More

    ವೆಸ್ಟ್ ಇಂಡೀಸ್ ಎದುರು ಕ್ಲೀನ್‌ಸ್ವೀಪ್ ಗುರಿಯತ್ತ ಭಾರತ ; ಇಂದು 3ನೇ ಟಿ20 ಪಂದ್ಯ; ಗೆದ್ದರೆ ನಂ.1 ಪಟ್ಟ

    ಕೋಲ್ಕತ: ಪ್ರವಾಸಿ ವೆಸ್ಟ್ ಇಂಡೀಸ್ ಎದುರು ಸತತ ಎರಡನೇ ಸರಣಿಯಲ್ಲೂ ಕ್ಲೀನ್‌ಸ್ವೀಪ್ ಕನಸಿನಲ್ಲಿರುವ ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಮಾಜಿ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂಥ್‌ಗೆ 10 ದಿನ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಗೆ ರೋಹಿತ್ ಶರ್ಮ ಕೆಲವೊಂದು ಬದಲಾವಣೆಯ ಜತೆಗೆ ಪ್ರಯೋಗಗಕ್ಕೂ ಮುಂದಾಗಲಿದ್ದಾರೆ. ಶ್ರೇಯಸ್ ಅಯ್ಯರ್ ಹಾಗೂ ಋತುರಾಜ್ ಗಾಯಕ್ವಾಡ್ ಹನ್ನೊಂದರ ಬಳಗಕ್ಕೆ ಬರಲು ಸಜ್ಜಾಗಿದ್ದಾರೆ. ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡ 8 ರನ್‌ಗಳಿಂದ ವಿಂಡೀಸ್ ತಂಡವನ್ನು ರೋಚಕವಾಗಿ ಮಣಿಸಿ ಸರಣಿ ವಶಪಡಿಸಿಕೊಂಡಿತು.

    ಟೀಮ್ ನ್ಯೂಸ್:
    ಭಾರತ
    ಕೊಹ್ಲಿ-ರಿಷಭ್ ಅಲಭ್ಯತೆಯಿಂದಾಗಿ ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ವೆಂಕಟೇಶ್ ಅಯ್ಯರ್ ಬದಲಿಗೆ ದೀಪಕ್ ಹೂಡಾ ಆಡಬಹುದು. ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ಮೊಹಮದ್ ಸಿರಾಜ್, ಆವೇಶ್ ಖಾನ್, ಕುಲದೀಪ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

    ವೆಸ್ಟ್ ಇಂಡೀಸ್:
    ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ. ಎರಡೂ ಪಂದ್ಯಗಳಲ್ಲಿ ಬೆಂಚು ಕಾಯಿಸಿರುವ ಆಟಗಾರರಿಗೆ ಅವಕಾಶ ನೀಡುವುದಾದರೆ ಡೊಮಿನಿಕ್ ಡ್ರಾಕ್ಸ್ ಹಾಗೂ ಹೇಡೆನ್ ವಾಲ್ಷ್ ಸ್ಥಾನ ಪಡೆಯಬಹುದು.

    ಪಂದ್ಯ ಆರಂಭ: ರಾತ್ರಿ 7
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts