More

    ಮಾಲ್ಡೀವ್ಸ್​ ಹಡಗಿನಿಂದ ತೈಲ ಸೋರಿಕೆ ತಡೆಗೆ ಭಾರತ ನೆರವು

    ನವದೆಹಲಿ: ಮಾರಿಷಸ್​ನ ಆಗ್ನೇಯ ಕರಾವಳಿಯಲ್ಲಿ ಕಳೆದ ತಿಂಗಳಿಂದ ಕೆಟ್ಟು ನಿಂತಿರುವ ನೌಕೆಯಿಂದ ತೈಲ ಸೋರಿಕೆಯಾಗುತ್ತಿರುವುದನ್ನು ತಡೆಯಲು ಭಾರತ ನೆರವಿನ ಹಸ್ತ ಚಾಚಿದೆ. ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ಕಳಿಸಿರುವುದಾಗಿ ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ.

    ವಾಯು ಪಡೆಯ (ಐಎಎಫ್) ವಿಮಾನವೊಂದರಲ್ಲಿ 30 ಟನ್​ಗೂ ಹೆಚ್ಚು ತೂಕದ ತಾಂತ್ರಿಕ ಉಪಕರಣಗಳು ಹಾಗೂ ಸಲಕರಣೆಗಳನ್ನು ದ್ವೀಪ ದೇಶಕ್ಕೆ ಕಳಿಸಲಾಗಿದೆ. ಓಶಿಯನ್ ಬೂಮ್್ಸ, ರಿವರ್ ಬೂಮ್್ಸ, ಡಿಸ್ಕ್ ಸ್ಕಿಮ್ಮರ್, ಹೆಲಿ ಸ್ಕಿಮ್ಮರ್ ಮೊದಲಾದ ಸಲಕರಣೆಗಳನ್ನು ತೈಲ ಸೋರಿಕೆ ತಡೆಯಲು ಕಳಿಸಲಾಗಿದೆ. ತೈಲ ಸೋರಿಕೆ ತಡೆ ನಿಯಂತ್ರಣದಲ್ಲಿ ಪರಿಣತರಾಗಿರುವ ಕರಾವಳಿ ರಕ್ಷಣಾ ಪಡೆಯ ಹತ್ತು ತಂತ್ರಜ್ಞರು ಕೂಡ ಮಾರಿಷಸ್​ಗೆ ನೆರವಾಗಲು ಧಾವಿಸಿದ್ದಾರೆ.

    ಜಪಾನ್​ನ ವಿ. ವಕಾಷಿಯೊ ಹೆಸರಿನ ನೌಕೆ ಹವಳದ ಬಂಡೆಗೆ (ಕೋರಲ್ ರೀಫ್) ಡಿಕ್ಕಿ ಹೊಡೆದು ಜುಲೈ 25ರಿಂದ ನಿಂತಿದೆ. ಈಗಾಗಲೇ ಸುಮಾರು 1 ಸಾವಿರ ಟನ್ ಇಂಧನ ಸೋರಿದ್ದು ಜಲಚರಗಳಿಗೆ ಹಾನಿ ಸಂಭವಿಸುವ ಅಪಾಯ ಎದುರಾಗಿದೆ.

    ಕಡತಗಳಿಗೆ ಸಹಿ ಹಾಕಲೆಂದೆ ಐಎಎಸ್ ಅಧಿಕಾರಿಯಾದೆ; ಅಪ್ಪನ ಕನಸು ನನಸಾದ ಸಾರ್ಥಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts