More

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಂದು ಏನೇನು ಕ್ರೀಡಾಸ್ಪರ್ಧೆ, ಪದಕ ನಿರೀಕ್ಷೆ?

    ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕ್ರೀಡಾಸ್ಪರ್ಧೆಯ 6ನೇ ದಿನವಾದ ಗುರುವಾರವೂ ಯಾವುದೇ ಪದಕ ಖಚಿತವೆನಿಸುವಂಥ ಸ್ಪರ್ಧೆಗಳಿಲ್ಲ. ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ಕಣಕ್ಕಿಳಿಯಲಿದ್ದು, ಪದಕದಾಸೆ ಜೀವಂತವಿಡಲು ಹೋರಾಡಲಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಅಂತಿಮ 16ರ ಘಟ್ಟದಲ್ಲಿ ಸೆಣಸಲಿದ್ದಾರೆ. ಶೂಟಿಂಗ್‌ನಲ್ಲಿ ಭಾರತದ ಶೂಟರ್‌ಗಳು ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದು, ಶುಕ್ರವಾರದ ಫೈನಲ್‌ಗೇರುವ ಪ್ರಯತ್ನ ನಡೆಸಲಿದ್ದಾರೆ. ಹಾಕಿಯಲ್ಲಿ ಭಾರತದ ಪುರುಷರ ತಂಡ ಅರ್ಜೆಂಟೀನಾ ವಿರುದ್ಧ ಮಹತ್ವದ ಪಂದ್ಯವಾಡಲಿದೆ.

    ಭಾರತಕ್ಕೆ ಇಂದು ಕ್ರೀಡಾಸ್ಪರ್ಧೆಗಳು:

    ಶೂಟಿಂಗ್: ಬೆಳಗ್ಗೆ 5.30: ಮಹಿಳೆಯರ 25 ಮೀ. ಪಿಸ್ತೂಲ್ ಅರ್ಹತಾ ಸುತ್ತು: ರಾಹಿ ಸರ್ನೋಬಟ್, ಮನು ಭಾಕರ್ ಸ್ಪರ್ಧೆ (ಫೈನಲ್ ಶುಕ್ರವಾರ).

    ಬ್ಯಾಡ್ಮಿಂಟನ್: ಬೆಳಗ್ಗೆ 6.15: ಮಹಿಳೆಯರ ಸಿಂಗಲ್ಸ್ 16ರ ಘಟ್ಟ: ಪಿವಿ ಸಿಂಧುಗೆ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ಎದುರಾಳಿ.

    ಆರ್ಚರಿ: ಬೆಳಗ್ಗೆ 7.30: ಪುರುಷರ ವೈಯಕ್ತಿಕ ವಿಭಾಗ: ಅತನು ದಾಸ್‌ಗೆ 32ರ ಘಟ್ಟದಲ್ಲಿ ಚೀನಾ ತೈಪೆಯ ಡೆಂಗ್ ಯು-ಚೆಂಗ್ ಎದುರಾಳಿ.

    ಬಾಕ್ಸಿಂಗ್: ಬೆಳಗ್ಗೆ 8.45: ಪುರುಷರ 91+ಕೆಜಿ ವಿಭಾಗ 16ರ ಘಟ್ಟ: ಸತೀಶ್ ಕುಮಾರ್‌ಗೆ ಜಮೈಕಾದ ರಿಕಾರ್ಡೊ ಬ್ರೌನ್ ಎದುರಾಳಿ, ಮಧ್ಯಾಹ್ನ 3.35: ಮಹಿಳೆಯರ 51 ಕೆಜಿ ವಿಭಾಗ 16ರ ಘಟ್ಟ: ಮೇರಿ ಕೋಮ್‌ಗೆ ಕೊಲಂಬಿಯಾದ ಇನ್‌ಗ್ರಿಟ್ ವಲೆನ್ಸಿಯಾ ಎದುರಾಳಿ.

    ಗಾಲ್ಫ್: ಬೆಳಗ್ಗೆ 4: ಪುರುಷರ ವೈಯಕ್ತಿಕ ವಿಭಾಗದ 1ನೇ ರೌಂಡ್: ಅನಿರ್ಬನ್ ಲಹಿರಿ, ಉದಯನ್ ಮಾನೆ ಕಣಕ್ಕೆ.

    ಈಕ್ವೆಸ್ಟ್ರಿಯನ್: ಬೆಳಗ್ಗೆ 6: ಮೊದಲ ಹಾರ್ಸ್ ಇನ್ಸ್‌ಪೆಕ್ಷನ್‌ನಲ್ಲಿ ವಾದ್ ಮಿರ್ಜಾ ಭಾಗಿ.

    ಹಾಕಿ: ಬೆಳಗ್ಗೆ 6: ಪುರುಷರ ವಿಭಾಗದ ಲೀಗ್ ಪಂದ್ಯದಲ್ಲಿ ಅರ್ಜೆಂಟೀನಾ ಎದುರಾಳಿ.

    ರೋಯಿಂಗ್: ಬೆಳಗ್ಗೆ 5.20: ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ಫೈನಲ್ ಬಿ (ರ‌್ಯಾಂಕಿಂಗ್ ರೌಂಡ್, ಪದಕವಿಲ್ಲ): ಅರವಿಂದ್ ಸಿಂಗ್-ಅರ್ಜುನ್ ಲಾಲ್ ಸ್ಪರ್ಧೆ.

    ಸೈಲಿಂಗ್: ಬೆಳಗ್ಗೆ 8.35: 49ಇಆರ್ ವಿಭಾಗ: 5-6ನೇ ರೇಸ್: ಕೆಸಿ ಗಣಪತಿ-ವರುಣ್ ಠಕ್ಕರ್ ಸ್ಪರ್ಧೆ; ಬೆಳಗ್ಗೆ 8.35: 7-8ನೇ ರೇಸ್: ವಿಷ್ಣು ಸರವಣನ್ ಸ್ಪರ್ಧೆ; ಬೆಳಗ್ಗೆ 8.45: ಮಹಿಳೆಯರ ಲೇಸರ್ ರೇಡಿಯಲ್: 7-8ನೇ ರೇಸ್: ನೇತ್ರಾ ಕುಮಾನನ್ ಸ್ಪರ್ಧೆ.

    ಈಜು: ಸಂಜೆ 4.16: ಪುರುಷರ 100 ಮೀ. ಬಟರ್‌ಫ್ಲೈ ಹೀಟ್ಸ್: ಸಾಜನ್ ಪ್ರಕಾಶ್ ಸ್ಪರ್ಧೆ.

    *ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್.

    *17: ಕ್ರೀಡಾಸ್ಪರ್ಧೆಯ 6ನೇ ದಿನವಾದ ಗುರುವಾರ ಒಟ್ಟು 17 ಸ್ವರ್ಣ ಪದಕಗಳು ಪಣಕ್ಕಿವೆ. ಈಜಿನಲ್ಲಿ 5, ರೋಯಿಂಗ್‌ನಲ್ಲಿ 4, ಜುಡೋ, ಶೂಟಿಂಗ್‌ನಲ್ಲಿ ತಲಾ 2, ಫೆನ್ಸಿಂಗ್, ಕನೋಯಿಂಗ್, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಟೇಬಲ್ ಟೆನಿಸ್‌ನಲ್ಲಿ ತಲಾ 1 ಚಿನ್ನ ನಿರ್ಧಾರವಾಗಲಿದೆ.

    ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿದ್ದವಳು ಈಗ ಒಲಿಂಪಿಕ್ಸ್ ಪದಕಕ್ಕೆ ಸನಿಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts