿಕ ಭಾರತ ಅಧಿಕೃತ ಅಭ್ಯಾಸ ಪಂದ್ಯಗಳಿಗೆ ಬದಲಾಗಿ ನೆಟ್ಸ್ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿತ್ತು.

    ಇಂಗ್ಲೆಂಡ್‌ನಲ್ಲಿ ಡೆಲ್ಟಾ ಸೋಂಕಿಗೆ ತುತ್ತಾಗಿದ್ದ ರಿಷಭ್ ಪಂತ್ 10 ದಿನಗಳ ಕ್ವಾರಂಟೈನ್‌ನಿಂದ ಹೊರಬಂದಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೆ ಡರ್‌ಹ್ಯಾಂನಲ್ಲಿ ತಂಡದ ಬಯೋಬಬಲ್ ಅನ್ನು ಇನ್ನಷ್ಟೇ ಸೇರಿಕೊಳ್ಳಬೇಕಾಗಿದೆ. ಅಭ್ಯಾಸ ಪಂದ್ಯದಿಂದ ಅವರು ವಿಶ್ರಾಂತಿ ಪಡೆದರೂ, ಆಗಸ್ಟ್ 4ರಿಂದ ನಾಟಿಂಗ್‌ಹ್ಯಾಂನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

    ಎದುರಾಳಿ ಕೌಂಟಿ ಸೆಲೆಕ್ಟ್ ಇಲೆವೆನ್ ತಂಡ ಕೌಂಟಿ ಚಾಂಪಿಯನ್‌ಷಿಪ್‌ನ ಆಯ್ದ ಪ್ರಮುಖ ಆಟಗಾರರಿಂದ ಕೂಡಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಒಬ್ಬ ಆಟಗಾರನಷ್ಟೇ (ಜೇಮ್ಸ್ ಬ್ರೇಸಿ) ತಂಡದಲ್ಲಿದ್ದಾರೆ.

    ಮಯಾಂಕ್‌ಗೆ ಮೇಲೆ ಗಮನ
    ಗಿಲ್ ಗೈರಿನಲ್ಲಿ ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮ ಜತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್‌ಬರ ಅನುಭವಿಸಿದ ಕಾರಣ ಆಡುವ ಬಳಗದಿಂದ ಹೊರಬಿದ್ದಿದ್ದ ಮಯಾಂಕ್, ಉತ್ತಮ ನಿರ್ವಹಣೆ ತೋರಿದರೆ ಟೆಸ್ಟ್‌ನಲ್ಲೂ ಅವಕಾಶ ಪಡೆಯಲಿದ್ದಾರೆ. ಇಲ್ಲದಿದ್ದರೆ ಮತ್ತೋರ್ವ ಕನ್ನಡಿಗ ಕೆಎಲ್ ರಾಹುಲ್ ಅವರಿಂದ ಇನಿಂಗ್ಸ್ ಆರಂಭಿಸುವತ್ತ ಟೀಮ್ ಮ್ಯಾನೇಜ್‌ಮೆಂಟ್ ಒಲವು ತೋರಬಹುದು. ಮಯಾಂಕ್ ಮಿಂಚಿದರೆ ಆಗ ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಪರಿಗಣಿಸಲ್ಪಡಬಹುದು. ಬೌಲಿಂಗ್ ವಿಭಾಗದಲ್ಲಿ ವೇಗಿ ಮೊಹಮದ್ ಸಿರಾಜ್ ನಿರ್ವಹಣೆಯ ಮೇಲೆ ಗಮನವಿರಲಿದ್ದು, ಅವರು ಮಿಂಚಿದರೆ ಮೊದಲ ಟೆಸ್ಟ್‌ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳಬಹುದು.

    ವೈಶಿಷ್ಟ್ಯ-ಬೆರಗುಗಳ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts