More

    ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಎದುರು ಭಾರತಕ್ಕೆ ಐತಿಹಾಸಿಕ ಜಯ

    ಲಂಡನ್: ವೇಗದ ಬೌಲರ್‌ಗಳ ಕರಾರುವಾಕ್ ದಾಳಿಯಿಂದ ಭಾರತ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು 151 ರನ್‌ಗಳಿಂದ ಐತಿಹಾಸಿಕ ಗೆಲುವಿನ ನಗೆ ಬೀರಿತು. ಟೀಮ್ ಇಂಡಿಯಾ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ಮೈದಾನದಲ್ಲಿ ತನ್ನ 3ನೇ ಟೆಸ್ಟ್ ಹಾಗೂ 7 ವರ್ಷಗಳ ಬಳಿಕ ಜಯ ದಾಖಲಿಸಿತು. ಈ ಮೂಲಕ ಭಾರತ ತಂಡ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತ ನೀಡಿದ 272 ರನ್ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ (33ಕ್ಕೆ 3), ಇಶಾಂತ್ ಶರ್ಮ (13ಕ್ಕೆ 2) ಹಾಗೂ ಮೊಹಮದ್ ಸಿರಾಜ್ (32ಕ್ಕೆ 4) ದಾಳಿಗೆ ನಲುಗಿ 51.5 ಓವರ್‌ಗಳಲ್ಲಿ 120 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಈ ಮುನ್ನ 1986 ಮತ್ತು 2014ರಲ್ಲಿ ಲಾರ್ಡ್ಸ್‌ನಲ್ಲಿ ಗೆಲುವು ದಾಖಲಿಸಿತ್ತು. ವೈಯಕ್ತಿಕ ಮೊತ್ತ 2 ರನ್‌ಗಳಿಸಿದ್ದ ವೇಳೆ ವಿರಾಟ್ ಕೊಹ್ಲಿ ಕ್ಯಾಚ್ ಬಿಟ್ಟ ಪರಿಣಾಮ ಜೀವದಾನ ಗಿಟ್ಟಿಸಿಕೊಂಡ ಜೋಸ್ ಬಟ್ಲರ್ (25ರನ್, 96 ಎಸೆತ, 3 ಬೌಂಡರಿ) ಮಂದಗತಿ ಬ್ಯಾಟಿಂಗ್ ನಡೆಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲರಾದರು.

    ಇದಕ್ಕೂ ಮೊದಲು 6 ವಿಕೆಟ್‌ಗೆ 181 ರನ್‌ಗಳಿಂದ ಅಂತಿಮ ದಿನದಾಟ ಮುಂದುವರಿಸಿದ ಭಾರತ ತಂಡ, ಮೊಹಮದ್ ಶಮಿ (56*ರನ್, 70 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಜಸ್‌ಪ್ರೀತ್ ಬುಮ್ರಾ (34*ರನ್, 64 ಎಸೆತ, 3 ಬೌಂಡರಿ) ಜೋಡಿ 9ನೇ ವಿಕೆಟ್‌ಗೆ ಪೇರಿಸಿದ 89 ರನ್ ಫಲವಾಗಿ 8 ವಿಕೆಟ್‌ಗೆ 298 ರನ್‌ಗಳಿಸಿ 2ನೇ ಇನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಿತು. ಭಾರತ ಮೊದಲ ಇನಿಂಗ್ಸ್ 364 ರನ್‌ಪೇರಿಸಿದರೆ, ಇಂಗ್ಲೆಂಡ್ 391 ರನ್‌ಗಳಿಸಿ 27 ರನ್ ಮುನ್ನಡೆ ಸಾಧಿಸಿತ್ತು. ಕನ್ನಡಿಗ ಕೆಎಲ್ ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ಭಾರತ: 364 ಮತ್ತು 8 ವಿಕೆಟ್‌ಗೆ 298 ಡಿಕ್ಲೇರ್ (ಮೊಹಮದ್ ಸಿರಾಜ್ 56*, ಜಸ್‌ಪ್ರೀತ್ ಬುಮ್ರಾ 34*, ಮಾರ್ಕ್ ವುಡ್ 51ಕ್ಕೆ 3, ಒಲಿ ರಾಬಿನ್‌ಸನ್ 45ಕ್ಕೆ 2, ಮೊಯಿನ್ ಅಲಿ 84ಕ್ಕೆ 2), ಇಂಗ್ಲೆಂಡ್: 391 ಮತ್ತು 51.5 ಓವರ್‌ಗಳಲ್ಲಿ 120 (ಜೋಸ್ ಬಟ್ಲರ್ 25, ಜೋ ರೂಟ್ 33, ಮೊಹಮದ್ ಸಿರಾಜ್ 32ಕ್ಕೆ 4, ಜಸ್‌ಪ್ರೀತ್ ಬುಮ್ರಾ 33ಕ್ಕೆ 3, ಇಶಾಂತ್ ಶರ್ಮ 13ಕ್ಕೆ 2).


    https://twitter.com/BCCI/status/1427333886778888208?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts