More

    ಭಾರತ ಎದುರು ಮೊದಲ ಟಿ20 ಸರಣಿ ಜಯಿಸಿದ ಶ್ರೀಲಂಕಾ

    ಕೊಲಂಬೊ: ಅನನುಭವಿ ಬ್ಯಾಟಿಂಗ್ ಪಡೆಯ ನಿಸ್ತೇಜ ನಿರ್ವಹಣೆಗೆ ಬೆಲೆತೆತ್ತ ಭಾರತದ ಯುವ ಪಡೆ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡಕ್ಕೆ 7 ವಿಕೆಟ್‌ಗಳಿಂದ ಶರಣಾಯಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಶಿಖರ್ ಧವನ್ ಸಾರಥ್ಯದ ತಂಡ 1-2ರಿಂದ ಮುಗ್ಗರಿಸಿತು. ಪ್ರಮುಖರ ಅಲಭ್ಯತೆಯಿಂದಾಗಿ ಕಡೇ 2 ಪಂದ್ಯಗಳಲ್ಲಿ ಯುವಕರಿಗೆ ಹೆಚ್ಚು ಮಣೆ ಹಾಕಿದರೂ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಲರಾದರು. ಮತ್ತೊಂದೆಡೆ, ಲಂಕಾ ತಂಡ ಭಾರತದ ಎದುರು ಮೊಟ್ಟಮೊದಲ ಟಿ20 ಸರಣಿ ಮತ್ತು ಕಳೆದ 12 ವರ್ಷಗಳಲ್ಲಿ ಮೊದಲ ದ್ವಿಪಕ್ಷೀಯ ಸರಣಿ ಗೆದ್ದ ಸಾಧನೆ ಮಾಡಿತು. ವನಿಂದು ಹಸರಂಗ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಡೆದರು.

    ಇದನ್ನೂ ಓದಿ: ಅಮೆರಿಕದ ಸ್ಟಾರ್ ಅಥ್ಲೀಟ್ ಆಸೆಯನ್ನು ಭಗ್ನಗೊಳಿಸಿದ ಕರೊನಾ…

    ಪ್ರೇಮದಾಸ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶಿಖರ್ ಧವನ್ ಪಡೆ, ವನಿಂದು ಹಸರಂಗ (9ಕ್ಕೆ 4) ಮಾರಕ ದಾಳಿಗೆ ನಲುಗಿ 8 ವಿಕೆಟ್‌ಗೆ 81 ರನ್ ಪೇರಿಸಲಷ್ಟೇ ಶಕ್ತವಾಯಿತು. ಬಳಿಕ ಶ್ರೀಲಂಕಾ ತಂಡ 14.3 ಓವರ್‌ಗಳಲ್ಲಿ 3 ವಿಕೆಟ್‌ಗೆ 82 ರನ್ ಪೇರಿಸಿ ಜಯದ ನಗೆ ಬೀರಿತು. ರಾಹುಲ್ ಚಹರ್ (15ಕ್ಕೆ 3) ಮಾರಕ ದಾಳಿ ನಡುವೆಯೂ ಲಂಕಾ ತಂಡ ಅಪಾಯಕ್ಕೆ ಎಡೆಮಾಡಿಕೊಡದೆ ಸುಲಭವಾಗಿ ಗೆಲುವಿನ ದಡ ಸೇರಿತು. ಏಕದಿನ ಸರಣಿಯಲ್ಲಿ 2-1ರಿಂದ ಗೆದ್ದಿದ್ದ ಭಾರತ, ಸೋಲಿನೊಂದಿಗೆ ಲಂಕಾ ಪ್ರವಾಸ ಮುಗಿಸಿತು.

    ಇದನ್ನೂ ಓದಿ: ಒಲಿಂಪಿಕ್ಸ್ ರೋಯಿಂಗ್‌ನಲ್ಲಿ ಕೊವ್ರೇಷಿಯಾ ಸಹೋದರರ ಅಪರೂಪದ ಸಾಧನೆ, 

    ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 81 (ಋತುರಾಜ್ 13, ಧವನ್ 0, ಪಡಿಕಲ್ 9, ಸ್ಯಾಮ್ಸನ್ 0, ಭುವೆನೇಶ್ವರ್ 16, ಕುಲದೀಪ್ 23*, ಹಸರಂಗ 9ಕ್ಕೆ 4, ಶನಕ 20ಕ್ಕೆ 2, ರಮೇಶ್ ಮೆಂಡಿಸ್ 13ಕ್ಕೆ 1, ಚಮೀರ 16ಕ್ಕೆ 1). ಶ್ರೀಲಂಕಾ: 14.3 ಓವರ್‌ಗಳಲ್ಲಿ 3 ವಿಕೆಟ್‌ಗೆ 82 (ಧನಂಜಯ ಡಿಸಿಲ್ವ 23*, ಮಿನೋದ್ ಭಾನುಕ 18, ವನಿಂದು ಹಸರಂಗ 14*, ರಾಹುಲ್ ಚಹರ್ 15ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts