ಅಹಮದಾಬಾದ್: ನಾಯಕ ರೋಹಿತ್ ಶರ್ಮ (60ರನ್, 51 ಎಸೆತ, 10 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ (49ಕ್ಕೆ 4) ಹಾಗೂ ವಾಷಿಂಗ್ಟನ್ ಸುಂದರ್ (30ಕ್ಕೆ 3) ಮಾರಕ ದಾಳಿ ನೆರವಿನಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. ಇದರೊಂದಿಗೆ ಸಹಸ್ರ ಏಕದಿನ ಪಂದ್ಯವನ್ನು ಗೆಲುವಿನೊಂದಿಗೆ ಸಂಭ್ರಮಿಸಿದ ಭಾರತ, 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತು. ಪೂರ್ಣ ಪ್ರಮಾಣದಲ್ಲಿ ಏಕದಿನ ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮ ಭರ್ಜರಿ ನಿರ್ವಹಣೆ ಮೂಲಕ ಕ್ರಿಕೆಟ್ ಪ್ರಿಯರ ಗಮನಸೆಳೆದರು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನಾಯಕ ರೋಹಿತ್ ಶರ್ಮ, ಪ್ರವಾಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಭಾರತದ ಬೌಲಿಂಗ್ ದಾಳಿ ಎದುರು ಸಂಪೂರ್ಣ ಮಂಕಾದ ವೆಸ್ಟ್ ಇಂಡೀಸ್ 43.5 ಓವರ್‌ಗಳಲ್ಲಿ 176 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡ 28 ಓವರ್‌ಗಳಲ್ಲಿ 4 ವಿಕೆಟ್‌ಗೆ 178 ರನ್‌ಗಳಿಸಿ ಜಯದ ನಗೆ ಬೀರಿತು.
ವೆಸ್ಟ್ ಇಂಡೀಸ್: 43.5 ಓವರ್‌ಗಳಲ್ಲಿ 176 (ಜೇಸನ್ ಹೋಲ್ಡರ್ 57, ಫ್ಯಾಬಿಯನ್ ಅಲೆನ್ 29, ಯಜುವೇಂದ್ರ ಚಾಹಲ್ 49ಕ್ಕೆ 4, ವಾಷಿಂಗ್ಟನ್ ಸುಂದರ್ 30ಕ್ಕೆ 3), ಭಾರತ: 28 ಓವರ್‌ಗಳಲ್ಲಿ 4 ವಿಕೆಟ್‌ಗೆ 178 (ರೋಹಿತ್ ಶರ್ಮ 60, ಇಶಾನ್ ಕಿಶನ್ 28, ಸೂರ್ಯಕುಮಾರ್ ಯಾದವ್ 34*, ದೀಪಕ್ ಹೂಡಾ 26*, ಅಲ್ಜಾರಿ ಜೋಸೆಫ್ 45ಕ್ಕೆ 2, ಅಕೀಲ ಹೊಸೀನ್ 46ಕ್ಕೆ 1).
That's that from the 1st ODI. #TeamIndia win their 1000th ODI by 6 wickets 👏👏
Scorecard – https://t.co/6iW0JTcEMv #INDvWI pic.twitter.com/vvFz0ftGB9
— BCCI (@BCCI) February 6, 2022