More

    ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ದಿನದಾಟ ರದ್ದು

    ಸೆಂಚುರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಭಾರಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ದಿನದ ಆರಂಭದಲ್ಲಿ ತುಂತುರು ಮಳೆ ಬಿದ್ದರೂ ಮಧ್ಯಾಹ್ನದ ವೇಳೆಗೆ ಇದರ ಅಬ್ಬರ ಜೋರಾಗಿಯೇ ಇತ್ತು. ಎರಡೂ ಭಾರಿ ಮಳೆ ನಿಂತಾಗ ಸ್ಥಳೀಯ ಕಾಲಮಾನ (ಬೆಳಗ್ಗೆ 11.30 ಹಾಗೂ ಮಧ್ಯಾಹ್ನ 12.45ಕ್ಕೆ) ಅಂಪೈರ್ ಪಿಚ್ ಪರಿಶೀಲಿಸಿ ತೀರ್ಮಾನಿಸಿದರು. ಆದರೆ, ಪದೆ ಪದೆ ಮಳೆ ಬಿದ್ದ ಹಿನ್ನೆಲೆಯಲ್ಲಿ ಅಂಪೈರ್‌ಗಳು ಮಧ್ಯಾಹ್ನ 1.55ರ ವೇಳೆಗೆ ದಿನದಾಟ ರದ್ದುಗೊಳಿಸಿದರು. ನಿಗದಿತ ಅವಧಿಗೂ ಮೊದಲೇ ಭೋಜನ ವಿರಾಮ ಘೋಷಿಸಲಾಗಿತ್ತು.

    * ಡ್ರಾ ಹಾದಿಯಲ್ಲಿ ಪಂದ್ಯ?
    ಸ್ಥಳೀಯ ಹವಾಮಾನ ಇಲಾಖೆ ಪ್ರಕಾರ, ಮೂರನೇ ಹಾಗೂ ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿಯುಂಟು ಮಾಡುವುದಿಲ್ಲವಾದರೂ ಅಂತಿಮ ದಿನದಾಟಕ್ಕೂ ಮಳೆ ಕಾಡುವ ಸಾಧ್ಯತೆಗಳಿವೆ. ಹೀಗಾಗಿ ಪಂದ್ಯದ ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮುಂದಿನ ಮೂರು ದಿನಗಳ ಕಾಲ ತಲಾ 98 ಓವರ್‌ಗಳ ಆಟ ನಡೆಯುವ ಸಾಧ್ಯತೆಗಳಿವೆ. ‘ಸೆಂಚುರಿಯನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಬಿದ್ದ ಮಳೆಯಿಂದಾಗಿ ದಿನದಾಟ ರದ್ದುಗೊಂಡಿತು’ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

    ಮೊದಲ ದಿನದಾಟದ ಅಂತ್ಯದಲ್ಲಿ ಭಾರತ ತಂಡ ಉತ್ತಮ ಸ್ಥಿತಿ ಕಾಯ್ದುಕೊಂಡಿತ್ತು. ಕನ್ನಡಿಗರಾದ ಕೆಎಲ್ ರಾಹುಲ್ (122*ರನ್, 248 ಎಸೆತ, 17 ಬೌಂಡರಿ, 1 ಸಿಕ್ಸರ್) ಹಾಗೂ ಮಯಾಂಕ್ ಅಗರ್ವಾಲ್ (60) ಜೋಡಿಯ ಅದ್ಭುತ ನಿರ್ವಹಣೆಯಿಂದ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 272 ರನ್ ಪೇರಿಸಿದೆ. ಶತಕ ರಾಹುಲ್ ಜತೆಗೂಡಿ ಮಾಜಿ ಉಪನಾಯಕ ಅಜಿಂಕ್ಯ ರಹಾನೆ (40*ರನ್, 81 ಎಸೆತ, 8 ಬೌಂಡರಿ) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದ ಭಾರತ ತಂಡ ಎರಡನೇ ದಿನದಾಟದಲ್ಲಿ ಸುಲಭವಾಗಿ 400 ರಿಂದ 450 ರನ್ ಪೇರಿಸುವ ಅವಕಾಶವಿತ್ತು. ಬೃಹತ್ ಮೊತ್ತ ಪೇರಿಸುವ ಮೂಲಕ ಆತಿಥೇಯ ತಂಡದ ಮೇಲೆ ಒತ್ತಡ ಹೇರುವ ಅವಕಾಶ ಹೊಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts