More

    ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರಂಥ ಪ್ರಧಾನಿಯ ಅನುಪಸ್ಥಿತಿ ಕಾಡುತ್ತಿದೆ- ರಾಹುಲ್ ಗಾಂಧಿ

    ಬೆಂಗಳೂರು: ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರಂಥ ಪ್ರಧಾನಮಂತ್ರಿಯ ಅನುಪಸ್ಥಿತಿ ಕಾಡುತ್ತಿದೆ. ಅವರ ಪ್ರಾಮಾಣಿಕತೆ, ಸಭ್ಯತೆ ಮತ್ತು ಸಮರ್ಪಣೆಯ ಭಾವ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಟ್ವೀಟ್ ಮಾಡಿದ್ದಾರೆ.

    ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಂದು 88ನೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶುಭಹಾರೈಸಿದ ರಾಹುಲ್ ಗಾಂಧಿ, ಮೇಲಿನ ಅನಿಸಿಕೆ ಹಂಚಿಕೊಂಡಿದ್ದಾರೆ. ಡಾ.ಸಿಂಗ್ ಅವರು ಯುಪಿಎ ಆಡಳಿತದ ಎರಡು ಅವಧಿ (2004-2014)ಗೆ ಪ್ರಧಾನಿಯಾಗಿ ಕೆಲಸ ಮಾಡಿದ್ದರು.

    ಇದೇ ರೀತಿ ಕಾಂಗ್ರೆಸ್ ಪಕ್ಷದ ಟ್ವಿಟರ್ ಹ್ಯಾಂಡಲ್​ನಲ್ಲಿ 2.47 ನಿಮಿಷದ ವಿಡಿಯೋವನ್ನೂ ಅಪ್ಲೋಡ್ ಮಾಡಲಾಗಿದ್ದು, ಡಾ.ಸಿಂಗ್ ಅವರ ಜೀವನ ಚಿತ್ರಣವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಮೂರು ಸಾಲಿನ ವಿವರಣೆಯೂ ಜತೆಗಿದೆ. ಅದು ಹೀಗಿದೆ- ಉನ್ನತಿಯೆಡಗಿನ ಅವರ ಪ್ರಯಾಣದಲ್ಲಿ ಶತಕೋಟಿ ಜನರನ್ನೂ ಅವರು ಜತೆಗೆ ಕೊಂಡೊಯ್ದರು. ಜಗತ್ತಿನ ಅತ್ಯಂತ ಸಮರ್ಥ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಕುರಿತ ಡಾ.ಸಿಂಗ್ ಅವರ ದೃಷ್ಟಿಕೋನದಲ್ಲಿ ರಾಜೀ ವಿಚಾರವೇ ಇಲ್ಲ. ಏಳು ಮತ್ತು ಬೀಳುಗಳ ನಡುವೆ ಭಾರತವನ್ನು ಮುನ್ನಡೆಸಿದ ಈ ಶ್ರೇಷ್ಠ ಪುತ್ರನಿಗೆ ದೇಶ ಎಂದಿಗೂ ಋಣಿಯಾಗಿರುತ್ತದೆ.

    ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts