More

    ಟೆಂಬಾ-ಡುಸೆನ್ ಶತಕ; ಭಾರತಕ್ಕೆ ನಿರಾಸೆ ; ಕೆಎಲ್ ರಾಹುಲ್ ಪಡೆಗೆ 31 ರನ್ ಸೋಲು

    ಪಾರ್ಲ್: ಮಧ್ಯಮ ಕ್ರಮಾಂಕದ ಬ್ಯಾಟರ್ ರಾಸೀ ವಾನ್ ಡರ್ ಡುಸೆನ್ (129*ರನ್, 96 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ಟೆಂಬಾ ಬವುಮಾ (110 ರನ್, 143 ಎಸೆತ, 8 ಬೌಂಡರಿ) ಜೋಡಿಯ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ 31 ರನ್‌ಗಳಿಂದ ಮಣಿಯಿತು. ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಯತ್ನದಲ್ಲಿರುವ ಭಾರತ, 3 ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿನ್ನಡೆ ಕಂಡಿತು. ಜೊಹಾನ್ಸ್‌ಬರ್ಗ್ ಟೆಸ್ಟ್ ಬಳಿಕ ಏಕದಿನ ತಂಡದ ಸಾರಥ್ಯ ವಹಿಸಿದ ಮೊದಲ ಪಂದ್ಯದಲ್ಲೂ ಕನ್ನಡಿಗ ಕೆಎಲ್ ರಾಹುಲ್ ನಿರಾಸೆ ಕಂಡರು.

    ಬೊಲ್ಯಾಂಡ್ ಪಾರ್ಕ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, ಬವುಮಾ-ಡುಸೆನ್ ಜೋಡಿ 4ನೇ ವಿಕೆಟ್‌ಗೆ ಪೇರಿಸಿದ 204 ರನ್ ಜತೆಯಾಟದ ಲವಾಗಿ 4 ವಿಕೆಟ್‌ಗೆ 296 ರನ್ ಕಲೆಹಾಕಿತು. ಪ್ರತಿಯಾಗಿ ಭಾರತ ತಂಡ, ಶಿಖರ್ ಧವನ್ (79 ರನ್, 84 ಎಸೆತ, 10 ಬೌಂಡರಿ) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ (51 ರನ್, 63 ಎಸೆತ, 3 ಬೌಂಡರಿ) ಕೊಂಚ ಪ್ರತಿರೋಧದ ನಡುವೆಯೂ ಭಾರತ 8 ವಿಕೆಟ್‌ಗೆ 265 ರನ್‌ಗಳಿಸಲಷ್ಟೇ ಶಕ್ತವಾಯಿತು. ಕಡೇ ಹಂತದಲ್ಲಿ ಶಾರ್ದೂಲ್ ಠಾಕೂರ್ (50*ರನ್, 43 ಎಸೆತ, 1 ಬೌಂಡರಿ) ಏಕಾಂಗಿ ಹೋರಾಟದಿಂದ ತಂಡದ ಸೋಲಿನ ಅಂತರ ತಗ್ಗಿಸಿದರು.

    ದಕ್ಷಿಣ ಆಫ್ರಿಕಾ: 4 ವಿಕೆಟ್‌ಗೆ 296 (ಟೆಂಬಾ ಬವುಮಾ 110, ರಾಸೀ ವ್ಯಾನ್ ಡರ್ ಡುಸೆನ್ 129*, ಕ್ವಿಂಟನ್ ಡಿ ಕಾಕ್ 27, ಜಸ್‌ಪ್ರೀತ್ ಬುಮ್ರಾ 48ಕ್ಕೆ2), ಭಾರತ: 8 ವಿಕೆಟ್‌ಗೆ 265 (ಶಿಖರ್ ಧವನ್ 79, ವಿರಾಟ್ ಕೊಹ್ಲಿ 51, ಶಾರ್ದೂಲ್ ಠಾಕೂರ್ 50*, ಲುಂಗಿ ಎನ್‌ಗಿಡಿ 64ಕ್ಕೆ 2, ತಬರೇಜ್ ಶಮ್ಸಿ 52ಕ್ಕೆ2, ಆಡಿಲ್ ೆಹ್ಲುಕ್ವಾವೊ 26ಕ್ಕೆ2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts