More

    ಟ್ವಿಟರ್ ಕಂಪನಿಗೆ ಎಚ್ಚರಿಕೆ ನೀಡಿದ ಭಾರತ..!

    ನವದೆಹಲಿ: ಭಾರತದ ಸಾರ್ವಭೌಮತ್ವ ಹಾಗೂ ಐಕ್ಯತೆಗೆ ಧಕ್ಕೆ ತರುವಂಥ ಯಾವುದೇ ಕೆಲಸ ಮಾಡುವುದು ಖಂಡಿತ ಸ್ವೀಕಾರಾರ್ಹವಲ್ಲ ಎಂದಿರುವ ಕೇಂದ್ರ ಸರ್ಕಾರ, ಟ್ವಿಟರ್ ಕಂಪನಿಗೆ ಖಡಕ್ ಎಚ್ಚರಿಕೆಯನ್ನೇ ನೀಡಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವಿಟರ್​ ಸಿಇಒ ಜಾಕ್​ ಡಾರ್ಸೆ ಅವರಿಗೆ ಪತ್ರ ಬರೆದಿದೆ.

    ಭಾರತದ ನಕಾಶೆಯನ್ನು ತಪ್ಪಾಗಿ ತೋರಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟ್ವಿಟರ್​ಗೆ ಈ ಸೂಚನೆ ನೀಡಿದೆ. ಜಮ್ಮು-ಕಾಶ್ಮೀರದಲ್ಲಿನ ಲೇಹ್​ಅನ್ನು ಟ್ವಿಟರ್​ ಜಿಯೊ ಟ್ಯಾಗ್ ರಿಪಬ್ಲಿಕ್​ ಆಫ್​ ಚೈನಾ ಎಂದು ತೋರಿಸಿತ್ತು. ಇಂಥ ಪ್ರಯತ್ನಗಳು ಟ್ವಿಟರ್ ಗೌರವಕ್ಕೆ ಧಕ್ಕೆ ತರುತ್ತದೆ ಎಂದಿರುವ ಐಟಿ ಸೆಕ್ರೆಟರಿ ಅಜಯ್​ ಸ್ವಾನೆ, ಪತ್ರ ಮೂಲಕ ಎಚ್ಚರಿಕೆ ನೀಡಿದ್ದಾರೆ.

    ಲೇಹ್​ ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ನ ಹೆಡ್​ ಕ್ವಾರ್ಟರ್​. ಹಾಗೇ ಲಡಾಖ್​ ಹಾಗೂ ಜಮ್ಮು-ಕಾಶ್ಮೀರ ಎರಡೂ ಭಾರತದ ಅವಿಭಾಜ್ಯ ಅಂಗಗಳು ಎಂದು ಅವರು ಟ್ವಿಟರ್​ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    Cheap essay writing service
    by u/Dutehoff in essayscammers

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts