More

    ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಗಳಿಸಿದ ಭಾರತ

    ವಿಶ್ವಸಂಸ್ಥೆ: 2021-22ನೇ ಅವಧಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. ಈ ಮೂಲಕ ಇನ್ನು ಇನ್ನು ಎರಡು ವರ್ಷಗಳ ಅವಧಿಗೆ ಭಾರತ ಈ ಸ್ಥಾನದಲ್ಲಿ ಇರಲಿದೆ.

    193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಪರವಾಗಿ 184 ಮತಗಳು ಬಿದ್ದಿವೆ. ಭಾರತದ ಜತೆಗೆ, ನಾರ್ವೆ, ಮೆಕ್ಸಿಕೋ ಹಾಗೂ ಐರ್ಲೆಂಡ್​ಗಳೂ ಚುನಾವಣೆಯಲ್ಲಿ ಗೆಲುವು ಸಾಧಿಸಿವೆ. ನಾರ್ವೆಗೆ 130, ಐರ್ಲೆಂಡಿಗೆ 128, ಕೆನಡಾಗೆ 108, ಮೆಕ್ಸಿಕೋಗೆ 187 ಮತಗಳು ಬಿದ್ದಿವೆ. ಆದರೆ ಕೆನಡಾ ಸೋಲು ಕಂಡಿದೆ.

    ನಿನ್ನೆ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಡೆದ ಚುನಾವಣೆಯಲ್ಲಿ 192 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು. ಭಾರತ ಆಯ್ಕೆಯಾಗಲು 128 ರಾಷ್ಟ್ರಗಳ ಬೆಂಬಲ ಬೇಕಾಗಿತ್ತು. ಆದರೆ, ಅತ್ಯಧಿಕ ಸಂಖ್ಯೆಯಲ್ಲಿ ರಾಷ್ಟ್ರಗಳು ಮತ ಹಾಕಿದವು.

    ಇದನ್ನೂ ಓದಿ: ಹುತಾತ್ಮ 20 ಯೋಧರಿಗೆ ಶ್ರದ್ಧಾಂಜಲಿ ; ಶಾಸಕ ಜ್ಯೋತಿಗಣೇಶ್ ನೇತೃತ್ವದಲ್ಲಿ ಪುಷ್ಪನಮನ

    ಚೀನಾ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ ಕಾಯಂ ಸದಸ್ಯ ರಾಷ್ಟ್ರಗಳಾಗಿದ್ದು, ಎಸ್ಟೋನಿಯಾ, ನೈಜರ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟುನೀಶಿಯಾ ಮತ್ತು ವಿಯೆಟ್ನಾಂ ಕಾಯಂ ಅಲ್ಲದ ಅಂದರೆ ತಾತ್ಕಾಲಿಕ ಸದಸ್ಯ ರಾಷ್ಟ್ರಗಳಾಗಿವೆ.

    ಈ ಹಿಂದೆ ಅನೇಕ ಬಾರಿ ಭಾರತಕ್ಕೆ ಈ ಸ್ಥಾನಮಾನ ದೊರೆತಿದೆ. 1950-51, 1967-68, 1972-73, 1977-78, 1984-85, 1991-92 ಮತ್ತು 2011-12ರಲ್ಲಿ ಭಾರತ ಆಯ್ಕೆಯಾಗಿತ್ತು.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸತ್ವ ಪಡೆಯಲು ನೆರವಾದ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್‌ ಷಾ ಟ್ವಿಟರ್​ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ಸದಸ್ಯತ್ವಕ್ಕಾಗಿ ಜಾಗತಿಕ ಸಮುದಾಯವು ತೋರಿದ ಅಗಾಧ ಬೆಂಬಲಕ್ಕೆ ನಾನು ಅಬಾರಿಯಾಗಿದ್ದಾನೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಭಾರತ ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ಜಾಗತಿಕ ಶಾಂತಿ, ಭದ್ರತೆ ಮತ್ತು ಸಮಾನತೆಯನ್ನು ಉತ್ತೇಜಿಸಲು ಒಂದಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಿಯವರ ಶಕ್ತಿಯುತ ಹಾಗೂ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ವಸುದೈವ ಕುಟುಂಬಕಂ ಎಂಬ ಮಂತ್ರವನ್ನ ಎತ್ತಿ ಹಿಡಿಯಲಿದೆ, ಜತೆ ವಿಶ್ವದ ಶಾಂತಿ ಮತ್ತು ಸಮೃದ್ದಿಗೆ ಕೆಲಸ ಮಾಡಲಿದೆ ಎಂದು ಗೃಹ ಮಂತ್ರಿ ಅಮಿತ್‌ ಷಾ ಹೇಳಿದ್ದಾರೆ.
    ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 5 ಕಾಯಂ ಸದಸ್ಯ ರಾಷ್ಟ್ರಗಳು ಮತ್ತು 10 ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳು ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts