More

    ಹುತಾತ್ಮ 20 ಯೋಧರಿಗೆ ಶ್ರದ್ಧಾಂಜಲಿ ; ಶಾಸಕ ಜ್ಯೋತಿಗಣೇಶ್ ನೇತೃತ್ವದಲ್ಲಿ ಪುಷ್ಪನಮನ

    ತುಮಕೂರು: ಲಡಾಖ್ ಗಡಿಭಾಗದಲ್ಲಿ ಚೀನಾ ಅಪ್ರಚೋದಿತ ದಾಳಿಗೆ ಪ್ರತ್ಯುತ್ತರ ನೀಡುವಾಗ ಹುತಾತ್ಮರಾದ ಹವಾಲ್ದಾರ್ ಪಳನಿ, ಕರ್ನಲ್ ಸಂತೋಷ್ ಬಾಬು, ಅಂಕುಶ್ ಠಾಕೂರ್ ಸೇರಿ 20 ಭಾರತೀಯ ಯೋಧರಿಗೆ ನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ನಗರದ ಟೌನ್‌ಹಾಲ್ ಬಳಿಯ ಶಾಸಕರ ಕಚೇರಿ ಮುಂಭಾಗ ಬುಧವಾರ ಸಂಜೆ ಶಾಸಕ ಜ್ಯೋತಿಗಣೇಶ್ ನೇತೃತ್ವದಲ್ಲಿ ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮೂಲಕ ಅಂತಿಮನಮನ ಸಲ್ಲಿಸಲಾಯಿತು.

    ಜ್ಯೋತಿಗಣೇಶ್ ಮಾತನಾಡಿ, ಚೀನಾ ಕುತಂತ್ರ ಬುದ್ಧಿಯಿಂದ ಇಡೀ ವಿಶ್ವಕ್ಕೆ ಕರೊನಾ ವೈರಸ್ ಹರಡಿ ಆರ್ಥಿಕತೆಯನ್ನು ನೆಲಕಚ್ಚುವಂತೆ ಮಾಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಲುಕೆರೆದುಕೊಂಡು ಬಂದು ತಂಟೆ ಮಾಡುತ್ತಿದ್ದು, ಅಶಾಂತಿ ಸೃಷ್ಟಿಸಿದೆ. ಲಡಾಖ್ ಗಡಿಯಲ್ಲಿ ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ನಮ್ಮ ದೇಶದ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲು ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕಿದೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಸದೃಢವಾಗಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ಜಗತ್ತು ನಮ್ಮ ಕಡೆ ತಿರುಗಿ ನೋಡುತ್ತಿವೆ. ಶತೃರಾಷ್ಟ್ರಗಳನ್ನು ಸದೆಬಡಿಯುವಲ್ಲಿ ನಮ್ಮ ದೇಶದ ಸೇನೆ ಸಶಕ್ತವಾಗಿದೆ. ನಮ್ಮ ಸೇನೆ ಚೀನಾವನ್ನು ಎದುರಿಸಲು ಸರ್ವಶಕ್ತವಾಗಿದ್ದು, ಚೀನಾದ ವಿರುದ್ಧ ವಿಜಯ ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ
    ಎಸ್.ಶಿವಪ್ರಸಾದ್‌ಹೇಳಿದರು.

    ಉಪಮೇಯರ್ ಶಶಿಕಲಾ, ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ವಿಷ್ಣುವರ್ಧನ್, ಎಚ್.ಮಲ್ಲಿಕಾರ್ಜುನಯ್ಯ, ಕೆ.ಎಸ್.ಮಂಜುಳಾ ಆದರ್ಶ್, ಚಂದ್ರಕಲಾ, ಒಬಿಸಿ ಮೋರ್ಚಾ ಅಧ್ಯಕ್ಷ ವೇದಮೂರ್ತಿ, ಕೊಪ್ಪಲ್ ನಾಗರಾಜ್, ಟಿ.ಎಚ್. ಹನುಮಂತರಾಜು ಕಬ್ಬಡಿ ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts