More

    ದಕ್ಷಿಣ ಆಫ್ರಿಕಾ ಎದುರು ಟೀಮ್ ಇಂಡಿಯಾಗೆ ವೈಟ್‌ವಾಷ್ ; ಏಕದಿನ ಸರಣಿಯಲ್ಲಿ ಗೆಲುವಿಲ್ಲ

    ಕೇಪ್‌ಟೌನ್: ಕೆಳ ಕ್ರಮಾಂಕದ ಬ್ಯಾಟರ್ ದೀಪಕ್ ಚಹರ್ (54 ರನ್,34 ಎಸೆತ, 5 ಬೌಂಡರಿ, 2 ಸಿಕ್ಸರ್) ಕಡೇ ಹಂತದಲ್ಲಿ ಗೆಲುವಿಗಾಗಿ ಹೋರಾಡಿದರೂ ದಕ್ಷಿಣ ಆಫ್ರಿಕಾದ ಸಂಘಟಿತ ದಾಳಿಗೆ ನಲುಗಿದ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿತು. ಕಡೇ ಏಕದಿನ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸುವ ಯತ್ನದಲ್ಲಿದ್ದ ಕನ್ನಡಿಗ ಕೆಎಲ್ ರಾಹುಲ್ ಪಡೆ 0-3 ವೈಟ್‌ವಾಷ್ ಮುಖಭಂಗ ಅನುಭವಿಸಿತು. ದಿಗ್ಗಜ ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಮೊದಲ ವಿದೇಶಿ ಪ್ರವಾಸದಲ್ಲೇ ಭಾರತ ಮುಗ್ಗರಿಸಿತು. ಈ ಮುನ್ನ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಭಾರತ 1-2ರಿಂದ ಸೋತಿತ್ತು.

    ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, ಕ್ವಿಂಟನ್ ಡಿ ಕಾಕ್ (124 ರನ್, 130 ಎಸೆತ, 12 ಬೌಂಡರಿ, 2 ಸಿಕ್ಸರ್) ಅಕರ್ಷಕ ಶತಕದ ನಡುವೆಯೂ ಕೆಳಕ್ರಮಾಂಕದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ (59ಕ್ಕೆ 3) ದಾಳಿಗೆ ನಲುಗಿ 49.5 ಓವರ್‌ಗಳಲ್ಲಿ 287ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಭಾರತ ತಂಡ ಸಂಘಟಿತ ಹೋರಾಟದ ನಡುವೆಯೂ 49.2 ಓವರ್‌ಗಳಲ್ಲಿ 283 ರನ್‌ಗಳಿಗೆ ಆಲೌಟ್ ಆಯಿತು.

    ದಕ್ಷಿಣ ಆಫ್ರಿಕಾ: 49.5 ಓವರ್‌ಗಳಲ್ಲಿ 287 (ಕ್ವಿಂಟನ್ ಡಿ ಕಾಕ್ 124, ರಾಸೀ ವ್ಯಾನ್ ಡರ್ ಡುಸೆನ್ 52, ಡೇವಿಡ್ ಮಿಲ್ಲರ್ 39, ಡ್ವೈನ್ ಪ್ರಿಟೋರಿಯಸ್ 20, ಪ್ರಸಿದ್ಧ ಕೃಷ್ಣ 59ಕ್ಕೆ 3, ಜಸ್‌ಪ್ರೀತ್ ಬುಮ್ರಾ 52ಕ್ಕೆ 2, ದೀಪಕ್ ಚಹರ್ 53ಕ್ಕೆ 2), ಭಾರತ: 49.2 ಓವರ್‌ಗಳಲ್ಲಿ 283 (ರಾಹುಲ್ 9, ಶಿಖರ್ ಧವನ್ 61, ವಿರಾಟ್ ಕೊಹ್ಲಿ 65, ಶ್ರೇಯಸ್ ಅಯ್ಯರ್ 26, ಸೂರ್ಯಕುಮಾರ್ ಯಾದವ್ 39, ದೀಪಕ್ ಚಹರ್ 54, ಲುಂಗಿ ಎನ್‌ಗಿಡಿ 58ಕ್ಕೆ 3, ಡ್ವೈನ್ ಪ್ರಿಟೋರಿಯಸ್ 54ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts