More

    ರಿಷಭ್ ಪಂತ್ ಶತಕದಾಟ ; ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್ ಸವಾಲೆಸೆದ ಭಾರತ ತಂಡ

    ಕೇಪ್‌ಟೌನ್: ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (100*ರನ್, 139 ಎಸೆತ, 6 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ಮೂಲಕ ಸಿಡಿಸಿದ ಸಾಹಸಿಕ ಶತಕದ ಬಲದಿಂದ ಭಾರತ ತಂಡ 3ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ ಸ್ಪರ್ಧಾತ್ಮಕ ಸವಾಲು ನೀಡಿದೆ. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ದಿಟ್ಟ ಉತ್ತರವನ್ನೇ ನೀಡಿದರೂ, ದಿನದ ಕೊನೆಯಲ್ಲಿ ಜೊಹಾನ್ಸ್‌ಬರ್ಗ್ ಗೆಲುವಿನ ಹೀರೋ ಡೀನ್ ಎಲ್ಗರ್ ವಿಕೆಟ್ ಕಳೆದುಕೊಂಡು ಹಿನ್ನಡೆ ಎದುರಿಸಿದೆ. ಇದರಿಂದಾಗಿ ಪಂದ್ಯದ 4ನೇ ದಿನದಾಟ ತೀವ್ರ ಕುತೂಹಲ ಕೆರಳಿಸಿದೆ. ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವಿಗೆ 8 ವಿಕೆಟ್ ಅಗತ್ಯವಿದ್ದರೆ, ಹರಿಣಗಳ ಗೆಲುವಿಗೆ ಇನ್ನೂ 111 ರನ್ ಬೇಕಿದೆ. ಪಂದ್ಯದಲ್ಲಿ ಸದ್ಯ 2 ದಿನಗಳ ಆಟ ಬಾಕಿ ಉಳಿದಿದ್ದರೂ, ಶುಕ್ರವಾರವೇ ಸರಣಿ ವಿಜೇತರ ನಿರ್ಣಯವಾಗುವುದು ಪಕ್ಕಾ ಎನಿಸಿದೆ.

    ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುರುವಾರ 2 ವಿಕೆಟ್‌ಗೆ 57 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ, ಪಂತ್ ಶತಕದಾಟದ ಜತೆಗೆ ನಾಯಕ ಕೊಹ್ಲಿ (29 ರನ್, 143 ಎಸೆತ, 4 ಬೌಂಡರಿ) ಮಂದಗತಿ ನಿರ್ವಹಣೆ ನಡುವೆಯೂ ಮಾರ್ಕೋ ಜಾನ್ಸೆನ್ (36ಕ್ಕೆ 4), ಕಗಿಸೊ ರಬಾಡ (53ಕ್ಕೆ 3) ಹಾಗೂ ಲುಂಗಿ ಎನ್‌ಗಿಡಿ (21ಕ್ಕೆ 3) ಮಾರಕ ದಾಳಿಗೆ ನಲುಗಿ 67.3 ಓವರ್‌ಗಳಲ್ಲಿ 198 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 212 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ದಿನದಂತ್ಯಕ್ಕೆ 2 ವಿಕೆಟ್‌ಗೆ 101 ರನ್ ಪೇರಿಸಿದೆ.

    ಭಾರತ: 223 ಮತ್ತು 198 (ರಿಷಭ್ ಪಂತ್ 100*, ವಿರಾಟ್ ಕೊಹ್ಲಿ 29, ಕಗಿಸೊ ರಬಾಡ 53ಕ್ಕೆ3, ಮಾರ್ಕೋ ಜಾನ್ಸೆನ್ 36ಕ್ಕೆ 4, ಲುಂಗಿ ಎನ್‌ಗಿಡಿ 21ಕ್ಕೆ 3), ದಕ್ಷಿಣ ಆಫ್ರಿಕಾ: 210 ಮತ್ತು 29.4 ಓವರ್‌ಗಳಲ್ಲಿ 2 ವಿಕೆಟ್‌ಗೆ 101 (ಕೀಗನ್ ಪೀಟರ್ಸೆನ್ 48*, ಡೀನ್ ಎಲ್ಗರ್ 30, ಏಡನ್ ಮಾರ್ಕ್ರಮ್ 16, ಜಸ್‌ಪ್ರೀತ್ ಬುಮ್ರಾ 29ಕ್ಕೆ 1, ಶಮಿ 22ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts