More

    ಭಾರತದಲ್ಲಿ ರಷ್ಯಾದ ಆಯುಧಗಳೇ ಯಾಕೆ ಹೆಚ್ಚು ಗೊತ್ತಾ?

    ಕ್ಯಾನ್ಬೆರ್ರಾ: ‘ಪಾಶ್ಚಿಮಾತ್ಯ ದೇಶಗಳು ತೋರಿಸಿದ ನಿರ್ಲಕ್ಷ್ಯದಿಂದ ಭಾರತದಲ್ಲಿ ರಷ್ಯನ್​ ಆಯುಧಗಳ ಸಂಖ್ಯೆ ಅನೇಕ ದಶಕಗಳಲ್ಲಿ ಬೆಳೆಯುತ್ತಾ ಬಂದಿದೆ’ ಎಂದು ಭಾರತೀಯ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಆಷ್ಟ್ರೇಲಿಯಾದ ಕ್ಯಾನ್ಬೆರ್ರಾದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಮರು ಉತ್ತರ ನೀಡಿದರು.

    ರಷ್ಯಾ-ಯುಕ್ರೇನ್ ಯುದ್ಧ ಆರಂಭ ಆದ ಮೇಲೆ ರಷ್ಯಾದಿಂದ ಏನನ್ನೂ ಖರೀದಿಸದಂತೆ ಅಮೇರಿಕಾ ಹಾಗೂ ಪಾಶ್ಚಿಮಾತ್ಯ ದೇಶಗಳು ನಿರ್ಭಂಧ ವಿಧಿಸಿದ್ದರು. ಇದ್ಯಾವುದಕ್ಕೂ ಕ್ಯಾರೆ ಅನ್ನದ ಭಾರತ ನಿರಂತರವಾಗಿ ರಷ್ಯಾದಿಂದ ತೈಲ ಹಾಗೂ ಯುದ್ಧೋಪಕರಣಗಳನ್ನು ಖರೀದಿಸುತ್ತಿದೆ. ಇದನ್ನು ಕಟುವಾಗಿ ಪಾಶ್ಚಿಮಾತ್ಯ ದೇಶಗಳು ಟೀಕಿಸುತ್ತಿದ್ದವು.

    ‘ನಮ್ಮಲ್ಲಿ ಅನೇಕ ಕಾರಣಗಳಿಂದ ಇಂದು ರಷ್ಯಾ ಹಾಗೂ ಸೋವಿಯತ್​ ಮೂಲದ ಆಯುಧಗಳ ಸಂಗ್ರಹವಿದೆ. ಇದು ಯುದ್ಧೋಪಕರಣಗಳು ಪ್ರತಿ ಸಾರಿ ಉತ್ತಮ ಫಲಿತಾಂಶ ನೀಡುತ್ತಿದ್ದವು ಎಂದಲ್ಲ. ಪಾಶ್ಚಿಮಾತ್ಯ ದೇಶಗಳು ಅನೇಕ ದಶಕಗಳ ಕಾಲ ನಮಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿಲ್ಲ.’ ಎಂದು ಜೈಶಂಕರ್ ಟಾಂಗ್​ ನೀಡಿದರು. ಇತ್ತೀಚೆಗಷ್ಟೇ ಭಾರತ ರಷ್ಯಾದಿಂದ ಎಸ್​-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts