More

    ಮತ್ತೊಂದು ಸರಣಿ ಗೆಲುವಿನ ತವಕದಲ್ಲಿ ಭಾರತ, ಇಂದು 2ನೇ ಟಿ20 ಪಂದ್ಯ

    ಕೊಲಂಬೊ: ಭರ್ಜರಿ ನಿರ್ವಹಣೆಯೊಂದಿಗೆ ಟಿ20 ಸರಣಿಯಲ್ಲೂ ಶುಭಾರಂಭ ಕಂಡಿರುವ ಭಾರತ ತಂಡ, ಸತತ 2ನೇ ಸರಣಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಎರಡನೇ ಹಣಾಹಣಿಯಲ್ಲಿ ಶಿಖರ್ ಧವನ್ ಸಾರಥ್ಯದ ಯುವ ಬಳಗ ಜಯ ದಾಖಲಿಸಿ ಸರಣಿ ಒಲಿಸಿಕೊಳ್ಳುವ ಉತ್ಸಾಹದಲ್ಲಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ 38 ರನ್‌ಗಳಿಂದ ಜಯ ದಾಖಲಿಸಿರುವ ಭಾರತ ತಂಡ, 2ನೇ ಕದನಕ್ಕೆ ಕೆಲವೊಂದು ಬದಲಾವಣೆಯೊಂದಿಗೆ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಪೃಥ್ವಿ ಷಾ ಹಾಗೂ ಸೂರ್ಯಕುಮಾರ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಈ ಜೋಡಿಗೆ ವಿಶ್ರಾಂತಿ ನೀಡಿದರೆ ಕನ್ನಡಿಗ ದೇವದತ್ ಪಡಿಕಲ್ ಹಾಗೂ ಋತುರಾಜ್ ಗಾಯಕ್ವಾಡ್ ಕಣಕ್ಕಿಳಿಯಲಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ಕಡೇ ಟೂರ್ನಿ ಇದಾಗಿದೆ.

    ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ!

    ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದುವರೆಗೂ ನಿರೀಕ್ಷಿತ ನಿರ್ವಹಣೆ ತೋರಲು ವಿಫಲರಾಗಿದ್ದು, ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಿದೆ. ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯಜುವೇಂದ್ರ ಚಾಹಲ್ ಹಾಗೂ ವರುಣ್ ಚಕ್ರವರ್ತಿ ಒಳಗೊಂಡ ಬೌಲಿಂಗ್ ಪಡೆ ಲಂಕಾಗೆ ಮತ್ತೊಮ್ಮೆ ಕಡಿವಾಣ ಹಾಕಲು ಸಜ್ಜಾಗಿದೆ. ಮತ್ತೊಂದೆಡೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಆತಿಥೇಯ ಶ್ರೀಲಂಕಾ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ. 2019ರ ಅಕ್ಟೋಬರ್‌ನಿಂದ ಆಡಿರುವ 14 ಟಿ20 ಪಂದ್ಯಗಳ ಪೈಕಿ ಏಕೈಕ ಗೆಲುವು ಕಂಡಿದೆ. ಅನನುಭವಿ ಪಡೆ ಹೊಂದಿರುವ ಶ್ರೀಲಂಕಾಗೆ ತಂಡದ ಸಂಯೋಜನೆಯೇ ದೊಡ್ಡ ತಲೆನೋವಾಗಿದೆ.

    ಇದನ್ನೂ ಓದಿ: ಪ್ರಿಯಾ ಮಲಿಕ್ ಅಭಿನಂದಿಸಿ ಟ್ರೋಲ್ ಆದ ಗಣ್ಯರ ಟ್ವೀಟ್

    * ಟೀಮ್ ನ್ಯೂಸ್:
    ಭಾರತ: ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಪೃಥ್ವಿ ಷಾ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿಗೆ ವಿಶ್ರಾಂತಿ ನೀಡಿದರಷ್ಟೇ ತಂಡದಲ್ಲಿ ಕೆಲ ಬದಲಾವಣೆ ಕಾಣಬಹುದು. ಇಲ್ಲವಾದರೆ ಬಹುತೇಕ ಮೊದಲ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ. ಮೊದಲ ಅವಕಾಶದಲ್ಲಿ ಕೊಂಚ ದುಬಾರಿಯಾದರೂ ಗಮನ ಸೆಳೆದಿರುವ ವರುಣ್ ಚಕ್ರವರ್ತಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ.

    * ಶ್ರೀಲಂಕಾ:
    ಮೊದಲ ಹಣಾಹಣಿಯಲ್ಲಿ ಆಶೆನ್ ಬಂಡಾರ ಮಧ್ಯಮ ಕ್ರಮಾಂಕದಲ್ಲಿ ರನ್‌ಗಳಿಸಲು ಪರದಾಡಿದ್ದರು. ಹನ್ನೊಂದರ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಅನುಮಾನ ಮೂಡಿಸಿದೆ. ಪುಟಿದೇಳುವ ನಿರೀಕ್ಷೆಯಲ್ಲಿರುವ ಲಂಕಾ ಪಡೆಯಲ್ಲಿ ಕೆಲವೊಂದು ಬದಲಾವಣೆ ಕಾಣಬಹುದು.

    *ಪಂದ್ಯ ಆರಂಭ: ರಾತ್ರಿ 8.00
    *ನೇರಪ್ರಸಾರ: ಸೋನಿ ನೆಟ್‌ವರ್ಕ್

    ಟಿ20ಯಲ್ಲೂ ಶುಭಾರಂಭ ಕಂಡ ಭಾರತ, ಶ್ರೀಲಂಕಾ ಎದುರು 38 ರನ್ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts