More

    ಇಂಡಿಯಾ ಸೈಬರ್ ಕಾಪ್ ಪ್ರಶಸ್ತಿ ರೇಸ್‌ನಲ್ಲಿ ಕೆ.ಟಿ.ಗುರುರಾಜ್

    ಶಿವಮೊಗ್ಗ: ಇಂಡಿಯಾ ಸೈಬರ್ ಕಾಪ್ ಆಫ್ ಇಯರ್ ಪ್ರಶಸ್ತಿಯ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್ ಕ್ರೈಂ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ಸ್ಥಾನ ಪಡೆದಿದ್ದಾರೆ.
    ಸೈಬರ್ ಕ್ರೈಂ ವಿಭಾಗದಲ್ಲಿ ಕ್ಲಿಷ್ಟಕರ ಪ್ರಕರಣವನ್ನು ಅತ್ಯುತ್ತಮವಾಗಿ ಭೇದಿಸಿದ ತನಿಖಾಧಿಕಾರಿಗಳಿಗೆ ಇಂಡಿಯಾಸ್ ಸೈಬರ್ ಕಾಫ್ ಆಫ್ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷದ ಪ್ರಶಸ್ತಿಗೆ ಶಿವಮೊಗ್ಗ ಸೈಬರ್ ಠಾಣೆಯಲ್ಲಿ ತನಿಖಾಧಿಕಾರಿ ಕೆಲಸ ಮಾಡಿ ಅನೇಕ ಪ್ರಕರಣ ಭೇದಿಸಿದ್ದ ಕೆ.ಟಿ.ಗುರುರಾಜ್ ಅವರು ನಾಮನಿರ್ದೇಶನಗೊಂಡಿದ್ದಾರೆ.
    ಗುರುರಾಜ್ ಅವರು ಹುಣಸೋಡು ಸ್ಫೋಟ, ಹಿಂದು ಹರ್ಷನ ಕೊಲೆ, ಫ್ಲೆಕ್ಸ್ ಗಲಾಟೆ, ಶಂಕಿತ ಉಗ್ರರ ಕೇಸ್ ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಪ್ರಶಸ್ತಿಯ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಗೊಂಡಿದ್ದು ಶಿವಮೊಗ್ಗ ಪೊಲೀಸ್ ವಿಭಾಗಕ್ಕೆ ಹೆಮ್ಮೆಯ ಸಂಗತಿಯಾಗಿದೆ.
    ಶಿವಮೊಗ್ಗದ ಸೈಬರ್ ಕ್ರೈಂನಲ್ಲಿ ಕೆಲಸ ಮಾಡಿದ್ದ ಇನ್‌ಸ್ಪೆಕ್ಟರ್ ಗುರುರಾಜ್ ಟಫ್ ಕಾಪ್ ಎಂದೇ ಹೆಸರು ಮಾಡಿದ್ದರು. ಇತ್ತೀಚೆಗಷ್ಟೇ ಅವರನ್ನು ಕಡೂರಿಗೆ ವರ್ಗಾವಣೆ ಮಾಡಲಾಗಿತ್ತು. ಹಾಲಿ ಕಡೂರು ಪೊಲೀಸ್ ಟ್ರೈನಿಂಗ್ ಸೆಂಟರ್‌ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುರಾಜ್ ಜತೆಯಲ್ಲಿ ಮಧ್ಯಪ್ರದೇಶ ಭೋಪಾಲ್ನ ಸೈಬರ್ ಆಂಡ್ ಹೈಟೆಕ್ ಪೊಲೀಸ್ ಸ್ಟೇಷನ್ ಇನ್‌ಸ್ಪೆಕ್ಟರ್ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಜಿನ್ ಸೈಬರ್ ಪೊಲೀಸ್ ಸ್ಟೇಷನ್‌ನ ಇನ್‌ಸ್ಪೆಕ್ಟರ್ ಸುವರ್ಣ ಶಿಂಧೆ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts